ವಾರಣಾಸಿಯ ಅಸ್ಸಿ ಘಾಟ್, ಆಗ್ರಾದ ಸಿಕಂದರಾ ಫೋರ್ಟ್, ಗೇಟ್ವೇ ಆಫ್ ಇಂಡಿಯಾ, ಮುಂಬೈನ ಮರೈನ್ ಡ್ರೈವ್, ಗೋವಾದ ಮಿರಾಮಾರ್ ಸರ್ಕಲ್, ಪಾಟ್ನಾದ ಗಂಗಾ ಘಾಟ್, ಹೈದರಾಬಾದ್ನ ನೆಕ್ಲೇಸ್ ರಸ್ತೆ, ಬೆಂಗಳೂರಿನ ಲಾಲ್ ಬಾಗ್ ಮುಂತಾದ ಐಕಾನಿಕ್ ಮತ್ತು ಗದ್ದಲದ ಸ್ಥಳಗಳಲ್ಲಿ ಸ್ವಯಂಸೇವಕರು ಮಣ್ಣು ಉಳಿಸಿ ಫಲಕಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು. , ಚೆನ್ನೈನ ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಬೆಂಬಲ ವ್ಯಕ್ತವಾಯಿತು.
100 ದಿನಗಳ ಬೈಕ್ ರ‍್ಯಾಲಿ ಯಾವುದೇ ಪ್ರತಿಭಟನೆ ಅಥವಾ ಒತ್ತಡ ಹೇರುವ ತಂತ್ರಗಾರಿಕೆ ಅಲ್ಲ. ಬದಲಾಗಿ ನಾಗರಿಕರ ಇಚ್ಛಾಶಕ್ತಿಯ ಅಭಿವ್ಯಕ್ತಿಯ ಉದ್ದೇಶವಾಗಿದೆ. ಈ ನೂರು ದಿನಗಳ ಬೈಕ್ ರ‍್ಯಾಲಿ ಸಂದರ್ಭದಲ್ಲಿ ನಿಮ್ಮಲ್ಲಿರುವ ಪ್ರತಿಯೊಬ್ಬರು ದಿನದಲ್ಲಿ ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಮಣ್ಣಿನ ಬಗ್ಗೆ ಮಾತನಾಡಬೇಕು. ಇಡೀ ವಿಶ್ವವೇ 100 ದಿನಗಳವರೆಗೆ ಮಣ್ಣಿನ ಬಗ್ಗೆ ಮಾತನಾಡಬೇಕೆಂದು ಹೇಳುವ ಮೂಲಕ ಸದ್ಗುರು ಅವರು ʼಮಣ್ಣನ್ನು ಉಳಿಸಿ ಆಂದೋಲನʼವನ್ನು ಆರಂಭಿಸಿದ್ದಾರೆ.
ಖ್ಯಾತ ಸಂರಕ್ಷಣಾವಾದಿ ಡಾ. ಜೇನ್ ಗುಡಾಲ್, ದಲೈ ಲಾಮಾ ಮತ್ತು ವಿಶ್ವ ಆರ್ಥಿಕ ವೇದಿಕೆ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರಂತಹ ಜಾಗತಿಕ ನಾಯಕರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಮಾರ್ಕ್ ಬೆನಿಯೋಫ್ (ಸೇಲ್ಸ್ಫೋಷ್ರ್), ದೀಪಕ್ ಚೋಪ್ರಾ, ಟೋನಿ ರಾಬಿಸ್ಸ್, ಮ್ಯಾಥ್ಯೂ ಹೇಡನ್, ಕ್ರಿಸ್ ಗೈಲ್, ಜೂಹಿ ಚಾವ್ಲಾ ಮತ್ತು ಸಂಜೀವ್ ಸನ್ಯಾಲ್ರಂತಹ ವಿವಿಧ ಕ್ಷೇತ್ರಗಳ ಪ್ರಮುಖರು ಈ ಚಳುವಳಿಯನ್ನು ಬೆಂಬಲಿಸಿದ್ದಾರೆ.
"ಮಣ್ಣನ್ನು ಉಳಿಸುವ ಕಾರ್ಯ ಎಲ್ಲರಿಂದಲೂ ಆಗಬೇಕಿದೆ. ಈಗಾಗಲೇ ಉತ್ತಮ ಮಣ್ಣಿನ ಕೊರತೆ ಇಡೀ ಜಗತ್ತಿಗೆ ಕಾಡುತ್ತಿದೆ. ಅಲ್ಲದೇ ಸದ್ಯ ಇರುವ ಮಣ್ಣು ಕಡಿಮೆಯಾಗುತ್ತ ಬರುತ್ತಿದ್ದು, ಇದನ್ನು ಉಳಿಸಿಕೊಳ್ಳುವ ಅಗತ್ಯತೆಯ ಜೊತೆ ಉತ್ತಮ ಮಣ್ಣಿನ ಸಂರಕ್ಷಣೆ ದಾರಿ ಹುಡುಕಬೇಕಿದೆ. ಹಾಗಾದ್ರೆ ಮಾತ್ರ ಮುಂದಿನ ದಿನಗಳಲ್ಲಿ ಆಹಾರಕ್ಕೆ ಉಂಟಾಗುವ ಸಮಸ್ಯೆಯನ್ನು ತಡೆಗಟ್ಟಬಹುದು" ಎಂದು ಸದ್ಗುರು ಹೇಳಿದ್ದಾರೆ.
ಈ ಹಿಂದೆ ಕಾವೇರಿ ಕೂಗು ಅಭಿಯಾನ ನಡೆಸಿದ್ದ ಸದ್ಗುರು ದೊಡ್ಡ ಮಟ್ಟದಲ್ಲಿ ಪರಿಸರ ಪ್ರಿಯರ ಗಮನ ಸೆಳೆದಿದ್ದರು. ನದಿಗಳ ತಪ್ಪಲಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ನದಿ ಪಾತ್ರ ಉಳಿಸುವ ಕಾರ್ಯಕ್ಕೂ ಸದ್ಗುರು ಚಾಲನೆ ನೀಡಿದ್ದರು. ಈಶಾ ಫೌಂಡೇಷನ್ ಮೂಲಕ ಸಮಾಜಮುಖಿಯಾದ ಹಾಗೂ ಪರಿಸರ ಪರವಾದ ಕಾಳಜಿಯ ಅಭಿಯಾನಗಳ ಮೂಲಕ ಗಮನ ಸೆಳೆದಿರುವ ಸದ್ಗುರು, ಆಧ್ಯಾತ್ಮ ಮಾತ್ರವಲ್ಲ ಪರಿಸರ ಪ್ರೇಮವನ್ನೂ ತಮ್ಮ ಅನುಯಾಯಿಗಳಲ್ಲಿ ತುಂಬಲು ಈ ಮೂಲಕ ಶ್ರಮಿಸುತ್ತಿದ್ದಾರೆ.