ಸಾಮಾನ್ಯವಾಗಿ ಪ್ರಯಾಣದ ವಿಷಯಕ್ಕೆ ಬಂದಾಗ, ಅನೇಕ ಜನರು ತಮ್ಮ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗಲು ಬಯಸುತ್ತಾರೆ. ಇನ್ನು ಕೆಲವರು ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಅದರಲ್ಲೂ ಜುಲೈ ತಿಂಗಳಿನಲ್ಲಿ ಪ್ರವಾಸಕ್ಕೆ ಪ್ಲಾನ್ ಮಾಡುತ್ತಾರೆ. ಅದರಂತೆಯೇ ಈ ತಿಂಗಳಲ್ಲಿ ಯಾವ ಜಾಗಕ್ಕೆ ಹೋಗುವುದು ಒಳ್ಳೆಯದು ಎಂದು ಯೋಚಿಸುವವರಿಗೆ ಆನಂದಿಸಲು ಯೋಗ್ಯವಾದ ಕೆಲವು ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ಚಿರಾಪುಂಜಿಯ ಹೆಸರನ್ನು ವಿಶ್ವದ ಅತ್ಯಂತ ಜನಪ್ರಿಯ ಸ್ಥಳವಾಗಿದೆ. ಇಲ್ಲಿ ಯಾವಾಗಲೂ ಮಳೆಯಾಗುತ್ತದೆ. ವಿಶೇಷವಾಗಿ ಜುಲೈ ತಿಂಗಳಲ್ಲಿ ಚಿರಾಪುಂಜಿಗೆ ಭೇಟಿ ನೀಡುವುದು ಉತ್ತಮ. ಚಿರಾಪುಂಜಿಯನ್ನು ಸೊಹ್ರಾ ಅಥವಾ ಕಿತ್ತಳೆ ಭೂಮಿ ಎಂದೂ ಕರೆಯಲಾಗುತ್ತದೆ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಿಂದ ಕೇವಲ 58 ಕಿಮೀ ದೂರದಲ್ಲಿರುವ ಚಿರಾಪುಂಜಿಯು ತನ್ನ ಲೈವ್ ಬ್ರಿಡ್ಜ್ಗೆ ಹೆಸರುವಾಸಿಯಾಗಿದೆ.