Travel: ಟಿಕೆಟ್ ಇಲ್ಲದೇ 3 ಸಾವಿರ ಕಿ.ಮೀ. ವಿಮಾನದಲ್ಲಿ ಪ್ರಯಾಣಿಸಿದ ಬಾಲಕ: ಹೇಗೆ ಗೊತ್ತಾ?
ವಿಮಾನಯಾನ ಮಾಡಬೇಕೆಂದರೆ ಪ್ರಯಾಣಿಕರು ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ವಿಮಾನ ಪ್ರವೇಶ ದ್ವಾರದಲ್ಲಿ ಸಾಕಷ್ಟು ಭದ್ರತೆ ಇರುತ್ತದೆ. ಆದ್ರೆ 9 ವರ್ಷದ ಬಾಲಕನೋರ್ವ ಈ ಎಲ್ಲ ತಪಾಸಣೆಯನ್ನು ಕಣ್ತಪ್ಪಿಸಿ ಪ್ರಯಾಣ ಮಾಡಿದ್ದಾನೆ.
ಬ್ರೆಜಿಲ್ ನಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 9 ವರ್ಷದ ಬಾಲಕನೋರ್ವ ವಿಮಾನದಲ್ಲಿ ಸುಮಾರು 3 ಸಾವಿರ ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾನೆ. ಅದು ಯಾವುದೇ ಟಿಕೆಟ್ ಇಲ್ಲದೇ ಅಂದ್ರೆ ನೀವು ನಂಬಲೇಬೇಕು. (ಸಾಂದರ್ಭಿಕ ಚಿತ್ರ)
2/ 8
9 ವರ್ಷದ ಇಮ್ಯಾನುಯೆಲ್ ಮಾರ್ಕ್ವೆಸ್ ಒಲಿವೇರಾ ಟಿಕೆಟ್ ಇಲ್ಲದೇ ಪ್ರಯಾಣ ಬೆಳಸಿದ ಬಾಲಕ. ತನ್ನ ಕುಟುಂಬಸ್ಥರನ್ನು ಭೇಟಿಯಾಗಲು ಪ್ರಯಾಣ ಬೆಳೆಸಿರೋದಾಗಿ ಬಾಲಕ ಹೇಳಿದ್ದಾನೆ. (ಸಾಂದರ್ಭಿಕ ಚಿತ್ರ)
3/ 8
ವಾಯುವ್ಯ ಬ್ರೆಜಿಲ್ನ ಮನೌಸ್ ನಲ್ಲಿರುವ ತನ್ನ ಮನೆಯಿಂದ ಶನಿವಾರ ಬೆಳಗ್ಗೆ ಆಗ್ನೇಯ ರಾಜ್ಯವಾದ ಸಾವೊ ಪಾಲೊದಲ್ಲಿರುವ ಗೌರುಲ್ಹೋಸ್ ಗೆ ಪ್ರಯಾಣ ಬೆಳೆಸಿದ್ದನು. (ಸಾಂದರ್ಭಿಕ ಚಿತ್ರ)
4/ 8
ಈ ಕುರಿತು ನ್ಯೂಸ್ ಫ್ಲಾಶ್ ವರದಿ ಮಾಡಿದೆ. ಪುತ್ರ ಈ ರೀತಿ ಪ್ರಯಾಣ ಬೆಳೆಸಿರೋದನ್ನು ಖಚಿತ ಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಈ ಕುರಿತು ಮಾತನಾಡಿರು ತಾಯಿ ಡೇನಿಯಲ್, ನಾನು ಬೆಳಗ್ಗೆ 5.30 ಕ್ಕೆ ಎಚ್ಚರಗೊಂಡಾಗ ಮಗನ ಕೋಣೆಗೆ ಹೋದೆ. ಆತ ಇನ್ನೂ ಮಲಗಿದ್ದನು. ಸ್ವಲ್ಪ ಸಮಯದ ಬಳಿಕ ಮೊಬೈಲ್ ನೋಡುತ್ತಿದ್ದನು ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಮತ್ತೆ 7.30ಕ್ಕೆ ಆತನ ಕೋಣೆಗೆ ಹೋದಾಗ ಮಗ ಅಲ್ಲಿರಲಿಲ್ಲ. ಮನೆಯಲ್ಲಿ ಹುಡುಕಾಡಿದೆ. ಆದರೆ ಮಗ ಎಲ್ಲಿಯೂ ಕಾಣಲಿಲ್ಲ ಎಂದು ಡೇನಿಯಲ್ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಾಲಕ ಟಿಕೆಟ್ ಇಲ್ಲದೆ ವಿಮಾನದಲ್ಲಿ ಹೋಗುವ ಮಾರ್ಗಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿದ್ದನು ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)
8/ 8
ಮನೌಸ್ ವಿಮಾನ ನಿಲ್ದಾಣವನ್ನು ಬಾಲಕ ಹೇಗೆ ಪ್ರವೇಶಿದ ಮತ್ತು ವಿಮಾನದೊಳಗೆ ಹೇಗೆ ಮತ್ತು ಎಲ್ಲಿ ಕುಳಿತಿದ್ದ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)