ಆಸ್ಕರ್ ಪ್ರಶಸ್ತಿ ವಿಶೇತ ನಟ ಸೀನ್ ಪೆನ್ ಬಹುಕಾಲದ ಗೆಳತಿ ಲೀಲಾ ಜಾರ್ಜ್ರನ್ನು ವಿವಾಹವಾಗಿದ್ದಾರೆ. ನಾಲ್ಕು ವರ್ಷಗಳ ಕಾಲ ಡೇಟಿಂಗ್ ನಟಿಸಿ ನಂತರ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 9
ಲೀಲಾ ಜಾರ್ಜ್ ಕೂಡ ನಟಿಯಾಗಿದ್ದು, ಸೀನ್ ಪೆನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದರು. 2016ರಲ್ಲಿ ಇವರಿಬ್ಬರು ಡೇಟಿಂಗ್ ಪ್ರಾರಂಭಿಸಿದ್ದರು. ಇತ್ತೀಚೆಗೆ ಇವರಿಬ್ಬರು ರಹಸ್ಯವಾಗಿ ವಿವಾಹವಾಗಿದ್ದಾರೆ
3/ 9
ನಿರ್ಮಾಪಕ ಮೈಕ್ ಮೆಡವೋಯ್ ಅವರ ಪತ್ನಿ ಐರೆನಾ ಅವರು ಸೀನ್ ಪೆನ್ ಮತ್ತು ಲೀಲಾ ವಿವಾಹದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಉಂಗುರದ ಚಿತ್ರವನ್ನು ಹಂಚಿಕೊಂಡಿದ್ದಾರೆ.
4/ 9
ಜೊತೆಗೆ ಸೀನ್ ಪೆನ್ ಮದುವೆಯಾಗಿರುವ ವಿಚಾರ ನಮಗೆ ತುಂಬಾ ಸಂತೋಷನೀಡಿದೆ. ನಾವು ನಿನ್ನನ್ನು ಪ್ರೀತಿಸುತ್ತೇವೆ. ಕುಟುಂಬದಲ್ಲಿ ಮಗನಾಗಿರುವುದಕ್ಕೆ ಧನ್ಯವಾದಗಳು.ನೀವು ಒಟ್ಟಿಗೆ ಸುಖವಾಗಿ ಬಾಳಬೇಕು ಎಂದು ಹಾರೈಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
5/ 9
ಇತ್ತೀಚೆಗೆ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಸೀನ್ ಪೆನ್ ಗೆಳತಿ ಲೀಲಾ ಜಾರ್ಜ್ ಬಗ್ಗೆ ಹೇಳಿಕೊಂಡಿದ್ದರು. ಆಕೆಯನ್ನು ನನ್ನ ಜೀವನದ ಸಂಗಾತಿ ಎಂದಿದ್ದರು.
6/ 9
ಲೀಲಾ ಜಾರ್ಜ್ ನನ್ನನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾಳೆ. ಹಾಗಾಗಿ ಆಕೆಯನ್ನು ನಾನು ತುಂಬ ಇಷ್ಟಪಡುತ್ತೇನೆ. ನನ್ನ ಜೀವನದ ಸಂಗಾತಿ ಎಂದಿದ್ದರು.
7/ 9
ಇನ್ನು ಡೇಟಿಂಗ್ ವೇಳೆ ನಟ ಸೀನ್ ಪೆನ್ ಮತ್ತು ಲೀಲಾ ಜಾರ್ಜ್ ಹಲವಾರು ಬಾರಿ ಸಾರ್ವಜನಿಕರ ಮುಂದೆ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಇವರಿಬ್ಬರು ಸಂಬಂಧವನ್ನು ಅಧಿಕೃತಗೊಳಿಸಿದರು.
8/ 9
ಸೀನ್ ಪೆನ್ 1985 ರಿಂದ 1989ರಲ್ಲಿ ಮಡೋನಾರನ್ನು ವಿವಾಹವಾದರು. ನಂತರ ರಾಬಿನ್ ರೈಟ್ ಅವರೊಂದಿಗೆ 14 ವರ್ಷಗಳ ಕಾಲ ಸಂಬಂಧದಲ್ಲಿದ್ದರು.
9/ 9
ಇದೀಗ 28 ವರ್ಷ ವಯಸ್ಸಿನ ಗೆಳತಿ ಲೀಲಾ ಜಾರ್ಜ್ರನ್ನು ಸೀನ್ ಪೆನ್ ವಿವಾಹವಾಗಿದ್ದಾರೆ.