Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

ಸೂರ್ಯ ಅಸ್ತಮಿಸದೆ ಇರುವ ಜಾಗಗಳು ಕೂಡ ಭೂಮಿಯ ಮೇಲೆ ಇದೆ ಎಂದರೆ ನಂಬುತ್ತೀರಾ? ಅವು ಪ್ರವಾಸಿಗರು ಹೋಗಿ ಆನಂದಮಯ ಸಮಯ ಕಳೆಯಲು ಸೂಕ್ತ ಜಾಗಗಳೂ ಹೌದು. ಅಂತಹ, ಸೂರ್ಯ ಕಣ್ಣಾ ಮುಚ್ಚಾಲೆ ಆಡುವ ಭುಮಿಯ ಮೇಲಿನ 6 ಜಾಗಗಳ ವಿವರ ಇಲ್ಲಿದೆ.

First published:

  • 17

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    ನಮ್ಮ ನಿತ್ಯದ ದಿನಚರಿಯು 24 ಗಂಟೆಗಳ ಸುತ್ತ ಸುತ್ತುತ್ತದೆ, ಅದರಲ್ಲಿ ಸುಮಾರು 12 ಗಂಟೆ ಸೂರ್ಯನ ಬೆಳಕಿದ್ದರೆ, ಉಳಿದ ಸಮಯ ಕತ್ತಲು ಇರುತ್ತದೆ. ಆದರೆ ಭೂಮಿಯ ಎಲ್ಲಾ ಭಾಗಕ್ಕೂ ಇದು ಅನ್ವಯಿಸುವುದಿಲ್ಲ! ಸೂರ್ಯ ಅಸ್ತಮಿಸದೆ ಇರುವ ಜಾಗಗಳು ಕೂಡ ಭೂಮಿಯ ಮೇಲೆ ಇದೆ ಎಂದರೆ ನಂಬುತ್ತೀರಾ? ಅವು ಪ್ರವಾಸಿಗರು ಹೋಗಿ ಆನಂದಮಯ ಸಮಯ ಕಳೆಯಲು ಸೂಕ್ತ ಜಾಗಗಳೂ ಹೌದು. ಅಂತಹ, ಸೂರ್ಯ ಕಣ್ಣಾ ಮುಚ್ಚಾಲೆ ಆಡುವ ಭುಮಿಯ ಮೇಲಿನ 6 ಜಾಗಗಳ ವಿವರ ಇಲ್ಲಿದೆ.

    MORE
    GALLERIES

  • 27

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    1. ನಾರ್ವೆ ಆರ್ಟಿಕ್‌ ವೃತ್ತದಲ್ಲಿ ಇರುವ ನಾರ್ವೆಯನ್ನು ಲ್ಯಾಂಡ್ ಆಫ್ ದ ಮಿಡ್ ನೈಟ್ ಸನ್ ಎಂದು ಕರೆಯಲಾಗುತ್ತದೆ. ಅಲ್ಲಿ ಮೇ ತಿಂಗಳಿನಿಂದ ಜುಲೈ ತಿಂಗಳ ಅಂತ್ಯದವರೆಗೆ ಸೂರ್ಯ ಅಸ್ತಮಿಸುವುದೇ ಇಲ್ಲ. ಅಂದರೆ ಸುಮಾರು 76 ದಿನಗಳವರೆಗೆ ಅಲ್ಲಿ ಸೂರ್ಯಾಸ್ತ ಆಗುವುದಿಲ್ಲ. ನಾರ್ವೆಯ ಸ್ವಾಲ್ಬಾರ್ಡ್‍ನಲ್ಲಿ ಸೂರ್ಯ ಏಪ್ರಿಲ್‌ 10 ರಿಂದ ಆಗಸ್ಟ್ 23ರವರೆಗೆ ಸೂರ್ಯ ನಿರಂತರವಾಗಿ ಪ್ರಜ್ವಲಿಸುತ್ತಿರುತ್ತಾನೆ. ಇದು ಯೂರೋಪಿನ ಉತ್ತರ ತುದಿಯಲ್ಲಿರುವ ಜನವಸತಿ ಪ್ರದೇಶ. ಈ ತಿಂಗಳು ಅಲ್ಲಿಗೆ ಭೇಟಿ ನೀಡುವ ಪ್ಲ್ಯಾನ್‌ ಅನ್ನು ನೀವು ಮಾಡಬಹುದು, ಮತ್ತು ರಾತ್ರಿಯೇ ಇಲ್ಲದ ದಿನಗಳನ್ನು ಕಳೆಯಬಹುದು.

    MORE
    GALLERIES

  • 37

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    2. ನುನವುಟ್, ಕೆನಡಾ ನುನವುಟ್ ಕೇವಲ 3000ಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ನಗರ. ಇದು ಕೆನಡಾದ ವಾಯುವ್ಯ ಪ್ರದೇಶಗಳಲ್ಲಿ, ಆರ್ಟಿಕ್‌ ವೃತ್ತಕ್ಕಿಂತ ಎರಡು ಡಿಗ್ರಿಗಳಷ್ಟು ಎತ್ತರದಲ್ಲಿದೆ. ಈ ಪ್ರದೇಶದಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕು ಇರುತ್ತದೆ. ಅದೇ ರೀತಿ ಚಳಿಗಾಲದಲ್ಲಿ 30 ದಿನಗಳ ಕಾಲ ಇಲ್ಲಿ ಸಂಪೂರ್ಣ ಕತ್ತಲು ಇರುತ್ತದೆ.

    MORE
    GALLERIES

  • 47

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    3. ಐಸ್‍ಲ್ಯಾಂಡ್ ಗ್ರೇಟ್ ಬ್ರಿಟನ್‍ನ ನಂತರ ಐಸ್‍ಲ್ಯಾಂಡ್ ಯುರೋಪಿನ ಅತೀ ದೊಡ್ಡ ದ್ವೀಪವಾಗಿದ್ದು, ಸೊಳ್ಳೆಗಳೇ ಇಲ್ಲದ ದೇಶವೆಂದು ಹೆಸರುವಾಸಿಯಾಗಿದೆ. ಬೇಸಿಗೆಯ ದಿನಗಳಲ್ಲಿ ಐಸ್‍ಲ್ಯಾಂಡ್‍ನಲ್ಲಿ ರಾತ್ರಿಗಳು ಸ್ಪಷ್ಟವಾಗಿರುತ್ತವೆ. ಆದರೆ, ಜೂನ್‍ನಲ್ಲಿ ಸೂರ್ಯ ಮುಳುಗುವುದೇ ಇಲ್ಲ. ಮಧ್ಯರಾತ್ರಿಯಲ್ಲಿ ಪ್ರಜ್ವಲಿಸುವ ಸೂರ್ಯನನ್ನು ನೋಡಲು, ಆರ್ಟಿಕ್‌ ವೃತ್ತದಲ್ಲಿರುವ ಅಕುರೆರಿ ಮತ್ತು ಗ್ರಿಮ್ಸೆ ದ್ವೀಪಕ್ಕೆ ಭೇಟಿ ನೀಡಬಹುದು.

    MORE
    GALLERIES

  • 57

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    4. ಬ್ಯಾರೋ, ಅಲಸ್ಕಾ ಮೇ ತಿಂಗಳಿನಿಂದ ಜುಲೈ ಕೊನೆಯವರೆಗೆ ಇಲ್ಲಿ ಸೂರ್ಯ ಮುಳುಗುವುದೇ ಇಲ್ಲ. ಅದೆಲ್ಲವೂ ನವೆಂವರ್ ಆರಂಭದಿಂದ 30 ದಿನಗಳವರೆಗೆ ಸರಿದೂಗುತ್ತದೆ. ಅಂದರೆ, ಆಗ ಸೂರ್ಯ ಉದಯಿಸುವುದೇ ಇಲ್ಲ ಮತ್ತು ಅದನ್ನು ಧ್ರುವ ರಾತ್ರಿ ಎಂದು ಕರೆಯುತ್ತಾರೆ. ಅಂದರೆ ಆ ದೇಶ ಚಳಿಗಾಲದ ರಾತ್ರಿಗಳಲ್ಲಿ ಕತ್ತಲಿನಿಂದ ಆವರಿಸಿಕೊಂಡಿರುತ್ತದೆ. ಹಿಮಾವೃತ ಪರ್ವತಗಳು ಹಾಗೂ ಹಿಮನದಿಗಳಿಗೆ ಪ್ರಸಿದ್ಧಿ ಹೊಂದಿರುವ ಈ ಸ್ಥಳವನ್ನು ಬೇಸಿಗೆ ಅಥವಾ ಚಳಿಗಾಲದಲ್ಲಿ ವೀಕ್ಷಿಸಲು ಹೋಗಬಹುದು.

    MORE
    GALLERIES

  • 67

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    5. ಫಿನ್‍ಲ್ಯಾಂಡ್ ಸಾವಿರಾರು ಸರೋವರಗಳು ಮತ್ತು ದ್ವೀಪಗಳನ್ನು ಹೊಂದಿರುವ ಫಿನ್‍ಲ್ಯಾಂಡ್‍ನ ಹೆಚ್ಚಿನ ಭಾಗಗಳಲ್ಲಿ ಬೇಸಿಗೆಯಲ್ಲಿ 73 ದಿನಗಳ ಕಾಲ ನಿರಂತರವಾಗಿ ಸೂರ್ಯನನ್ನು ನೋಡಬಹುದು. ಅದೇ ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಸೂರ್ಯನ ಬೆಳಕಿನ ಪತ್ತೆಯೇ ಇರುವುದಿಲ್ಲ. ಅದೇ ಕಾರಣಕ್ಕಾಗಿ ಇಲ್ಲಿನ ಜನರು ಬೇಸಿಗೆಯಲ್ಲಿ ಕಡಿಮೆ ಮಲಗುತ್ತಾರೆ ಮತ್ತು ಚಳಿಗಾಲದಲ್ಲಿ ಹೆಚ್ಚು ನಿದ್ರಿಸುತ್ತಾರೆ. ನೀವು ಅಲ್ಲಿಗೆ ಭೇಟಿ ನೀಡಿದರೆ, ಸ್ಕೀಯಿಂಗ್‍ನಲ್ಲಿ ಪಾಲ್ಗೊಳ್ಳಬಹುದು ಮತ್ತು ಗಾಜಿನ ಇಗ್ಲೂಗಳಲ್ಲಿ ವಾಸಿಸುವ ಅನುಭವ ಪಡೆಯಬಹುದು.

    MORE
    GALLERIES

  • 77

    Sunset: ಸೂರ್ಯ ಮುಳುಗದೇ ಇರೋ ಜಾಗ ಕೂಡ ಭೂಮಿ ಮೇಲೆ ಇದೆ ಅಂದ್ರೆ ನಂಬ್ತೀರಾ..? ನಂಬಲೇಬೇಕು

    6. ಸ್ವೀಡನ್ ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಸ್ವೀಡನ್‍ನಲ್ಲಿ ಮಧ್ಯರಾತ್ರಿಯಲ್ಲಿ ಸೂರ್ಯಾಸ್ತವಾಗುತ್ತದೆ ಮತ್ತು ಬೆಳಗ್ಗಿನ ಜಾವ 4 ಗಂಟೆಗೆ ಸೂರ್ಯೋದಯವಾಗುತ್ತದೆ. ಇಲ್ಲಿ ನಿರಂತರ ಸೂರ್ಯನ ಬೆಳಕು ವರ್ಷದಲ್ಲಿ ಆರು ತಿಂಗಳು ಇರುತ್ತದೆ. ಹಾಗಾಗಿ, ಗಾಲ್ಫ್ ಆಡುವುದು, ಮೀನು ಹಿಡಿಯುವುದು, ಟ್ರೆಕ್ಕಿಂಗ್ ಮತ್ತಿತರ ಆಸಕ್ತಿದಾಯಕ ಮತ್ತು ಸಾಹಸಮಯ ಚಟುವಟಿಕೆಗಳನ್ನು ಈ ಸಮಯದಲ್ಲಿ ಮಾಡಬಹುದು.

    MORE
    GALLERIES