Bihar: 5 ಲಕ್ಷ ರುದ್ರಾಕ್ಷಿಯಿಂದ 20 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆ, ಇಲ್ಲಿವೆ ಫೋಟೋಸ್

ವಿಶ್ವಶಾಂತಿ ಮತ್ತು ಕಲ್ಯಾಣದ ಉದ್ದೇಶಕ್ಕಾಗಿ ಮಹಾತ್ಮಾ ಗಾಂಧಿಯವರ ಕರ್ಮಭೂಮಿಯಾದ ಮೋತಿಹಾರಿಯಲ್ಲಿ ಬೃಹತ್ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ರಾಧಾ ಸಿಕಾರಿಯಾ ಶಿಕ್ಷಣ ಕ್ಯಾಂಪಸ್‌ನಲ್ಲಿ ಐದು ಲಕ್ಷ ರುದ್ರಾಕ್ಷಿಯಿಂದ ಮಾಡಿದ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಸುಮಾರು 20 ಅಡಿ ಎತ್ತರದ ಶಿವಲಿಂಗವನ್ನು ಗೋಲ್ಡ್ ಪ್ಲಾಟಿನಂನಿಂದ ನಿರ್ಮಿಸಲಾಗಿದೆ. ಇದು ರಾಜ್ಯದ ಮೊದಲ ಅತಿ ಎತ್ತರದ ಶಿವಲಿಂಗ ಎಂದು ನಂಬಲಾಗಿದೆ. ಅದರ ಮೇಲ್ಭಾಗದಲ್ಲಿ ಶಿವನ ಪ್ರತಿಮೆ ಇದೆ. ಗಂಗಾ ಮಾತೆಯೂ ಶಿವನ ಮುಡಿಯಲ್ಲಿ ಕುಳಿತಿದ್ದಾಳೆ.

First published: