ಶೀಘ್ರದಲ್ಲೇ ನಿಮ್ಮ ಕೇಬಲ್ ಮತ್ತು ಡಿಟಿಹೆಚ್ ಬಿಲ್ ಅಗ್ಗವಾಗಬಹುದು. ಏಕೆಂದರೆ ಫೆ. 1ರಿಂದ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜಾರಿಗೆ ತಂದಿದ್ದ ನಿಯಮವನ್ನು ಮರುಪರಿಶೀಲಿಸಲು ಮುಂದಾಗಿದೆ.
2/ 10
ಈ ಹಿಂದೆ ಜಾರಿಗೆ ಬಂದಿದ್ದ ಕೇಬಲ್ ಟಿವಿ, ಡಿಟಿಹೆಚ್ ನಿಯಮದ ವಿರುದ್ದ ಗ್ರಾಹಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ TRAI ಶುಕ್ರವಾರ (ಅಕ್ಟೋಬರ್ 18) ಸ್ಟೇಕ್ಹೋಲ್ಡರ್ಸ್ ಜತೆ ಸಭೆ ನಡೆಸಿದೆ.
3/ 10
ಸಿಎನ್ಬಿಸಿ-ಆವಾಜ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ TRAI ಅಧ್ಯಕ್ಷ ಆರ್.ಎಸ್.ಶರ್ಮಾ ಅವರು 'ಗ್ರಾಹಕರ ಹಿತಾಸಕ್ತಿಯನ್ನು ಯಾವಾಗಲೂ ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ TRAI ಹೊಸ ರಿಚಾರ್ಜ್ ಆದೇಶವನ್ನು ಪರಿಶೀಲಿಸುತ್ತಿದೆ. ಹೊಸ ನಿಯಮದ ಜಾರಿಯಿಂದ ಗ್ರಾಹಕರಿಗೆ ತಮ್ಮ ಪ್ಲ್ಯಾನ್ಗಳಲ್ಲಿ ಪಾರದರ್ಶಕತೆ ಸಿಗಲಿದೆ ಎಂದಿದ್ದಾರೆ.
4/ 10
ಈ ಕುರಿತು ಟ್ರಾಯ್ 2-3 ವಾರಗಳಲ್ಲಿ ಹೊಸ ನಿಯಮಗಳನ್ನು ಹೊರಡಿಸಲಿದೆ. ಹಳೆಯ ಟ್ಯಾರಿಫ್ ಪ್ಲ್ಯಾನ್ನಲ್ಲಿ ಕೆಲ ನ್ಯೂನತೆಗಳಿದ್ದವು. ಇದೀಗ ಪ್ರಸಾರಕರು ವಿಭಿನ್ನ ರೀತಿ ಪ್ಯಾಕ್ಗಳನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.
5/ 10
ಒಂದು ಮಾಹಿತಿಯ ಪ್ರಕಾರ, ಟ್ರಾಯ್ಯ ನೂತನ ಕೇಬಲ್ ಟಿವಿ, ಡಿಟಿಹೆಚ್ ಟ್ಯಾರಿಫ್ ಪ್ಲ್ಯಾನ್ ಹೊಸ ವರ್ಷದಿಂದ ಜಾರಿಗೆ ಬರಲಿದೆ. ಬದಲಾವಣೆ ಏನು?
6/ 10
ಈ ಹಿಂದೆಯಿದ್ದ ರಿಚಾರ್ಜ್ ಪ್ಲ್ಯಾನ್ ನ್ಯೂನತೆಗಳನ್ನು ಸರಿಪಡಿಸಲು ಹೊಸ ಟ್ಯಾರಿಫ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿದೆ. ಹಾಗೆಯೇ
7/ 10
ಹೊಸ ವ್ಯವಸ್ಥೆಯೊಂದಿಗೆ ಹೊಸ ಹಂತದ ಬದಲಾವಣೆ ಚಾನೆಲ್ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಒದಗಿಸಲಿದೆ. ಹಾಗೆಯೇ ಬಿಲ್ ಹೊರೆಯನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ.
8/ 10
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗ್ರಾಹಕರಿಗೆ ಅನುಕೂಲವಾಗುವಂತೆ ಹೊಸ ನಿಯಮ ಜಾರಿಗೆ ತಂದಿತ್ತು. ಈ ನಿಯಮದಲ್ಲಿ...
9/ 10
[caption id="attachment_271369" align="alignnone" width="924"] ವೀಕ್ಷಕರಿಗೆ ಬೇಕಾದ ಟಿ.ವಿ ಚಾನೆಲ್ ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ ಇದರಿಂದ ಪ್ರತಿಯೊಂದು ಚಾನೆಲ್ ಆಯ್ಕೆ ಮಾಡುವಾಗ ಈ ಹಿಂದಿಗಿಂತ ಹೆಚ್ಚಿನ ದರ ಗ್ರಾಹಕರು ಪಾವತಿಸಬೇಕಾಗಿತ್ತು.
[/caption]
10/ 10
ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಟ್ರಾಯ್ ಕೇಬಲ್ ಮತ್ತು ಡಿಟಿಹೆಚ್ ಬಿಲ್ಗಳನ್ನು ಇಳಿಸಿ ಗ್ರಾಹಕರಿಗೆ ಅನುಕೂಲವಾಗುವಂತಹ ಹೊಸ ಆದೇಶವನ್ನು ಹೊರಡಿಸಲು ಮುಂದಾಗಿದೆ.