ದುಬಾರಿ ಬೆಲೆಯ ಸೀರೆಯುಟ್ಟು-ಆಭರಣ ತೊಟ್ಟು Festive Lookನಲ್ಲಿ ಮಿಂಚಿದ ನಟಿ Priyanka Upendra
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಫೋಟೋಶೂಟ್ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಹಬ್ಬದ ಅಂಗವಾಗಿ ಮಾಡಿಸಿರುವ ಫೋಟೋಶೂಟ್ನಲ್ಲಿ (Festival Photoshoot) ಪ್ರಿಯಾಂಕಾ ಉಪೇಂದ್ರ ದುಬಾರಿ ಬೆಲೆಯ ಸೀರೆಯುಟ್ಟು, ಆಭರಣಗಳನ್ನು ತೊಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್ಸ್ಟಾಗ್ರಾಂ ಖಾತೆ)
ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಮನೆಯಲ್ಲಿ ಎಲ್ಲ ಹಬ್ಬಗಳನ್ನು ಶ್ರದ್ಧೆ ಹಾಗ ಭಕ್ತಿಯಿಂದ ಆಚರಿಸುತ್ತಾರೆ. ಗೌರಿ-ಗಣೇಶ, ವರಮಹಾಲಕ್ಷ್ಮಿ ಹಾಘೂ ದುರ್ಗಾ ಪೂಜೆ ಸಹ ಅದ್ದೂರಿಯಾಗಿ ಆಚರಿಸುತ್ತಾರೆ.
2/ 11
ಸೆಲೆಬ್ರಿಟಿಗಳಿಗೆ ಹಬ್ಬ ಎಂದರೆ ಮನೆಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಮಾತ್ರವಲ್ಲ, ಬಣ್ಣದ ಲೋಕದಲ್ಲಿ ಹಬ್ಬವನ್ನು ಬೇರೆಯದ್ದೇ ರೀತಿಯಲ್ಲಿ ಆಚರಿಸಲಾಗುತ್ತದೆ.
3/ 11
ಹಬ್ಬಕ್ಕಾಗಿ ಸಿಂಗಾರಗೊಂಡ ತಾರೆಯರು ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಾರೆ. ಅವರು ಹಬ್ಬದ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳುವ ಥೀಮ್ಗಳಲ್ಲಿ ಮಾಡಿಸುವ ಫೋಟೋಶೂಟ್ಗಳು ನೆಟ್ಟಿಗರ ಮನ ಸೆಳೆಯುತ್ತವೆ.
4/ 11
ಪ್ರಿಯಾಂಕಾ ಉಪೇಂದ್ರ ಸಹ ಇದಕ್ಕೆ ಹೊರತಾಗಿಲ್ಲ. ಅವರು ದುಬಾರಿ ಬೆಲೆಯ ಸೀರೆಯುಟ್ಟು, ಮೈ ತುಂಬ ಆಭರಣಗಳನ್ನು ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
5/ 11
ಪ್ರಿಯಾಂಕಾರ ಈ ಸಾಂಪ್ರದಾಯಿಕ ಲುಕ್ ನೆಟ್ಟಿಗರ ಮನಸ್ಸು ಕದ್ದಿದೆ. ಹೌದು, ಪ್ರಿಯಾಂಕಾ ಉಪೇಂದ್ರ ಅವರು ಈ ಸಲ ಹಬ್ಬದ ಸಮಯದಲ್ಲಿ ಅಭಿಮಾನಿಗಳ ಬಳಿ ಒಂದು ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ.
6/ 11
ಈ ವರ್ಷದ Jewels Of India Exhibitionನ ರಾಯಭಾರಿಯಾಗಿದ್ದಾರೆ ಪ್ರಿಯಾಂಕಾ ಉಪೇಂದ್ರ. ಹೌದು, ನಾಳೆಯಿಂದ ಅಂದರೆ ಅ.15ರಿಂದ 18ರ ವರೆಗೆ ಅರಮನೆ ಮೈದಾನ ತ್ರಿಪುರ ವಾಹಿನಿಯಲ್ಲಿ ಈ ಪ್ರದರ್ಶನ ನಡೆಯಲಿದೆ.
7/ 11
ಪ್ರಿಯಾಂಕಾ ಉಪೇಂದ್ರ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಡಿಸುತ್ತಿದ್ದಾರೆ. ರಾಜ್ಕಿರಣ್ ಚೊಚ್ಚಲ ನಿರ್ದೇಶನದ ಚಿತ್ರ ‘1980’ಯಲ್ಲಿ ಪ್ರಿಯಾಂಕಾ ಉಪೇಂದ್ರ ಕಾದಂಬರಿಕಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
8/ 11
1980ರಲ್ಲಿ ನಡೆಯುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಚಿತ್ರದ ಟೀಸರ್ ಸಹ ಈಗಾಗಲೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಒಬ್ಬ ಕಾದಂಬರಿಕಾರ್ತಿಯಾಗಿ 1980ನೇ ಕಾಲಘಟ್ಟವನ್ನು ಪ್ರತಿನಿಧಿಸುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ.
9/ 11
ಸಿನಿಮಾದಲ್ಲಿ ಪ್ರಿಯಾಂಕಾರ ಉಡುಗೆ, ಮ್ಯಾನರಿಸಂಗಳೆಲ್ಲ ಆ ಹಿನ್ನೆಲೆಯಲ್ಲೇ ಬಂದಿವೆಯಂತೆ. ಆರ್ಕೆ ಪ್ರೊಡಕ್ಷನ್ಸ್ ಪೂಜಶ್ರೀ ಪ್ರೊಡಕ್ಷನ್ ಬಂಡವಾಳ ಹೂಡಿರುವ ಸಿನಿಮಾದಲ್ಲಿ ಶರಣ್ಯ ಶೆಟ್ಟಿ, ಶಂಕರ್ ಅಶ್ವತ್ಥ್, ರಮೇಶ್ ಪಂಡಿತ್ ಮತ್ತಿತರರು ನಟಿಸಿದ್ದಾರೆ.
10/ 11
1980ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ಜೊತೆಗೆ ಇತ್ತೀಚೆಗಷ್ಟೆ ಮಿಸ್ ನಂದಿನಿ ಎಂಬ ಸಿನಿಮಾವನ್ನೂ ಪ್ರಕಟಿಸಿದ್ದಾರೆ ಪ್ರಿಯಾಂಕಾ ಉಪೇಂದ್ರ. ಮಿಸ್ ನಂದಿನಿ ಸಿನಿಮಾವನ್ನು ಎಸ್ ಆರ್ ಗುರುದತ್ತ ಅವರು ನಿರ್ದೇಶನ ಮಾಡಲಿದ್ದಾರೆ.
11/ 11
ಆರ್ ಕೆ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಮಿಸ್ ನಂದಿನಿ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಶಿಕ್ಷಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಸರ್ವೇಶ್ ಅವರು ಸಂಗೀತ ನಿರ್ದೇಶನ ಹೊಣೆ ಹೊತ್ತಿದ್ದರೆ, ವೀರೇಶ್ ಅವರು ಸಿನಿಮೆಟೋಗ್ರಾಫರ್ ಆಗಿದ್ದಾರೆ.