ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಎಂದರೆ ಅದು ಯೂಟ್ಯೂಬ್. ಈ ಪ್ಲಾಟ್‌ಫಾರ್ಮ್ ಬಗ್ಗೆ ತಿಳಿದಿಲ್ಲದ ಹಲವು ಜನರಿದ್ದಾರೆ. ಕಂಟೆಂಟ್ ಕ್ರಿಯೇಟರ್ಸ್ ಉತ್ತಮ ಆದಾಯವನ್ನು ಗಳಿಸುತ್ತಿರುವ ಅನೇಕ ಜನರಿದ್ದಾರೆ. ಕೊರೊನಾ ನಂತರವಂತೂ ಈ ಪ್ರವೃತ್ತಿ ಹೆಚ್ಚು ವೇಗವನ್ನು ಪಡೆದುಕೊಂಡಿದೆ. ಆದಾಗ್ಯೂ, ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡುವಾಗ ಕಂಟೆಂಟ್ ಕ್ರಿಯೇಟರ್ಗಳು ಕೆಲವು ನಿಯಮಗಳನ್ನು ಅನುಸರಿಸಬೇಕು. ಇನ್ನು ಇದಕ್ಕಾಗಿ ಯೂಟ್ಯೂಬ್ ತನ್ನ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳನ್ನು ಸಹ ಮಾಡಿದೆ.
ಕಂಟೆಂಟ್ ರಚನೆಕಾರರು ಈ ಹಿಂದೆ ತಮ್ಮ ವಿಡಿಯೋಗಳ ಮೊದಲ 15-20 ಸೆಕೆಂಡುಗಳಲ್ಲಿ ಅಥವಾ ವಿಡಿಯೋನ ರನ್‌ಟೈಮ್‌ನಲ್ಲಿ ಹೆಚ್ಚಿನ ಅಶ್ಲೀಲತೆಯನ್ನು ಬಳಸಿದರೆ, ಆ ವಿಷಯದಿಂದ ಹಣಗಳಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಅಥವಾ ಅಂತಹ ವಿಡಿಯೋಗಳು ಅಸ್ತಿತ್ವದಲ್ಲಿರುವುದಿಲ್ಲ. ಅಂದರೆ ಇವುಗಳ ಮೇಲೆ ಯಾವುದೇ ಜಾಹೀರಾತು ಆದಾಯ ಸಹ ಬರುವುದಿಲ್ಲ. ಆದರೆ ಈಗ ಅದನ್ನು ಯೂಟ್ಯೂಬ್ ಬದಲಾಯಿಸಿದೆ.