ಶ್ರೀಲಂಕಾದ ಪೆರೆಕಾರ ವಾರ್ಷಿಕೊತ್ಸವದಲ್ಲಿ ಭಾಗಿಯಾಗಿದ್ದ ವೃದ್ಧ ಆನೆಯೊಂದು ಈಗಾ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅನಾರೋಗ್ಯದಿಂದಾಗಿ ಬಡಕಲಾಗಿದ್ದ ಆನೆಯ ಮೇಲೆ ವರ್ಣ ರಂಜಿತ ಬಟ್ಟೆಯನ್ನು ಧರಿಸಿ ಅಲ್ಲಿನ ಮೆರೆವಣಿಗೆಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ವ್ಯಾಪಕವಾದ ಆಕ್ರೋಶ ಕೇಳಿ ಬಂದ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಿದೆ.
ಅಸ್ಥಿ ಪಂಜರ ಕಾಣುವಷ್ಟು ಬಡಕಲಾಗಿದ್ದ ಈ ಆನೆಯ ಹೆಸರು ತಿಕಿರಿ. 70 ವರ್ಷ ವಯಸ್ಸಾಗಿದೆ. ಪ್ರತಿ ವರ್ಷಶ್ರೀಲಂಕಾದಲ್ಲಿ ನಡೆಯುವ ಬೌಧ ಹಬ್ಬವಾದ ಪೆರೆಹಾರ ಉತ್ಸವದಲ್ಲಿ ಪಾಲ್ಗೊಳ್ಳುವ 60 ಆನೆಗಳಲ್ಲಿ ಈ ಆನೆಯು ಒಂದು. ಸಡಗರದಿಂದ ಕೂಡಿದ ಈ ಹಬ್ಬದಲ್ಲಿ ತಿಕಿರಿ ಆನೆಯನ್ನು ಬಳಸಿಕೊಳ್ಳಲಾಗಿದೆ. 10 ದಿನಗಳ ಕಾಲ ನಡೆಯುವ ಪೆರೆಹಾರ ಉತ್ಸವದ ಮೆರೆವಣೆಗೆಯಲ್ಲಿ ಆನೆಗಳು ಕಿ.ಲೋ ಮೀಟರ್ಗಳಷ್ಟು ಹೆಜ್ಜೆ ಹಾಕುತ್ತವೆ.