ಇನ್ನು ಈ ಏರೋಪ್ಲೇನ್ ಮೋಡ್ ಅನ್ನು ವಿಮಾನ ಪ್ರಯಾಣದಲ್ಲಿ ಏಕೆ ಬಳಸುತ್ತಾರೆ ಎಂದು ಹೆಚ್ಚಿನವರಲ್ಲಿ ಪ್ರಶ್ನೆ ಮೂಡುತ್ತದೆ. ವಾಸ್ತವವಾಗಿ, ವಾಯುಯಾನಕ್ಕಾಗಿ ಅನೇಕ ರೀತಿಯ ಸಂಚರಣೆ ವ್ಯವಸ್ಥೆಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನದಲ್ಲಿ ಕುಳಿತವರೆಲ್ಲರೂ ಫೋನ್ನಲ್ಲಿ ಮಾತನಾಡುವುದನ್ನು ಮುಂದುವರಿಸಿದರೆ ಅಥವಾ ಇಂಟರ್ ನೆಟ್ ಬಳಸಿದರೆ ವಿಮಾನದ ಸಿಗ್ನಲ್ ವ್ಯವಸ್ಥೆಗೆ ತೊಂದರೆಯಾಗಬಹುದು. ಇದರಿಂದ ಪೈಲಟ್‌ಗಳು ರಾಡಾರ್ ಮತ್ತು ಕಂಟ್ರೋಲ್ ರೂಮ್‌ನೊಂದಿಗೆ ಸಂವಹನ ನಡೆಸಲು ಕಷ್ಟವಾಗಬಹುದು.