‘ಆ್ಯಪ್ ಮನೆ‘ ಎಂದು ಕರೆಸಿಕೊಳ್ಳುವ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮತ್ತೆ ಮಾಲ್ವೇರ್ಗಳು ಪತ್ತೆಯಾಗಿದೆ.
2/ 13
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಆ್ಯಪ್ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್ ಮೊರೆ ಹೋಗುತ್ತಾರೆ. ಇನ್ನು ಬಳಕೆದಾರರೂ ಕೂಡ ತಮಗೆ ಬೇಕಾದ ಆ್ಯಪ್ಗಳನ್ನು ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡುತ್ತಾರೆ.
3/ 13
ಆದರೆ ಬಳಕೆದಾರರು ಡೌನ್ಲೋಡ್ ಮಾಡುವಂತಹ ಕೆಲ ಆ್ಯಪ್ಗಳಲ್ಲಿ ಮಾಲ್ವೇರ್ ಪತ್ತೆಯಾಗಿದ್ದು, ಈ ಬಗ್ಗೆ ವಿಪಿಎನ್ ಪ್ರೋ ಕಂಪೆನಿ ಅವುಗಳನ್ನು ಪತ್ತೆಹಚ್ಚಿ ಗೂಗಲ್ಗೆ ತಿಳಿಸಿದೆ
4/ 13
ಪ್ಲೇ ಸ್ಟೋರ್ನಲ್ಲಿ ರುವ ಸುಮಾರು 24 ಆ್ಯಪ್ಗಳಲ್ಲಿ ಮಾಲ್ವೇರ್ಗಳು ಪತ್ತೆಯಾಗಿದೆ. ಮಾಹಿತಿಗಳ ಪ್ರಕಾರ ಈ ಆ್ಯಪ್ಗಳನ್ನು ಚೀನಾದ ಶೆನ್ಜೆನ್ ಹವ್ಕ್ ಕಂಪೆನಿ ಸಿದ್ಧಪಡಿಸಿದೆಯಂತೆ.
5/ 13
38 ಮಿಲಿಯನ್ ಜನರು ಈ ಆ್ಯಪ್ಗಳನ್ನು ಈಗಾಗಲೇ ಡೌನ್ಲೋಡ್ ಮಾಡಿ ಬಳಸುತ್ತಿದ್ದಾರೆ ಎಂದು ವಿಪಿಎನ್ ಪ್ರೋ ವರದಿಯಲ್ಲಿ ತಿಳಿಸಿದೆ.
6/ 13
ಇನ್ನು ಮಾಲ್ವೇರ್ ಇರುವ ಶೆನ್ಜೆನ್ ಹವ್ಕ್ ಕಂಪೆನಿಯ 24 ಆ್ಯಪ್ಗಳನ್ನು ಗೂಗಲ್ ಪ್ಲೇಸ್ಟೋರ್ನಿಂದ ತೆಗೆದು ಹಾಕಿದೆ.
7/ 13
ಗೂಗಲ್ ನಿಯಮವನ್ನು ಉಲ್ಲಂಘಿಸಿದರೆ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ತಿಳಿಸಿದೆ.
8/ 13
ಈ ಮಾಲ್ವೇರ್ ಆ್ಯಪ್ಗಳು ಬಳಕೆದಾರರಿಗೆ ಗೊತ್ತಿಲ್ಲದೆ ಮಾಹಿತಿಯನ್ನು ಸಂಗ್ರಹಿಸುತ್ತಿತ್ತು. ಮಾತ್ರವಲ್ಲದೆ. ಬಳಕೆದಾರರು ಕ್ಲಿಕ್ ಮಾಡಿದಂತೆ ಮಾಹಿತಿಗಳು ಚೀನಿ ಸರ್ವರ್ಗಳಲ್ಲಿ ಸ್ಟೋರ್ ಆಗುತ್ತಿತ್ತು ಎಂದು ತಿಳಿಸಿದೆ.
ಕ್ಯಾಂಡಿ ಸೆಲ್ಫಿ ಕ್ಯಾಮೆರಾ, ಪ್ರೈವೆಟ್ ಬ್ರೌಸರ್, ಸೂಪರ್ ಕ್ಲೀನರ್, ಬ್ಯಾಟರಿ, ವೈರಸ್ ಕ್ಯಾಲೆಂಡರ್ 2019, ಹೈ ಸೆಕ್ಯೂರ್ 2019, ಹೈ ವಿಪಿಎನ್ ಆ್ಯಪ್ಗಳಲ್ಲಿ ಮಾಲ್ವೇರ್ ಕಾಣಿಸಿಕೊಂಡಿದೆ
12/ 13
ಮಾತ್ರವಲ್ಲದೆ, ಫ್ರೀ ವಿಪಿಎನ್, ಹೈ ವಿಪಿಎನ್ ಪ್ರೊ, ನೆಟ್ ಮಾಸ್ಟರ್, ಕ್ಯಾಂಡಿ ಗ್ಯಾಲರಿ ಆ್ಯಪ್ಗಳಲ್ಲಿ ಮಾಲ್ವೇರ್ಗಳು ಪತ್ತೆಯಾಗಿದೆ
13/ 13
ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಂಡುಬಂದ ಈ 24 ಮಾಲ್ವೇರ್ ಆ್ಯಪ್ಗಳನ್ನು ಡಿಲೀಟ್ ಮಾಡಿದೆ. ಮಾತ್ರವಲ್ಲದೆ ಈಗಾಗಲೇ ಡೌನ್ಲೋಡ್ ಮಾಡಿ ಬಳಸುತ್ತಿರುವ ಬಳಕೆದಾರರಿಗೆ ಈ ಆ್ಯಪ್ಗಳನ್ನು ಡಿಲೀಟ್ ಮಾಡುವಂತೆ ತಿಳಿಸಿದೆ.