ಭಾರತ ಹಲವು ಸಂಸ್ಕೃತಿಗಳ ತವರೂರು. ಹಲವಾರು ಸಾಧುಗಳನ್ನು ಕಾಣಬಹುದು. ಖಾವಿ ಬಟ್ಟೆ ಧರಿಸಿ ಕೊರಳಲ್ಲಿ ರುದ್ರಾಕ್ಷಿ ಮತ್ತು ರುಂಡಮಾಲೆ ಧರಿಸಿ ಧ್ಯಾನಕ್ಕೆ ಕೂತ ಅಘೋರಿಗಳನ್ನು ಕಾಶಿಯಲ್ಲಿ ಹೆಚ್ಚಾಗಿ ಕಾಣಬಹುದು. ಇನ್ನೂ ಕೆಲವರು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ.
2/ 7
ಇನ್ನು ಕೆಲವು ಸಾಧುಗಳು ಬಟ್ಟೆಯನ್ನೆ ಧರಿಸದೆಯೇ ತಿರುಗಾಡುತ್ತಾರೆ. ಸಾಧುಗಳು ಎಂದರೆ ನಮ್ಮ ಮನಸ್ಸಿನಲ್ಲಿ ತಮ್ಮ ಜೀವನವನ್ನು ದೇವರಿಗಾಗಿ ಸಮರ್ಪಿಸಿದ, ಐಹಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು ಎಂಬ ಕಲ್ಪನೆ ಬರುತ್ತದೆ. ಸ್ಮಶಾನದಲ್ಲಿ ವಾಸಿಸುವ ಅಘೋರಿಗಳನ್ನು ನೋಡಿದರೆ ಸಲ್ಪಮಟ್ಟಿನ ಭಯವೂ ಆಗುತ್ತದೆ.
3/ 7
ಅಘೋರಿಗಳೆಲ್ಲಾ ಶಿವನ ಭಕ್ತರಾಗಿರುತ್ತಾರೆ. ಇವರಲ್ಲಿ ಹಲವು ಶಕ್ತಿ ಅಡಗಿರುತ್ತದೆ, ಇವರು ವಿವಿಧ ರೀತಿಯ ಸಾಧನೆ ಮಾಡುತ್ತಾರೆ. ಅಘೋರಿಗಳನ್ನು ಭಾರತದಲ್ಲಿ ಗೌರವಿಸಲಾಗುತ್ತದೆ. ಇವರು ಶವದ ನರ ಮಾಂಸ ಭಕ್ಷಣೆ ಮಾಡುತ್ತಾರೆ.
4/ 7
ಇವರು ಮಾಂಸ ಮತ್ತು ಮಧ್ಯಸೇವನೆ ಮಾಡುತ್ತಾರೆ. ಅಘೋರಿಗಳು ಮಲ ಮತ್ತು ಮೂತ್ರ ಸೇವನೆಯನ್ನೂ ಮಾಡುತ್ತಾರೆ. ಒಂದು ರೀತಿಯ ವಿಚಿತ್ರ ಹಾಗೂ ವಿಭಿನ್ನ ಜೀವನ ಶೈಲಿ ಹೊಂದಿರುತ್ತಾರೆ.
5/ 7
ಇವರು ಕಾಳಿ ಮಾತಾ ಸೇವಕರು ಅಥವಾ ಶಿವನ ಅವತಾರಕ್ಕೆ ಭಕ್ತರಾಗಿ ಅಘೋರರಿಗೆ ಕರೆಯುತ್ತಾರೆ. ಈ ಅಘೋರಿಗಳು ಮನುಷ್ಯರ ಅಂತ್ಯಕ್ರಿಯೆಯ ನಂತರ ಅವರ ಮೂಳೆಗಳಿಂದ ಕಪಾಲ ಮಾಡಿಕೊಂಡು ಉಪಯೋಗಿಸುತ್ತಾರೆ.
6/ 7
ಜೀವನದಿಂದ ಮೋಕ್ಷವನ್ನು ಹೊಂದಿ ಪುನರ್ ಜನ್ಮ ಪಡೆಯಬಹುದು ಎಂಬುದು ಅಘೋರಿಗಳ ನಂಬಿಕೆಯಾಗಿದೆ. ಇವರು ಕೇವಲ ಶಿವರಾತ್ರಿ ಹಾಗೂ ಕುಂಭಮೇಳದ ಸಮಯದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತಾರೆ.
7/ 7
ರಾಮ, ಬ್ರಹ್ಮ, ವಿಷ್ಣು ಹೀಗೆ ಬೇರೆ ಯಾವ ದೇವರನ್ನೂ ಆರಾಧಿಸದ ಅಘೋರಿಗಳು ಕೇವಲ ಶಿವ ಮತ್ತು ಕಾಳಿಯನ್ನು ಮಾತ್ರ ಆರಾಧಿಸುತ್ತಾರೆ. ಹೆಚ್ಚಾಗಿ ಯಾವಾಗಲೂ ಭಸ್ಮವನ್ನು ಲೇಪಿಸಿಕೊಂಡಿರುತ್ತಾರೆ.