ಅವರ ‘ವಿಂಗ್ಸ್ ಆಫ್ ಫೈರ್’ ಪುಸ್ತಕ ಇಂದಿಗೂ ಅನೇಕ ಯುವಕರಿಗೆ ಕನಸುಗಳ ಹಾರಾಟವನ್ನು ಕಲಿಸುತ್ತಿದೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ಸಾಮಾನ್ಯರ ನಡುವೆ ಸಾಮಾನ್ಯನಾಗಿ ಕಾರ್ಯನಿರ್ವಹಿಸಿದ ಜನಪರ ರಾಷ್ಟ್ರಪತಿ, ವಿಜ್ಞಾನಿ, ಸಮಾಜ ಸೇವಕ, ಬರಹಗಾರ, ಶಿಕ್ಷಣ ತಜ್ಞ ಮತ್ತು ಅದ್ಭುತ ವ್ಯಕ್ತಿತ್ವವುಳ್ಳ ಓರ್ವ ಉತ್ತಮ ಪ್ರಜೆ ಅಬ್ದುಲ್ ಕಲಾಂ ಅವರ ಕೊಡುಗೆ ಮತ್ತು ಅವರ ಜೀವನ ಎಂದೆಂದಿಗೂ ಸ್ಪೂರ್ತಿದಾಯಕ.