Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

Xiaomi Offer: ಜನಪ್ರಿಯ ಸ್ಮಾರ್ಟ್​ಫೋನ್ ಕಂಪೆನಿಯಾಗಿರುವ ಶಿಯೋಮಿ ಇತ್ತೀಚೆಗೆ ತನ್ನ ಬ್ರಾಂಡ್​ನ ಅಡಿಯಲ್ಲಿ ಶಿಯೋಮಿ 13 ಪ್ರೋ ಎಂಬ ಸ್ಮಾರ್ಟ್​​ಫೋನ್ ಲಾಂಚ್ ಮಾಡಿತ್ತು. ಇದೀಗ ಆರಂಭದಲ್ಲೇ ಈ ಸ್ಮಾರ್ಟ್​​ಫೋನ್​ ಮೇಲೆ ಬರೋಬ್ಬರಿ 10 ಸಾವಿರದವರೆಗೆ ಆಫರ್​ ಅನ್ನು ಘೋಷಿಸಿದೆ.

First published:

  • 19

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಶಿಯೋಮಿ 13 ಸೀರಿಸ್​ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಶಿಯೋಮಿ 13 ಪ್ರೋ ಮೊಬೈಲ್ ಅನ್ನು ಭಾರತಕ್ಕೆ ತಂದ ಶಿಯೋಮಿ ಕಂಪೆನಿ ಇದರ ಬೆಲೆಯನ್ನು ಸಹ ಘೋಷಿಸಿದೆ. ಬೆಲೆಯ ಜೊತೆಗೆ, ಶಿಯೋಮಿ ಆಸಕ್ತಿದಾಯಕ ಆಫರ್ಸ್​​ಗಳನ್ನು ಸಹ ಘೋಷಿಸಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ರೂ.79,999 ಆಗಿದೆ. ಆದರೆ ಮೊದಲ ಮಾರಾಟದಲ್ಲಿ ರೂ.10,000 ವಿಶೇಷ ಡಿಸ್ಕೌಂಟ್ ಅನ್ನು ಸಹ ಘೋಷಿಸಲಾಗಿದೆ.

    MORE
    GALLERIES

  • 29

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಶಿಯೋಮಿ 13 ಪ್ರೋ ಸ್ಮಾರ್ಟ್‌ಫೋನ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಈ ಮೊಬೈಲ್ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಇದರೊಂದಿಗೆ, ಸ್ನಾಪ್​​ಡ್ರಾಗನ್​ 8 ಜೆನ್​ 2 ಪ್ರೊಸೆಸರ್, LTPO OLED ಡಿಸ್ಪ್ಲೇ, 120W ವೇಗದ ಚಾರ್ಜಿಂಗ್ ಬೆಂಬಲದಂತಹ ವಿಶೇಷ ಫೀಚರ್ಸ್​ಗಳನ್ನು ಹೊಂದಿದೆ.

    MORE
    GALLERIES

  • 39

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಶಿಯೋಮಿ 13 ಪ್ರೋ ಸ್ಮಾರ್ಟ್​​ಫೋನ್ ಸದ್ಯ​ ಭಾರತದಲ್ಲಿ ಒಂದೇ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದು 12ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 79,999 ರೂಪಾಯಿಯಾಗಿದೆ. ಶಿಯೋಮಿ ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ ವಿಶೇಷ ಆರಂಭಿಕ ಮಾರಾಟವನ್ನು ಘೋಷಿಸಲಿದೆ. ಶಿಯೋಮಿ 13 ಪ್ರೋ ಅನ್ನು ಖರೀದಿಸುವ ಮೊದಲ 1000 ಅಭಿಮಾನಿಗಳು ಶಿಯೋಮಿ 13 ಪ್ರೋ ಮರ್ಚಂಡೈಸ್ ಬಾಕ್ಸ್ ಅನ್ನು ಪಡೆಯುತ್ತಾರೆ.

    MORE
    GALLERIES

  • 49

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಈ ಕೊಡುಗೆಯು Mi ನ ಅಧಿಕೃತ ವೆಬ್‌ಸೈಟ್, Mi ಹೋಮ್ಸ್, Mi ಸ್ಟುಡಿಯೋಸ್‌ನಲ್ಲಿ Xiaomi 13 Pro ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಖರೀದಿಸಿದರೆ ರೂ.10,000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್‌ ಮೂಲಕ ಈ ಸ್ಮಾರ್ಟ್​​ಫೋನ್​ ಅನ್ನು ಕೇವಲ ರೂ.69,999 ಕ್ಕೆ ಖರೀದಿ ಮಾಡ್ಬಹುದು.

    MORE
    GALLERIES

  • 59

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಇನ್ನು ಈ ಸ್ಮಾರ್ಟ್​ಫೋನ್​ನಲ್ಲಿ ಎಕ್ಸ್​​ಚೇಂಜ್ ಆಫರ್​ ಸಹ ಲಭ್ಯವಿದೆ| ಈ ಮೂಲಕ ಐಫೋನ್​ ಕೊಟ್ಟು ಈ ಸ್ಮಾರ್ಟ್​​ಫೋನ್​ ಖರೀದಿಸಿದರೆ ಸುಮಾರು 8 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಅದೇ ರೀತಿ ನೀವು ಶಿಯೋಮಿ ಮತ್ತು ರೆಡ್​​ಮಿ ಮೊಬೈಲ್‌ಗಳನ್ನು ವಿನಿಮಯ ಮಾಡಿಕೊಂಡರೆ, ನೀವು ರೂ.12,000 ಹೆಚ್ಚುವರಿ ಎಕ್ಸ್​ಚೇಂಜ್ ಆಫರ್​ ಅನ್ನು ಪಡೆಯಬಹುದು. ಮೊದಲ ಮಾರಾಟ ಮಾರ್ಚ್ 10 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನು Mi ಅಧಿಕೃತ ವೆಬ್‌ಸೈಟ್, Mi ಹೋಮ್ಸ್, Mi ಸ್ಟುಡಿಯೋಸ್ ಮತ್ತು ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ ಅಮೆಜಾನ್​​​ನಿಂದ ಖರೀದಿಸಬಹುದು.

    MORE
    GALLERIES

  • 69

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಶಿಯೋಮಿ 13 ಪ್ರೋ ಸ್ಮಾರ್ಟ್‌ಫೋನ್‌ನ ಫೀಚರ್ಸ್​ ಬಗ್ಗೆ ಹೇಳುವುದಾದ್ರೆ, ಇದು 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ LTPO OLED ಡಿಸ್ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಸಹ ಲಭ್ಯವಿದೆ. ಇದು Qualcomm ನ ಇತ್ತೀಚಿನ Snapdragon 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಶಿಯೋಮಿ 13 ಪ್ರೋ ಆಂಡ್ರಾಯ್ಡ್​ 13 ಪ್ಲಸ್​ MIUI 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

    MORE
    GALLERIES

  • 79

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಶಿಯೋಮಿ 13 ಪ್ರೋ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿವೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್​​ಗಳೊಂದಿಗೆ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ. 

    MORE
    GALLERIES

  • 89

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಇಷ್ಟು ದೊಡ್ಡ ಕ್ಯಾಮೆರಾ ಸೆನ್ಸಾರ್ ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ. ದೊಡ್ಡ ಸೆನ್ಸಾರ್​ ಹೆಚ್ಚು ಬೆಳಕಿನೊಂದಿಗೆ ಉತ್ತಮವಾದ ಫೋಟೋವನ್ನು ಕ್ಲಿಕ್ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಲೈಕಾ 75 ಎಂಎಂ ಫ್ಲೋಟಿಂಗ್ ಟೆಲಿಫೋಟೋ ಲೆನ್ಸ್ ಅನ್ನು ಸಹ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

    MORE
    GALLERIES

  • 99

    Xiaomi Offer: ಶಿಯೋಮಿಯ ಆರಂಭಿಕ ಮಾರಾಟದಲ್ಲೇ 10 ಸಾವಿರ ರಿಯಾಯಿತಿ ನೀಡಿದ ಕಂಪೆನಿ! ಫೀಚರ್ಸ್​ ಹೇಗಿದೆ ಗೊತ್ತಾ?

    ಶಿಯೋಮಿ 13 ಪ್ರೋ ಮೊಬೈಲ್ 4,820mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕೇವಲ 19 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. 50W ಟ್ರೂ ವೈರ್‌ಲೆಸ್ ಟರ್ಬೊ ಚಾರ್ಜ್, 10W ರಿವರ್ಸ್ ವೈರ್‌ಲೆಸ್ ಚಾರ್ಜ್ ಅನ್ನು ಸಹ ಬೆಂಬಲಿಸುತ್ತದೆ. 

    MORE
    GALLERIES