Chicken Tikka Masala: ನಾನ್ ವೆಜ್ ಪ್ರಿಯರ ಬಾಯಿ ರುಚಿ ತಣಿಸಿದ್ದ ಖ್ಯಾತ ಉದ್ಯಮಿ ಇನ್ನಿಲ್ಲ, 77ನೇ ವಯಸ್ಸಲ್ಲಿ ನಿಧನರಾದ 'ಚಿಕನ್ ಟಿಕ್ಕಾ ಮಸಾಲ' ದೊರೆ ಅಲಿ ಅಹ್ಮದ್ ಅಸ್ಲಂ
ಬ್ರಿಟನ್ನ ಅಚ್ಚುಮೆಚ್ಚಿನ ಅಡುಗೆ ಎಂದು ಪರಿಗಣಿಸಲಾದ 'ಚಿಕನ್ ಟಿಕ್ಕಾ ಮಸಾಲಾ' ಅನ್ನು ಕಂಡುಹಿಡಿದ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂಬುದು ವಿಷಾಧನೀಯ ಸಂಗತಿ.
ಚಿಕನ್ ಅಂತ ಹೇಳಿದ ಕೂಡಲೇ ನಾನ್ವೆಜ್ ಪ್ರಿಯರಿಗೆ ಬಾಯಲ್ಲಿ ನೀರೂರುವುದು ಸಾಮಾನ್ಯ. ಇನ್ನು ಒಂದಷ್ಟು ಜನರಿಗೆ ಬ್ರ್ಯಾಂಡೆಡ್ ಕಂಪೆನಿಯ ಮಸಾಲೆಗಳನ್ನು ಹಾಕಿ ಚಿಕನ್ಗಳನ್ನು ತಯಾರಿಸಿದರೆ ಮಾತ್ರ ಇಷ್ಟಪಡುತ್ತಾರೆ.
2/ 7
ತೇಜು ಮಸಾಲ, ಮಸಾಲ ಕಿಚನ್, ಎವರೆಸ್ಟ್ ಚಿಕನ್ ಮಸಾಲ, ಒರಿಕಾ ಚಿಕನ್ ಮಸಾಲ ಈ ರೀತಿಯಾದ ಹಲವಾರು ಪ್ರಖ್ಯಾತ ಕಂಪೆನಿಗಳಲ್ಲಿ ಚಿಕನ್ ಟಿಕ್ಕ ಮಸಾಲೆ ಕೂಡ ಒಂದು. ಹಲವಾರು ನಾನ್ವೆಜ್ ಪ್ರಿಯರು ಈ ಚಿಕನ್ ಟಿಕ್ಕ ಮಸಾಲೆಯನ್ನು ಹಲವು ದಿನಗಳಿಂದ ತಿಂದು ಇಷ್ಟಪಡುತ್ತಾ ಬರುತ್ತಿದ್ದಾರೆ.
3/ 7
ಬ್ರಿಟನ್ನ ಅಚ್ಚುಮೆಚ್ಚಿನ ಅಡುಗೆ ಎಂದು ಪರಿಗಣಿಸಲಾದ 'ಚಿಕನ್ ಟಿಕ್ಕಾ ಮಸಾಲಾ' ಅನ್ನು ಕಂಡುಹಿಡಿದ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂಬುದು ವಿಷಾಧನೀಯ ಸಂಗತಿ. ಒಂದೊಳ್ಳೆ ಮಸಾಲೆ ಕಂಪೆನಿಯನ್ನು ಕಟ್ಟಿ, ಅದನ್ನು ಅಭಿವೃದ್ಧಿ ಪಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
4/ 7
ಇವರು 1970 ರ ದಶಕದಲ್ಲಿ ತಮ್ಮ ರೆಸ್ಟೋರೆಂಟ್ ಶಿಶ್ ಮಹಲ್ನಲ್ಲಿ ಟೊಮೆಟೊ ಸೂಪ್ನ ಟಿನ್ ನಿಂದ ತಯಾರಿಸಿದ ಸಾಸ್ ಅನ್ನು ಮೊದಲು ಖಾದ್ಯವನ್ನು ಕಂಡುಹಿಡಿದರು, ಅದಾಗ ಬಾರಿ ಫೇಮಸ್ ಏನು ಆಗಿರಲಿಲ್ಲ. 2009 ರಲ್ಲಿ ತಮ್ಮ ಹೊಟೇಲ್ನಲ್ಲಿ ಚಿಕನ್ ತಿಂದ ಗ್ರಾಹಕರೊಬ್ಬರು "ಚಿಕನ್ ತುಂಬಾ ಡ್ರೈ ಆಗಿದೆ, ಒಣಗಿದಂತೆ ಇದೆ" ಎಂದು ವಿಮರ್ಶೆಯನ್ನು ನೀಡಿದ್ದರು.
5/ 7
ಇದಾದ ಬಳಿಕ ಮೊಸರು, ಕ್ರೀಮ್ ಮತ್ತು ಇವರೇ ತಯಾರಿಸು ಮಸಾಲೆಗಳನ್ನು ಒಳಗೊಂಡಿರುವ ಸಾಸ್ನೊಂದಿಗೆ ಚಿಕನ್ ಟಿಕ್ಕಾವನ್ನು ಬೇಯಿಸಲು ಆರಂಭ ಮಾಡಿದರು. ಇದಾದ ಬಳಿಕ ಗ್ರಾಹಕರಿಂದ ಒಂದೊಳ್ಳೆ ಪ್ರತಿಕ್ರಿಯೆ ಬರಲು ಆರಂಭವಾಯಿತು.
6/ 7
ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರಾದ ಅಲಿ, 1964 ರಲ್ಲಿ ಗ್ಲಾಸ್ಗೋದ ಪಶ್ಚಿಮ ತುದಿಯಲ್ಲಿ ಶಿಶ್ ಮಹಲ್ ಅನ್ನು ತರೆದರು. ಚಿಕ್ಕ ಹುಡುಗನಾಗಿದ್ದಾಗಲೇ ತನ್ನ ಕುಟುಂಬದೊಂದಿಗೆ ಗ್ಲಾಸ್ಗೋಗೆ ತೆರಳಿ ಉದ್ಯೋಗವನ್ನು ಆರಂಭಿಸಿದರು. ಹೀಗೆ ಆರಂಭವಾದ ಚಿಕನ್ ಮಸಾಲೆಯು ತುಂಬಾ ಚೆನ್ನಾಗಿ ಮಾರುಕಟ್ಟೆಗಳಲ್ಲಿ ಹೆಸರು ಪಡೆಯಲು ಆರಂಭವಾಯಿತು.
7/ 7
ನೂರಾರು ಬಾರಿ ಏಳುಬೀಳುಗಳು, ಕಾಂಪಿಟೇಷನ್ಗಳ ನಡುವ ತಮ್ಮ ಮಸಾಲೆ ಅನ್ನು ವಿಭಿನ್ನವಾಗಿ ಜನರಿಗೆ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಸ್ವಂತ ಹಣವನ್ನು ಹೂಡಿಕೆ ಮಾಡಿದ್ದಾರೆ ಜೊತೆಗೆ ಕೈ ಸುಟ್ಟುಕೊಂಡಿದ್ದಾರೆ ಕೂಡ. ಮುಂದಿನ ದಿನಗಳಲ್ಲಿ ನಾನಾ ಕಡೆಗಳಿಂದ ಈ ಮಸಾಲೆಗೆ ಬೇಡಿಕೆ ಬರುತ್ತದೆ. ಹೀಗೆ ಚಿಕನ್ ಟಿಕ್ಕ ಮಸಾಲೆ ಪ್ರಖ್ಯಾತಿ ಹೊಂದಲು ಆರಂಭವಾಯ್ತು.