ಇತರ ಬಳಕೆದಾರರ ಸ್ಟೇಟಸ್ ಅನ್ನು ವರದಿ ಮಾಡಬಹುದು: ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ WhatsApp ತಂದಿರುವ ಈ ಹೊಸ ವೈಶಿಷ್ಟ್ಯಗಳನ್ನು ಅನುಭವಿಸಲು ಅವಕಾಶವಿದೆ. ಇದು ಹಂತ ಹಂತವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಪ್ರಸ್ತುತ, ಟೆಸ್ಟ್‌ಫ್ಲೈಟ್ ಅಪ್ಲಿಕೇಶನ್‌ನಿಂದ iOS 23.4.0.74 ಅಪ್‌ಡೇಟ್ ಅನ್ನು ಸ್ಥಾಪಿಸಿದ ವಾಟ್ಸಾಪ್ ಬೀಟಾ ಪರೀಕ್ಷಕರಿಗೆ ಈ ವೈಶಿಷ್ಟ್ಯಗಳು ಲಭ್ಯವಿವೆ.
ವಾಟ್ಸಾಪ್ ಅಪ್‌ಡೇಟ್‌ಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ WABetaInfo ನ ವರದಿಯ ಪ್ರಕಾರ, 'ಸ್ಟೇಟಸ್ ಅಪ್‌ಡೇಟ್‌ಗಳನ್ನು ರಿಪೋರ್ಟ್ ಮಾಡುವ ಸೌಲಭ್ಯವು ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಿದೆ. ಈ ವೈಶಿಷ್ಟ್ಯವನ್ನು ಒದಗಿಸಿದ್ದಕ್ಕಾಗಿ ವಾಟ್ಸಾಪ್ಗೆ ಧನ್ಯವಾದಗಳು. ಇನ್ಮುಂದೆ ವಾಟ್ಸಾಪ್ನ ನಿಯಮಗಳನ್ನು ಉಲ್ಲಂಘಿಸಿ ಸ್ಟೇಟಸ್ ಅಪ್ಡೇಟ್ ಮಾಡುವ ಬಳಕೆದಾರರು ಮಾಡರೇಶನ್ ತಂಡಕ್ಕೆ ವರದಿ ಮಾಡಬಹುದು.
ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ: WABetaInfo ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ, ಇನ್ನು ಈ ಸ್ಟೇಟಸ್ ರಿಪೋರ್ಟ್ ಮಾಡುವ ಹೊಸ ಫೀಚರ್ ಯಾರಿಗೆ ಲಭ್ಯವಾಗುತ್ತದೆಯೋ ಅವರಿಗೆ ಸ್ಟೇಟಸ್ ನೋಡುವಾಗಲೇ ರಿಪೋರ್ಟ್ ಎಂಬ ಆಯ್ಕೆ ಕಾಣುತ್ತದೆ. ಅದರಲ್ಲಿ ಏನಾದರು ಸೆನ್ಸಿಟಿವ್ ವಿಷಯಗಳಿದ್ದರೆ ಅದನ್ನು ನೋಡುಗರು ರಿಪೋರ್ಟ್ ಮಾಡಬಹುದು. ನಂತರ ಇದನ್ನು ವಾಟ್ಸಾಪ್ ಚೆಕ್ ಮಾಡಿ ಕ್ರಮ ಕೈಗೊಳ್ಳುತ್ತದೆ.
ಅದರ ಹೊರತಾಗಿ, ಈ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವಿಷಯದಲ್ಲಿ ಯಾವುದೇ ಸಮಸ್ಯೆಗಳನ್ನು ತರುವುದಿಲ್ಲ. ಸಂದೇಶಗಳು ಮತ್ತು ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿವೆ. ವಾಟ್ಸಾಪ್, ಮೆಟಾ, ಪ್ರಾಕ್ಸಿ ಪೂರೈಕೆದಾರರು ಅಥವಾ ಬೇರೆ ಯಾರೂ WhatsApp ಬಳಕೆದಾರರ ಖಾಸಗಿ ಸಂದೇಶಗಳನ್ನು ಓದಲು ಅಥವಾ ಖಾಸಗಿ ಕರೆಗಳನ್ನು ಆಲಿಸಲು ಸಾಧ್ಯವಿಲ್ಲ ಎಂದು WABetaInfo ವರದಿ ಮಾಡಿದೆ.
ನಾಟಿಫಿಕೇಶನ್ ಮ್ಯೂಟ್ ಆಯ್ಕೆ: ಕೆಲವು ಬಳಕೆದಾರರು ಮೆಸೇಜ್ ನಾಟಿಫಿಕೇಶನ್ಗಳನ್ನು ಮ್ಯೂಟ್ ಆಯ್ಕೆಯನ್ನು ನೋಡುತ್ತಾರೆ. ಇತ್ತೀಚಿನ ನವೀಕರಣವನ್ನು ಸ್ಥಾಪಿಸಿದ ನಂತರ ಅಧಿಸೂಚನೆಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡುವ ವೈಶಿಷ್ಟ್ಯವಿದೆ. ಇದಲ್ಲದೆ, ವಾಟ್ಸಾಪ್ ಇಂಡಿಯಾ ಜನವರಿಯಲ್ಲಿ 2.9 ಮಿಲಿಯನ್ ಅಕೌಂಟ್ಗಳನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ಇತ್ತೀಚಿನ ಮಾಸಿಕ ವರದಿ ಪ್ರಕಾರ 'ಬಳಕೆದಾರರ-ಸುರಕ್ಷತಾ ವರದಿ'ಯಲ್ಲಿ, ಬಳಕೆದಾರರಿಂದ ಬಂದ ದೂರುಗಳು ಮತ್ತು ವಾಟ್ಸಾಪ್ ಕಂಪನಿ ತೋರಿಸಿದ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ.