ಮೈಸೂರು ಅರಮನೆ(Mysore palace, Karnataka): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇರುವ ಅರಮನೆ ಮೈಸೂರು ಮಹಾರಾಜರ ಆಡಳಿತದ ಕುರುಹು. ಹಳೆಯ ಮೈಸೂರು ಅರಮನೆಯಲ್ಲಿ ಬೆಂಕಿಯಲ್ಲಿ ನಾಶವಾದ ಬಳಿಕ 1897ರಲ್ಲಿ ಮೈಸೂರು ಅರಮನೆಯ ನಿರ್ಮಾಣ ಕಾರ್ಯ ಆರಂಭವಾಯಿತು.. ಅಂತಿಮವಾಗಿ 1912ರಲ್ಲಿ ಮೈಸೂರು ಅರಮನೆ ಪೂರ್ಣಗೊಂಡಿತು.. ಇಂದಿಗೂ ಸಹ ಮೈಸೂರು ಅರಮನೆ ಸಾಕಷ್ಟು ಪ್ರಸಿದ್ಧಿ ಪಡೆದಿರುವುದು ಪ್ರತಿನಿತ್ಯ ನಡೆಯುವ ಲೈಟಿಂಗ್ ಶೋನಿಂದ.
ಪೊಟಾಲಾ ಅರಮನೆ: ಟಿಬೇಟ್ ನ ಲಾಸಾ ಕಣಿವೆಯಿಂದ 130 ಮೀಟರ್‌ಗಳಷ್ಟು ಎತ್ತರದಲ್ಲಿರುವ ಮಾರ್ಪೊ ರಿ ಬೆಟ್ಟದ ಮೇಲೆ ಪೊಟಾಲಾ ಅರಮನೆಯು ಇನ್ನೂ 170 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಅರಮನೆ ಟಿಬೆಟ್‌ನ ಅತ್ಯಂತ ದೊಡ್ಡ ಸ್ಮಾರಕ ಕೂಡ ಹೌದು.. 7 ನೇ ಶತಮಾನದಲ್ಲಿ ಇಲ್ಲಿ ಅರಮನೆಯನ್ನು ನಿರ್ಮಿಸಲಾಗಿದೆ.. 1959 ರಲ್ಲಿ ಚೀನಾದ ಆಕ್ರಮಣದ ನಂತರ 14 ನೇ ದಲೈ ಲಾಮಾ ಭಾರತಕ್ಕೆ ಪಲಾಯನ ಮಾಡುವವರೆಗೂ ಪೋಟಾಲಾ ಅರಮನೆಯು ದಲೈ ಲಾಮಾ ಅವರ ಅಧಿಕೃತ ನಿವಾಸವಾಗಿತ್ತು.