Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

ಇತ್ತೀಚೆಗೆ ಸೈಬರ್​ ವಂಚನೆಯ ಸುದ್ದಿಗಳು ಕೇಳುತ್ತಲೇ ಇದೆ. ಎಲ್ಲಿ ಹೋದರೂ ವಾಟ್ಸಾಪ್ ಹ್ಯಾಕ್​, ಜಿಮೇಲ್ ಹ್ಯಾಕ್​ ಎಂಬ ಸುದ್ದಿಗಳೇ ವೈರಲ್ ಆಗುತ್ತಿದೆ. ಆದ್ರೆ ಇಲ್ಲೊಬ್ಬರು ತನ್ನನ್ನು ಮೋಸ ಮಾಡಲು ಬಂದ ವಂಚಕನನ್ನು ಹೇಗೆ ನಿಭಾಯಿಸಿದ್ದಾರೆ ನೋಡಿ.

First published:

  • 17

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಈಗಂತೂ ಈ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕೆಲಸ ಕೊಡಿಸುತ್ತೇವೆ ಅಂತ ಯಾವುದೋ ಒಂದು ಲಿಂಕ್ ಅನ್ನು ಜನರ ವಾಟ್ಸಾಪ್ ಗೆ ಕಳುಹಿಸುವುದು ಮತ್ತು ಅದನ್ನು ಕ್ಲಿಕ್ ಮಾಡಿದರೆ ನಿಮಗೆ ಕೆಲಸ ಸಿಗುತ್ತದೆ, ನೀವು ಅದರಿಂದ ಮನೆಯಲ್ಲಿಯೇ ಕುಳಿತು ಚೆನ್ನಾಗಿ ದುಡ್ಡು ಮಾಡಬಹುದು ಅಂತೆಲ್ಲಾ ಸೈಬರ್ ವಂಚಕರು ಅಮಾಯಕ ಜನರ ಮೇಲೆ ತಮ್ಮ ಬಲೆಯನ್ನು ಬೀಸುತ್ತಾರೆ.

    MORE
    GALLERIES

  • 27

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಇಷ್ಟೇ ಅಲ್ಲದೆ ಅನೇಕ ರೀತಿಯ ಪಾರ್ಟ್ ಟೈಮ್ ಕೆಲಸಗಳು ಅಂತ ಸುಮ್ಮನೆ ಯಾವುದೋ ಲಿಂಕ್ ಗಳನ್ನು ಅಮಾಯಕ ಜನರ ಮೊಬೈಲ್ ಫೋನ್​​ಗೆ ಕಳುಹಿಸುವುದು ಮತ್ತು ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಕದಿಯುವುದು. ಹೀಗೆ ಅನೇಕ ಕಳ್ಳತನದ ಮಾರ್ಗಗಳನ್ನು  ಆನ್ಲೈನ್ ನಲ್ಲಿ ಶುರು ಮಾಡಿಕೊಂಡಿದ್ದಾರೆ.

    MORE
    GALLERIES

  • 37

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಇತ್ತೀಚೆಗೆ ಈ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಜೆರೋಧಾ ಸಿಇಒ ನಿತಿನ್ ಕಾಮತ್ ಸಹ ಜನರಿಗೆ ತುಂಬಾನೇ ಎಚ್ಚರಿಕೆಯಿಂದ ಇರಿ ಅಂತ ಹೇಳಿದ್ದರು. ಹೀಗೆ ಆನ್​​ಲೈನ್​ನಲ್ಲಿ ವಂಚಕರು ಬೇಗನೆ ದುಡ್ಡು ಮಾಡಬಹುದು ಅಂತೆಲ್ಲಾ ಆಮಿಷವನ್ನು ಒಡ್ಡುತ್ತಾರೆ. ಆದರೆ ಇಂತಹ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಅಂತ ನಿತಿನ್ ಅವರು ಜನರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.

    MORE
    GALLERIES

  • 47

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಸೈಬರ್ ವಂಚನೆಯಿಂದ ಬುದ್ದಿವಂತಿಕೆಯಿಂದ ಪಾರಾದ ಮಹಿಳೆ: ಈಗ ಇಲ್ಲೊಂದು ಅಂತಹ ವಾಟ್ಸಾಪ್ ಸ್ಕ್ಯಾಮ್ ಗೆ ಪ್ರಯತ್ನ ನಡೆದಿದ್ದು, ಅದನ್ನ ಮಹಿಳೆಯೊಬ್ಬರು ತುಂಬಾನೇ ಬುದ್ದಿವಂತಿಕೆಯಿಂದ ನಿಭಾಯಿಸಿದ್ದಾರೆ ಮತ್ತು ಆ ಸೈಬರ್ ವಂಚನೆಯಿಂದ ಪಾರಾಗಿದ್ದಾರೆ. ಮಾಧ್ಯಮದಲ್ಲಿ ಬಂದ ಸುದ್ದಿಯ ಪ್ರಕಾರ, ಆನ್​ಲೈನ್​ ಹಗರಣಗಳು ಈಗೇನು ಹೊಸತೇನಲ್ಲ. ತಂತ್ರಜ್ಞಾನದ ಅಭಿವೃದ್ಧಿಯು ಕಳ್ಳ ಖದೀಮರಿಗೆ ಜನರು ತುಂಬಾನೇ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕ್ಷಣ ಮಾತ್ರದಲ್ಲಿ ದೋಚಲು ಹೆಚ್ಚುವರಿ ಅವಕಾಶಗಳನ್ನು ನೀಡಿದಂತಾಗಿದೆ.

    MORE
    GALLERIES

  • 57

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಸಾಲ್ಟ್ ನ ಸಹ-ಸಂಸ್ಥಾಪಕಿ ಉದಿತಾ ಪಾಲ್, ಇಂತಹ ಖದೀಮನೊಬ್ಬ ತನ್ನಿಂದ ಹಣವನ್ನು ಸುಲಿಗೆ ಮಾಡುವ ಪ್ರಯತ್ನಕ್ಕೆ ವಿಭಿನ್ನ ರೀತಿಯಲ್ಲಿ ಬ್ರೇಕ್ ಹಾಕಿದ್ದಾರೆ ನೋಡಿ. ಬೆಂಗಳೂರು ಫಿನ್​ಟೆಕ್​ ಕಂಪನಿಯ ಸಹ-ಸಂಸ್ಥಾಪಕಿ ಖದೀಮನೊಂದಿಗೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ ಕೆಲವು ಸ್ಕ್ರೀನ್​​ಶಾಟ್​​ಗಳನ್ನು ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್​​ಶಾಟ್​​ಗಳು ಉದಿತಾ ಅವರನ್ನು ಲಿಂಕ್ ಅನ್ನು ಕ್ಲಿಕ್ ಮಾಡಲು, ವಿಡಿಯೋವನ್ನು ವೀಕ್ಷಿಸಲು, ನಂತರ ಕೆಲಸಕ್ಕೆ ಅವರನ್ನು ಪರಿಗಣಿಸುವುದಾಗಿ ಅದನ್ನು ಲೈಕ್ ಮಾಡಲು ಹೇಳಿದ್ದನ್ನು ಇಲ್ಲಿ ನಾವು ನೋಡಬಹುದಾಗಿದೆ.

    MORE
    GALLERIES

  • 67

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಇಲ್ಲಿ ಮೆಸೇಜ್ ಮಾಡಿದ ವ್ಯಕ್ತಿ ತಾನು ಮುಂಬೈ ಮೂಲದವನು ಅಂತ ಹೇಳಿಕೊಂಡಿದ್ದರಂತೆ ಮತ್ತು ವಿಚಿತ್ರ ಸಂಖ್ಯೆಯಿಂದ ಸಂದೇಶ ಕಳುಹಿಸಿದ್ದಾರೆ. ಈ ವ್ಯಕ್ತಿ ಕಳುಹಿಸಿದ ಪ್ರತಿ ಮೆಸೇಜ್ ಗೆ ಉದಿತಾ ಅವರು ತುಂಬಾನೇ ಬುದ್ದಿವಂತಿಕೆಯಿಂದ ಪ್ರತಿಕ್ರಿಯಿಸಿದರು. ಉದಿತಾ ಅವರು ಆ ವ್ಯಕ್ತಿಯ ಉದ್ದೇಶವನ್ನು ಮತ್ತು ತಂತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಆಕೆಯ ಜೊತೆ ಚಾಟ್ ಮಾಡುವುದನ್ನು ನಿಲ್ಲಿಸಿ ಆಕೆಯನ್ನು ತಕ್ಷಣವೇ ಬ್ಲಾಕ್ ಮಾಡಿದ್ದಾನೆ ಆ ವ್ಯಕ್ತಿ.

    MORE
    GALLERIES

  • 77

    Cyber Crime: ಹ್ಯಾಕರ್​ ಅನ್ನೇ ವಾಟ್ಸಾಪ್​​ನಲ್ಲಿ ಟ್ರೋಲ್ ಮಾಡಿದ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

    ಉದಿತಾ ಅವರ ಕೆಲಸವನ್ನು ಶ್ಲಾಘಿಸಿದ ನೆಟ್ಟಿಗರು: ಈ ಟ್ವೀಟ್ ಅನ್ನು 1,22,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ಉದಿತಾ ಈ ವಿಷಯವನ್ನು ನಿಭಾಯಿಸಿದ ರೀತಿ ಎಲ್ಲರಿಗೂ ಖುಷಿ ನೀಡಿದೆ. ವಂಚಕನು ಅವಳಿಂದ ಹಣವನ್ನು ಒತ್ತಾಯಿಸುವ ಪ್ರಯತ್ನವನ್ನು ನೋಡಿ ಅನೇಕ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ.

    MORE
    GALLERIES