ಇತ್ತೀಚೆಗೆ ಟೆಕ್ನಾಲಜಿಗಳು ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ದಿನ ಕಳೆದಂತೆ ಮಾರುಕಟ್ಟೆಗೆ ಹೊಸ ಹೊಸ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗLuಳ ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇರುತ್ತದೆ. ಆದರೆ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಬಳಕೆದಾರರಿಗೆ ಗೊತ್ತಿಲ್ಲದ ಹಲವಾರು ವಿಚಾರಗಳಿವೆ. ಇದರಲ್ಲಿ ನೀಡುವಂತಹ ಕೆಲವೊಂದು ಫೀಚರ್ಗಳು ಅದರದೇ ಆದ ಕಾರಣಗಳನ್ನು ಹೊಂದಿರುತ್ತದೆ.
ಇನ್ನು ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಲ್ಯಾಪ್ಟಾಪ್, ಕಂಪ್ಯೂಟರ್ಗಳು ಬಹಳಷ್ಟು ಬಳಕೆಯಲ್ಲಿವೆ. ಯಾವುದೇ ಕೆಲಸವನ್ನು ಮಾಡ್ಬೇಕಂದ್ರು ಲ್ಯಾಪ್ಟಾಪ್ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಆದ್ರೆ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಕೀಬೋರ್ಡ್ನಲ್ಲಿರುವಂತಹ ಎಫ್ ಮತಗ್ತು ಜೆ ಅಕ್ಷರಗಳ ಕೆಳಗೆ ಸಣ್ಣದೊಂದು ಲೈನ್ ಹಾಕಿರುತ್ತಾರೆ. ಇದನ್ನು ಯಾಕೆ ಇಟ್ಟಿದ್ದಾರೆಂದು ಹೆಚ್ಚಿನವರಿಗೆ ಗೊತ್ತಿಲ್ಲ.
Computer Mouseನ್ನು ಮೌಸ್ ಅನ್ನೋದೇಕೆ?: ಕಂಪ್ಯೂಟರ್ನಲ್ಲಿ ಬಳಸಲಾಗುವ ಮೌಸ್ಗೆ ಈ ಹೆಸರು ಬರಲು ಕಾರಣ ವೇನು ಎಂಬುದನ್ನು ಹೇಳುವುದಾದರೆ, ಮೌಸ್ ಅನ್ನು ಮೊದಲ ಬಾರಿಗೆ ಆವಿಷ್ಕಾರ ಮಾಡಿದಾಗ ಈ ಸಾಧನಕ್ಕೆ ಏನು ಹೆಸರನ್ನಿಡುವುದು ಎಂಬ ಎಲ್ಲಾ ತಂತ್ರಜ್ಞರಲ್ಲಿ ಮೂಡಿತು. ಆಗ ಮೌಸ್ ಒಂದು ಸಣ್ಣದಾಗಿರುವಂತಹ ಸಾಧನವಾಗಿದೆ. ಈ ಸಾಧನವನ್ನು ಆಚೆ ಈಚೆ ಸ್ಥಾನ ಬದಲಾಯಿಸಿದಾಗ ಇಲಿ ಓಡಾಡುತ್ತಿರುವಂತೆ ಕಾಣುತ್ತದೆ.