'ಬ್ರಿಟಿಷ್​ ಬಿಲ್​ಗೇಟ್ಸ್'​ ರೂಬೇನ್​ ಸಿಂಗ್ 'ಕಾರು'ಬಾರು ನಿಮಗೆ ಗೊತ್ತೇ..?

ಲಂಡನ್ ಮೂಲದ ಕೋಟ್ಯಧಿಪತಿ ರೂಬೇನ್ ಸಿಂಗ್ ಕಾರುಗಳನ್ನು ಖರೀದಿಸಲು ಬರೋಬ್ಬರಿ 50 ಕೋಟಿ ರೂಪಾಯಿಗಳನ್ನು ಹೂಡಿದ್ದಾರೆ. ರೂಬೇನ್​​ ಆರು ರೋಲ್ಸ್-ರಾಯ್ಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ್ದು, ಫ್ಯಾಂಟಮ್ ಐಷಾರಾಮಿ ಸೆಡಾನ್ ಮತ್ತು ಕುಲ್ಲಿನ್ನ್ ಐಷಾರಾಮಿ ಎಸ್​ಯುವಿ(SUV)ಗಳ 3 ಘಟಕಗಳು. ರೋಲ್ಸ್-ರಾಯ್ಸ್ ಕಾರುಗಳ ಹೊಸ ಸಂಗ್ರಹವನ್ನು 'ಸಿಂಗ್​ ಅವರ ಜ್ಯುವೆಲ್ ಸಂಗ್ರಹ' ಎಂದು ಹೆಸರಿಸಲಾಗಿದೆ. ರೋಲ್ಸ್-ರಾಯ್ಸ್​​ನ ಹೊರತಾಗಿ, ಬುಗಾಟ್ಟಿ ವೆಯ್ರಾನ್, ಪೋರ್ಷೆ 918 ಸ್ಪೈಡರ್, ಪಗಾನಿ ಹುಯಯಾರಾ, ಲಂಬೋರ್ಘಿನಿ ಹರಾಕನ್ ಮತ್ತು ಫೆರಾರಿ ಎಫ್ 12 ಬರ್ಲಿನೆಟ್ಟಾ ಸೀಮಿತ ಆವೃತ್ತಿಯ (ವಿಶ್ವದ ಏಕೈಕ) ಕಾರುಗಳ​ ಮಾಲೀಕ ರೂಬೇನ್​. 'ಬ್ರಿಟಿಷ್ ಬಿಲ್ ಗೇಟ್ಸ್' ಎಂದು ಕರೆಯಲ್ಪಡುವ ರೂಬೇನ್ ಸಿಂಗ್ ಮಾಜಿ ಇಂಗ್ಲೆಂಡ್​ನ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರ ಆಡಳಿತದ ಅವಧಿಯಲ್ಲಿ ಸಣ್ಣ ಉದ್ಯಮಗಳು ಮತ್ತು ಸ್ಪರ್ಧಾತ್ಮಕತೆ ಕೌನ್ಸಿಲ್​​ನ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿಂದೆ ಬ್ರಿಟಿಷ್ ಸರ್ಕಾರದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಬ್ರಿಟಿಷ್ ಬಿಲ್ ಗೇಟ್ಸ್ ರೂಬೆನ್ ಸಿಂಗ್ ಅವರ ಕಾರ್ ಸಂಗ್ರಹಣೆ ಚಿತ್ರಗಳು ನಿಮಗಾಗಿ ಇಲ್ಲಿವೆ.

  • News18
  • |
First published: