Snacks: ಈ ವಡಾಪಾವ್‌ನ ತಿನ್ನೋದಲ್ಲ, ಕೈಯಿಂದ ಎತ್ತೋದಕ್ಕೂ ಆಗಲ್ಲ! ಇದ್ರ ತೂಕ ಬರೋಬ್ಬರಿ ಎರಡೂವರೆ ಕೆಜಿ!
ವಡಾಪಾವ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಅಂತ ಕೇಳಿದ್ರೆ ಶೇಕಡ 20 ರಷ್ಟು ಜನರು ನನಗಿಷ್ಟ ಇಲ್ಲ ಎಂದು ಹೇಳಬಹುದೇನೋ. ಆದರೆ, ಇಲ್ಲೊಂದು ವೈರಲ್ ಆಗ್ತಾ ಇರುವ ವಡಾಪಾವ್ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರ.
ವಡಾಪಾವ್ ಅಂದ್ರೆ ಅದೆಷ್ಟೋ ಜನರಿಗೆ ಇಷ್ಟವಿರುತ್ತದೆ. ಅದ್ರಲ್ಲಿ ಇರುವ ಮೆಣಸಿನ ಕಾಯಿಯನ್ನು ತಿನ್ನಲು ಕೂಡ ಕೆಲವೊಬ್ಬರು ತುಂಬಾ ಇಷ್ಟ ಪಡುತ್ತಾರೆ. ಇನ್ನೂ ಕೆಲವೊಬ್ಬರಿಗೆ ವಡಾಪಾವ್ ಅಂದ್ರೆ ಇಷ್ಟ ಇರೋದಿಲ್ಲ. ಆದರೆ, ಇದೇ ತಿಂಡಿಯು ಸಖತ್ ವೈರಲ್ ಆಗ್ತಾ ಇದೆ.
2/ 7
ದಾಬೇಲಿಗೆ ಪ್ರಸಿದ್ಧವಾಗಿರುವ ಕಚ್‌ನಲ್ಲಿ ವಡಾಪಾವ್ ಕೂಡ ಜನಪ್ರಿಯವಾಗಿದೆ. ಮುಂಬೈ ಶೈಲಿಯ ವಡಾಪಾವ್ ಅಲ್ಲದೆ, ಕಚ್ ಶೈಲಿಯ ವಡಾ ಪಾವ್ ಕೂಡ ಇಲ್ಲಿ ಫೇಮಸ್ ಆಗಿದೆ.
3/ 7
ಭುಜ್‌ನ ಯುವಕನೊಬ್ಬ 2.65 ಕೆಜಿ ತೂಕದ ಜಂಬೂ ವಡಾಪಾವ್ ತಯಾರಿಸಿದ್ದಾನೆ. ಈ ವಡಾ ಪಾವ್ ತೂಕ ನೋಡಿ ಹಲವರು ಬೆಚ್ಚಿ ಬಿದ್ದಿದ್ದಾರೆ. ಸೈಜ್ ನೋಡಿದ್ರೆನೇ ಅಯ್ಯಬ್ಬ ಅಂತ ಅನಿಸುತ್ತೆ.
4/ 7
ಸಂದೀಪ್ ಬುದ್ಧಭಟ್ಟಿ ಮತ್ತು ಅವರ ಮಗ ದೇವ್ ಬುದ್ಧಭಟ್ಟಿ ಕಳೆದ ಏಳು ವರ್ಷಗಳಿಂದ ಭುಜ್‌ನಲ್ಲಿ ವಡಾಪಾವ್ ಮತ್ತು ಬಜ್ಜಿ ವ್ಯಾಪಾರವನ್ನು ನಡೆಸುತ್ತಿದ್ದಾರೆ. ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚಿಸಿ ಜಂಬೂ ವಡಾ ಪಾವ್ ತಯಾರಿಸಿದ್ದಾರೆ.
5/ 7
ಎರಡೂವರೆ ಕಿಲೋ ತೂಕದ ವಡಾಪಾವ್ ತಯಾರಿಸುವಾಗ ಸಂದೀಪ್ ಮತ್ತು ದೇವ್ ಹಲವು ಬಾರಿ ವಿಫಲರಾಗಿದ್ರಂತೆ. ಆದರೂ ಛಲ ಬಿಡದೇ ಇವರು ಪ್ರಯತ್ನ ಪಟ್ಟಿದ್ದಾರೆ.
6/ 7
ಆದರೆ ಏಳನೇ ಬಾರಿಗೆ ಕೇವಲ ಅರ್ಧ ಗಂಟೆಯಲ್ಲಿ 2.65 ಕೆಜಿ ವಡಾಪಾವ್ ತಯಾರಿಸಿದ್ದಾರೆ. ಇದರಲ್ಲಿ 1.25 ಕೆಜಿ ವಡಾ ಮತ್ತು 650 ಗ್ರಾಂ ಬ್ರೆಡ್ ಇರುತ್ತದೆ.
7/ 7
2.65 ಕೆ.ಜಿ ತೂಕದ ವಡಾ ಪಾವ್ ತಯಾರಿಸಿದ್ದಕ್ಕಾಗಿ ಇನ್‌ಫ್ಲುಯೆನ್ಸರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಸೊಸೈಟಿ ಪ್ಲಾಂಟ್ ಫೌಂಡೇಶನ್ ವಿಶ್ವದ ಅತಿ ದೊಡ್ಡ ವಡಾ ಪಾವ್ ತಯಾರಿಸಿದ್ದಕ್ಕಾಗಿ ದೇವ್ ಅವರನ್ನು ಗೌರವಿಸಿದೆ.
First published:
17