ಪುರುಷನಾಗಿರಲಿ, ಹೆಣ್ಣಿರಲಿ, ಪ್ರತಿಯೊಬ್ಬ ಮನುಷ್ಯನ ಜೀವನವೂ ಕಷ್ಟಗಳಿಂದ ಕೂಡಿರುತ್ತದೆ. ಅದರಲ್ಲೂ ತೃತಿಯ ಲಿಂಗಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮನಿಸುತ್ತದೆ. ಅಂದರೆ ಸಮಾಜದಲ್ಲಿ ಜನರು ಅವರನ್ನು ನೋಡುವ ರೀತಿ ಬದಲಾಗುತ್ತದೆ. ಭಾರತದಲ್ಲಿ ತೃತೀಯಲಿಂಗಿಗಳನ್ನು ಕೀಳಾಗಿ ಕಾಣಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಇವೆಲ್ಲಾವನ್ನು ಸಹಿಸಿಕೊಂಡು ದೊಡ್ಡ ಸ್ಥಾನವನ್ನು ಸಾಧಿಸುವುದು ಅವರಿಗೆ ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಆದರೆ ಭಾರತದಲ್ಲಿ ಅನೇಕ ಟ್ರಾನ್ಸ್ಜೆಂಡರ್ಗಳು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಉನ್ನತ ಸ್ಥಾನಕ್ಕೆ ಹೋದವರು ಇದ್ದಾರೆ. ಅದರಂತೆಯೇ ಇಂದು ಸಾಕಷ್ಟು ಪ್ರಸಿದ್ಧಿ ಪಡೆದಿರುವ 8 ತೃತಿಯ ಲಿಂಗಿಗಳ ಬಗ್ಗೆ ಮಾಹಿತಿ ಇಲ್ಲಿ ನೀಡಿಲಾಗಿದೆ
ಭಾರತದ ಮೊದಲ ಟ್ರಾನ್ಸ್ಜೆಂಡರ್ ನ್ಯಾಯಾಧೀಶೆ: ಅಕ್ಟೋಬರ್ 2017 ರಲ್ಲಿ, 29 ವರ್ಷದ ಜೋಯಿತಾ ಮೊಂಡಲ್ ಅವರು ಭಾರತದ ಮೊದಲ ಟ್ರಾನ್ಸ್ಜೆಂಡರ್ ನ್ಯಾಯಾಧೀಶರಾದರು. ಉತ್ತರ ಬಂಗಾಳದ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಟ್ರಾನ್ಸ್ಜೆಂಡರ್ಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಗಳೊಂದಿಗೆ ಕೆಲಸ ಮಾಡುವಾಗ ಅವರು ಕಾನೂನು ಅಧ್ಯಯನ ಮಾಡಲು ಪ್ರೇರೇಪಿಸಿದರು.
ಭಾರತದ ಮೊದಲ ಟ್ರಾನ್ಸ್ಜೆಂಡರ್ ಕಾಲೇಜು ಪ್ರಾಂಶುಪಾಲರು: ವಿವೇಕಾನಂದ ಸತೋಬರ್ಶಿಕಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಮನಬಿ ಬಂಡೋಪಾಧ್ಯಾಯ ಅವರು ತೃತಿಯ ಲಿಂಗಿಗೆ ಸೇರಿದ ಭಾರತದ ಮೊದಲ ಕಾಲೇಜು ಪ್ರಾಂಶುಪಾಲರಾದರು. 2015ರಲ್ಲಿ ಕೃಷ್ಣನಗರದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದರು. ಇದಲ್ಲದೆ, ಅವರು ಪಿಎಚ್ಡಿ ಪದವಿ ಪಡೆದ ಭಾರತದ ಮೊದಲ ಟ್ರಾನ್ಸ್ಜೆಂಡರ್ ಕೂಡ.