WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

WhatsApp | ನಿಮಗೆ ಗೊತ್ತಾ? ವಾಟ್ಸಾಪ್‌ನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​​ನ್ನು ತುಂಬಾ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಹೇಗೆ ಅಂತೀರಾ? ಜಸ್ಟ್​ ಈ ಸ್ಟೆಪ್ಸ್ ಫಾಲೋ ಮಾಡಿ ಸಾಕು.

First published:

 • 17

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಹಿಂದೆ ಒಂದು ಕಾಲವಿತ್ತು. ಯಾವುದೇ ಮುಖ್ಯವಾದ ದಾಖಲೆಗಳಿದ್ರೆ ಅವುಗಳನ್ನು ಫೈಲ್​ನಲ್ಲಿ ತಗೊಂಡು ಹೋಗಬೇಕಿತ್ತು. ಆದರೆ ಈಗ ತಂತ್ರಜ್ಞಾನ ತುಂಬಾನೆ ಬೆಳೆದಿದೆ. ಮನುಷ್ಯ ಎಲ್ಲವನ್ನೂ ತನ್ನ ಬೆರಳ ತುದಿಯಲ್ಲೇ ಇಟ್ಟುಕೊಳ್ಳುವಷ್ಟು ಮುಂದುವರೆದಿದ್ದಾನೆ. ಈ ಹಿಂದೆ ಐಡೆಂಟಿಟಿ ಕಾರ್ಡ್​ನ್ನೂ ಸಹ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಸರ್ಕಾರಗಳು ಟೆಕ್ನಾಲಜಿಯನ್ನು ಸಾಕಷ್ಟು ಬಳಸುತ್ತಿವೆ. ಸಾಫ್ಟ್​ ಕಾಪಿ ರೂಪದಲ್ಲಿ ಪ್ರಮುಖ ಡಾಕ್ಯುಮೆಂಟ್ಸ್​ಗಳನ್ನು ಇಟ್ಟುಕೊಳ್ಳುವುದಕ್ಕೆ ಸರ್ಕಾರ ಅನುಮತಿ ನೀಡಿದೆ.

  MORE
  GALLERIES

 • 27

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಇದರರ್ಥ ಡಾಕ್ಯುಮೆಂಟೆಗಳು ಡಿಜಿಟಲ್ ರೂಪದಲ್ಲಿವೆ ಎಂದರ್ಥ. ಇದಕ್ಕೆ ಸರ್ಕಾರ ಅನುಮತಿ ನೀಡುತ್ತದೆ. ಇದು ಸರ್ಕಾರದಿಂದ ಅನುಮೋದಿಸಲ್ಪಟ್ಟ ಮಾದರಿಯಲ್ಲಿಯೂ ಇರಬೇಕು. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ನಂತಹ ದಾಖಲೆಗಳನ್ನು ಈಗ ಸ್ಮಾರ್ಟ್‌ಫೋನ್‌ನಲ್ಲಿಯೇ ಡೌನ್‌ಲೋಡ್ ಮಾಡಬಹುದು ಮತ್ತು ಎಲ್ಲಿ ಬೇಕಾದರೂ ಬಳಸಬಹುದು.

  MORE
  GALLERIES

 • 37

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಈ ಡಾಕ್ಯುಮೆಂಟ್​ಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಈಗ ತುಂಬಾ ಸುಲಭ. ಅದಕ್ಕೆ ಜಸ್ಟ್​ ವಾಟ್ಸಾಪ್ ಸಾಕು. ಈ ಎಲ್ಲಾ ದಾಖಲೆಗಳನ್ನು ನಿಮ್ಮ WhatsApp ನಲ್ಲಿ ಡೌನ್​ಲೋಡ್ ಮಾಡಬಹುದು. ಇದಕ್ಕಾಗಿ ಕೇಂದ್ರ ಸರ್ಕಾರದ MyGov ಹೆಲ್ಪ್‌ಡೆಸ್ಕ್, ಕೆಲವು ದಿನಗಳಿಂದ ವಾಟ್ಸಾಪ್ ಮೂಲಕ ಪ್ರಮುಖ ದಾಖಲೆಗಳನ್ನು ಡೌನ್‌ಲೋಡ್ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ.

  MORE
  GALLERIES

 • 47

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಇದಕ್ಕಾಗಿ ನೀವು ಕೇವಲ ಡಿಜಿಲಾಕರ್ ಅಕೌಂಟ್​​ ಹೊಂದಿರಬೇಕು ಅಷ್ಟೇ. ವಾಟ್ಸಾಪ್ ಮೂಲಕ ಡಿಜಿಲಾಕರ್‌ನಿಂದ ನಿಮ್ಮ ಡಾಕ್ಯುಮೆಂಟ್‌ಗಳನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದಕ್ಕೆ ಕೆಲವು ಸರಳ ಹಂತಗಳನ್ನು ಫಾಲೋ ಮಾಡಬೇಕಾಗುತ್ತದೆ. ಮೊದಲಿಗೆ MyGov ಸಹಾಯವಾಣಿ ಸಂಖ್ಯೆ +91 9013151515 ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಮಾಡಬೇಕು. ನಂತರ WhatsApp ಓಪನ್ ಮಾಡಿ ಅಲ್ಲಿ MyGov ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಬೇಕು.

  MORE
  GALLERIES

 • 57

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಚಾಟ್ ಬಾಕ್ಸ್ ಓಪನ್ ಆದ ಬಳಿಕ ಹಾಯ್ ಅಥವಾ ನಮಸ್ತೆ ಎಂದು ಸಂದೇಶ ಕಳುಹಿಸಿ. ನಂತರ ಡಿಜಿಲಾಕರ್ ಸೇವೆಗಳು ಮತ್ತು ವಾಟ್ಸಾಪ್‌ನಲ್ಲಿ ಕೋವಿನ್ ಎಂಬ ಎರಡು ಆಯ್ಕೆಗಳು ಬರುತ್ತವೆ. ಡಿಜಿಲಾಕರ್ ಖಾತೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಡಿಜಿಲಾಕರ್ ಖಾತೆಗೆ ಲಿಂಕ್ ಮಾಡಲಾದ 12-ಅಂಕಿಯ ಆಧಾರ್ ಸಂಖ್ಯೆಯನ್ನು ಹಾಕಿ.

  MORE
  GALLERIES

 • 67

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಬಳಿಕ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಅಲ್ಲಿ ಹಾಕಿ. ಡಿಜಿಲಾಕರ್‌ನಲ್ಲಿ ಸೇವ್ ಆಗಿರುವ ಎಲ್ಲಾ ದಾಖಲೆಗಳು ನಿಮ್ಮ ಚಾಟ್‌ಬಾಟ್‌ನಲ್ಲಿ ಕಾಣಿಸುತ್ತವೆ. ಇದರಲ್ಲಿ ನೀವು ಅಗತ್ಯವಿರುವ ಡಾಕ್ಯಮೆಂಟ್​​ ಅಥವಾ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನೀವು ಡೌನ್‌ಲೋಡ್ ಮಾಡಿದ ಫೈಲ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ PDF ಫಾರ್ಮ್ಯಾಟ್​​ನಲ್ಲಿ ಸೇವ್ ಆಗುತ್ತವೆ.

  MORE
  GALLERIES

 • 77

  WhatsAppನಲ್ಲೇ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್​ ಡೌನ್​ಲೋಡ್ ಮಾಡಿ!

  ಈ ಸರ್ವೀಸ್​ ಬಳಸಲು ನೀವು ಡಿಜಿಲಾಕರ್ ಅಕೌಂಟ್​ನ್ನು ಹೊಂದಿರಬೇಕು. ಅಲ್ಲದೆ ಮೂಲ ದಾಖಲೆಗಳನ್ನು ನಿಮ್ಮ ಡಿಜಿಲಾಕರ್ ಅಕೌಂಟ್​ನಲ್ಲಿ ಸೇವ್ ಮಾಡಿರಬೇಕು. ಆಗ ಮಾತ್ರ ನಿಮ್ಮ ದಾಖಲೆಗಳನ್ನು WhatsApp ನಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಡಿಜಿಲಾಕರ್ ಅಕೌಂಟ್​ ಇಲ್ಲವಾದರೆ, ಡಿಜಿಲಾಕರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

  MORE
  GALLERIES