ಬಾಲ್ಯದಲ್ಲಿ, ಶ್ರೀನಿವಾಸ್ ಬಹಳ ಕೋಪದ ಸ್ವಭಾವದ ವ್ಯಕ್ತಿಯಾಗಿದ್ದರು. ಆಕ್ರಮಣಕಾರಿ ಮನೋಭಾವ ಹೊಂದಿದ್ದರು. ಹಾಗಾಗಿ ಮಗನ ಕೋಪವನ್ನು ನಿಯಂತ್ರಿಸಲು, ಅವನ ತಾಯಿ ಅವನಿಗೆ ಚಿನ್ನದ ಸರ ಮತ್ತು ಎರಡು ಉಂಗುರಗಳನ್ನು ಧರಿಸಲು ಸಲಹೆ ನೀಡಿದ್ದರು. ಚಿನ್ನಾಭರಣ ಧರಿಸಿದ ನಂತರ ಅವರ ವರ್ತನೆ ಮತ್ತು ನಡವಳಿಕೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದು ಶ್ರೀನಿವಾಸ್ ಹೇಳುತ್ತಾರೆ.