ಹಾಗಿದ್ರೆ ಎಸಿ ಬಿಳಿ ಬಣ್ಣದಲ್ಲಿ ಮಾತ್ರ ಏಕೆ ಬರುತ್ತದೆ ಎಂದು ಈಗ ತಿಳಿಯೋಣ? ವಾಸ್ತವವಾಗಿ, ಬಿಳಿ ಅಥವಾ ತಿಳಿ ಬಣ್ಣವು ಸೂರ್ಯನ ಬೆಳಕು ಅಥವಾ ಶಾಖವನ್ನು ಬೇಗನೆ ಹೀರಿಕೊಳ್ಳುವುದಿಲ್ಲ. ಈ ಬಣ್ಣಗಳಲ್ಲಿ ಶಾಖದ ಹೀರಿಕೊಳ್ಳುವಿಕೆ ಕಡಿಮೆ. ಆದ್ದರಿಂದ, ಬಿಳಿ ಬಣ್ಣದ ಸಾಧನಗಳು ಕಡಿಮೆ ಶಾಖವನ್ನು ಹೀರಿಕೊಳ್ಳುತ್ತವೆ. ಅದೇ ಕಾರಣಕ್ಕೆ ಎಸಿಯನ್ನು ಬಿಳಿ ಬಣ್ಣದಲ್ಲಿ ಮಾಡುತ್ತಾರೆ.
ಇನ್ನು ನೀವು ಎಸಿ ಘಟಕವನ್ನು ಹೊರಗಡೆ ಇಡುವ ಸ್ಥಳಕ್ಕೆ ಅನುಗುಣವಾಗಿ ಮನೆಯಲ್ಲಿ ಉತ್ತಮ ಕೂಲಿಂಗ್ ಮತ್ತು ವಿದ್ಯುತ್ ಬಿಲ್‌ಗಳಲ್ಲಿ ಉಳಿತಾಯದಂತಹ ಪ್ರಯೋಜನಗಳೂ ಇವೆ. ಎಸಿ ಘಟಕಕ್ಕೆ ಗಾಢ ಬಣ್ಣ ನೀಡಿದರೆ ಅದು ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ನಿಮ್ಮ ಎಸಿ ಮೇಲೆ ಸಮಸ್ಯೆಗಳು, ಅಧಿಕ ಕರೆಂಟ್ ಬಿಲ್ ಈ ರೀತಿಯ ತೊಂದರೆಗಳು ಎದುರಾಗುತ್ತದೆ.