ಶಿಲಾಯುಗದಲ್ಲಿ ಮನುಷ್ಯರಿಗೆ ಬಟ್ಟೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ನಮ್ಮ ಪೂರ್ವಜರು ಬಟ್ಟೆ ಇಲ್ಲದೆ ಎಲ್ಲಿಯೂ ತಿರುಗುತ್ತಿದ್ದರು. ನಂತರ ಅವರು ಬಟ್ಟೆಯಿಂದ ದೇಹವನ್ನು ಮುಚ್ಚಿಕೊಳ್ಳಲು ಕಲಿತರು. ಆದರೆ ಈಗಿನ ಜನರು ಬಟ್ಟೆಯ ಶೈಲಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಾರೆ. ಶಿಲಾಯುಗದಂತೆ ಬಟ್ಟೆಯಿಲ್ಲದೆ ತಿರುಗಾಡಲು ಇಷ್ಟಪಡುವ ಕೆಲವು ಜನರು ಇಂದಿಗೂ ಭೂಮಿಯ ಮೇಲೆ ಇದ್ದಾರೆ. ಅಂತಹವರಿಗಾಗಿ ಇಲ್ಲಿದೆ ನೋಡಿ 6 ಸ್ಥಳಗಳು..
ಫ್ರಾನ್ಸ್‌ನ ನೇಕೆಡ್ ಸಿಟಿ ಎಂದು ಕರೆಯಲ್ಪಡುವ ಕ್ಯಾಪ್ ಡಿ ಆಗ್ಡೆ, ಜನರು ತಮಗೆ ಬೇಕಾದುದನ್ನು ಧರಿಸುತ್ತಾರೆ ಅಥವಾ ಧರಿಸದನೇ ಇರುತ್ತಾರೆ. ಇಲ್ಲಿ ಜನರು ಬಟ್ಟೆ ಇಲ್ಲದೆ ರಸ್ತೆಯಲ್ಲಿ ಓಡಾಡಬಹುದು. ಮಾಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಎಲ್ಲೆಂದರಲ್ಲಿ ಜನರು ಬಟ್ಟೆ ಇಲ್ಲದೆ ತಿರುಗುತ್ತಾರೆ ಮತ್ತು ಇದು ನಗರದ ನಿಯಮಗಳ ಪ್ರಕಾರ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಇದಕ್ಕೆ ಯಾವುದೇ ನಿರ್ಬಂಧವಿಲ್ಲ.
ಅಮೆರಿಕದ ಫ್ಲೋರಿಡಾ ಪ್ರಾಂತ್ಯದಲ್ಲಿ ವಿಶೇಷವಾದ ಬೀಚ್ ಇದ್ದು, ಅಲ್ಲಿ ಜನರು ಬಟ್ಟೆ ಇಲ್ಲದೆಯೇ ಕಾಣಸಿಗುತ್ತಾರೆ. ಇದನ್ನು ನೇಕೆಡ್ ಬೀಚ್ ಎಂದು ಸಹ ಕರೆಯಲಾಗುತ್ತದೆ, ಆದರೆ ಇದರ ನಿಜವಾದ ಹೆಸರು ಹಾಲೋವರ್ ಬೀಚ್. ಈ ಬೀಚ್‌ನಲ್ಲಿ ಬಟ್ಟೆಗಳನ್ನು ಧರಿಸುವುದು ಅಥವಾ ಧರಿಸದಿರುವುದು ನಿಮ್ಮ ಆಯ್ಕೆಯಾಗಿದೆ. ಇಲ್ಲಿ ಹೆಚ್ಚಿನ ಜನರು ಬಟ್ಟೆ ಇಲ್ಲದೆ ಅಥವಾ ನಾಮಮಾತ್ರದ ಬಟ್ಟೆಯಲ್ಲೇ ಇರುತ್ತಾರೆ.
ಆಸ್ಟ್ರಿಯಾದಲ್ಲಿ ನೇಕೆಡ್ ಆರ್ಟ್ ಫೆಸ್ಟಿವಲ್ ಅನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಪ್ರಪಂಚದಾದ್ಯಂತದ ಜನರು ಈ ಫೆಸ್ಟಿವಲ್ಗೆ ಬರುತ್ತಾರೆ. ಇಲ್ಲಿ ಅವರು ಬಟ್ಟೆ ಇಲ್ಲದೆ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಅವರ ಮೈಮೇಲೆ ಗಾಢ ಬಣ್ಣಗಳ ಪೇಂಟಿಂಗ್ ಸಹ ಇರುತ್ತದೆ. ಅವರೇ ವಾಕಿಂಗ್ ಕ್ಯಾನ್ವಾಸ್ ಇದ್ದಂತೆ. ಈ ರೀತಿ ಬಟ್ಟೆ ಇಲ್ಲದೆ ಇಲ್ಲಿಗೆ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ.
ಇದರ ಹೊರತಾಗಿ, ಯುಕೆಯ ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಸ್ಪೀಲ್‌ಪ್ಲಾಟ್ಜ್ ಎಂಬ ಗ್ರಾಮವು ಬಟ್ಟೆ ಇಲ್ಲದೆ ಬದುಕುವ ಜನರಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನರು ಬಹಳ ಶ್ರೀಮಂತರು ಮತ್ತು ವಿದ್ಯಾವಂತರು. ಆದರೆ ಅವರು ಬಟ್ಟೆ ಧರಿಸುವುದಿಲ್ಲ. 1929 ರಿಂದ ಇಲ್ಲಿ ಈ ಸಂಪ್ರದಾಯ ನಡೆಯುತ್ತಿದೆ. ಊರ ಹೊರಗೆ ಹೋದಾಗ ಬಟ್ಟೆ ಹಾಕಿಕೊಂಡರೂ ಊರೊಳಗೆ ಬಟ್ಟೆ ಇಲ್ಲದೆ ತಿರುಗಾಡುತ್ತಾರೆ.