ಸ್ಮಾರ್ಟ್ಫೋನಲ್ಲಿರುವ ಗೂಗಲ್ ಮ್ಯಾಪ್ ಕೆಲವೊಮ್ಮೆ ಆಪ್ತ ರಕ್ಷಕನಾದರೆ ಇನ್ನು ಕೆಲವೊಮ್ಮೆ ಅದುವೆ ನಮ್ಮನ್ನ ಸಂಕಷ್ಟಕ್ಕೆ ದೂಡುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ಗೂಗಲ್ ಮ್ಯಾಪ್ ನಂಬಿ ಸುರಕ್ಷಿತವಲ್ಲದ ಸ್ಥಳಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದಾಳೆ. ತಪ್ಪು ದಾರಿಯಲ್ಲಿ ಬಂದಿರುವುದು ಮಹಿಳೆಗೆ ಅನುಮಾನ ಮೂಡಿತ್ತಾದರು. ತಾನು ತಲುಪಿದ್ದ ಸ್ಥಳ ದರೋಡೆ ಮುಂತಾದ ಕುಖ್ಯಾತ ಘಟನೆಗಳಿಂದ ಗುರುತಿಸಿದೆ ಎಂಬುದು ನಂತರ ಗೊತ್ತಾಗಿದೆ.
ಮಹಿಳೆ ನಡೆದ ಘಟನೆ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ, ಅಧಿಕಾರಿಗಳು ಆ ಸ್ಥಳಕ್ಕೆ ಏಕೆ ಹೋದೆ ಎಂದು ಕೇಳಿದರು. ಅಲ್ಲದೆ ಆ ಪ್ರದೇಶವು ಅಪರಾಧ ಘಟನೆಗಳಿಗೆ ಕುಖ್ಯಾತವಾಗಿದೆ ಎಂದು ಹೇಳಿದರು. ಆದರೆ ಮಹಿಳೆ ತನಗೆ ಸರಿಯಾದ ದಾರಿ ನಕ್ಷೆಯನ್ನು ತೋರಿಸಲು ಗೂಗಲ್ ಮೊರೆ ಹೋದೆ. ಆದರೆ ಗೂಗಲ್ ಮ್ಯಾಪ್ನಿಂದಾಗಿ ದರೋಡೆಗೆ ಒಳಗಾದೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾಳೆ