WhatsApp: ಇಲ್ಲಿದೆ ವಾಟ್ಸಪ್ ಹೊಸ ಫೀಚರ್ಸ್! ನೀವು ಈ ಆಯ್ಕೆ ಹೊಂದಿದ್ದೀರಾ ಗಮನಿಸಿ
WhatsApp ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣ ಮತ್ತು ಎಲ್ಲರಿಗೂ ಯೂಸರ್ ಪ್ರೆಂಡ್ಲಿ ಎನಿಸುವ ಸಾಮಾಜಿಕ ಜಾಲತಾಣವಾಗಿದ್ದು ಇದು ಹಲವಾರು ನವೀಕರಣಗಳನ್ನು ಮಾಡುತ್ತಾ ಜನರ ಉಪಯೋಗಕ್ಕೆ ಮತ್ತಷ್ಟು ಸಹಕಾರಿಯಾಗುತ್ತದೆ.
WhatsApp ಪ್ರಪಂಚದಾದ್ಯಂತ 2 ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಆದರೆ ಇತ್ತೀಚಿಗೆ ವಾಟ್ಸಾಪ್ ಬಿಡುಗಡೆ ಮಾಡಿರುವ ಟಾಪ್ ಫೀಚರ್ಗಳು ಯಾವುವು ಎಂಬುದನ್ನು ಈಗ ತಿಳಿಯೋಣ.
2/ 8
ಇತ್ತೀಚೆಗೆ ಬಂದ ಈ ಹೊಸ ಫೀಚರ್ಸ್ನಾ ನೀವು ಯೂಸ್ ಮಾಡುತ್ತಿದ್ದೀರಾ ಎಂದು ಸ್ವಲ್ಪ ಇಲ್ಲಿ ಗಮನಿಸಿ. ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿರುವ ವೈಶಿಷ್ಟ್ಯಗಳನ್ನು ಪ್ರಾರಂಭಿಸಲಾಗುತ್ತಿದೆ.
3/ 8
ಬಳಕೆದಾರರು ಈಗಾಗಲೇ ಮಾತನಾಡುತ್ತಿರುವ ಕರೆಗೆ ಇನ್ನೊಬ್ಬ ವ್ಯಕ್ತಿಯನ್ನು ಆಹ್ವಾನಿಸಬಹುದು. ಈ ಸೌಲಭ್ಯವು ಆಡಿಯೋ ಮತ್ತು ವೀಡಿಯೋ ಕರೆಗಳೆರಡಕ್ಕೂ ಲಭ್ಯವಿದೆ. ಕರೆ ಲಿಂಕ್ ಅನ್ನು ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
4/ 8
WhatsApp ಬಳಕೆದಾರರು ಪ್ರತಿದಿನ ಸಂದೇಶಗಳನ್ನು ಕಳುಹಿಸುತ್ತಾರೆ. ಆದರೆ ಕೆಲವೊಮ್ಮೆ ತಪ್ಪಾಗಿ ಬೇರೆಯವರಿಗೆ ಸಂದೇಶ ಕಳುಹಿಸಬಹುದು. ಇದನ್ನು ತಿಳಿದುಕೊಂಡು ಸಂದೇಶವನ್ನು ಅಳಿಸಲು ಪ್ರಯತ್ನಿಸಿದಾಗ, ನೀವು ಡಿಲೀಟ್ ಫಾರ್ ಎವ್ರಿ ಒನ್ ಮಾಡಿದರೂ ಸಹ ಅದನ್ನು ನೀವು ರದ್ದು ಪಡಿಸುವ ಆಯ್ಕೆ ಕೂಡ ಬಂದಿದೆ.
5/ 8
ಕಂಪನಿಯು ಇತ್ತೀಚೆಗೆ ವಾಟ್ಸಾಪ್ ಗುಂಪುಗಳಿಗೆ ಪೋಲ್ ವೈಶಿಷ್ಟ್ಯವನ್ನು ತಂದಿದೆ. ಯಾವುದೇ ವಿಷಯದ ಕುರಿತು ಗುಂಪಿನಲ್ಲಿ ಚರ್ಚೆ ನಡೆಸಲು ಈ ವೈಶಿಷ್ಟ್ಯವನ್ನು ಬಳಸಬಹುದು. WhatsApp ಪೋಲ್ ವೈಶಿಷ್ಟ್ಯವನ್ನು ಗುಂಪಿನ ಯಾವುದೇ ಸದಸ್ಯರು ಬಳಸಬಹುದು.
6/ 8
WhatsApp ಪರಿಚಯಿಸಿದ ಈ ವೈಶಿಷ್ಟ್ಯದ ಮೂಲಕ, ನಿಮ್ಮ ಸಂಖ್ಯೆಗೆ WhatsApp ಸಂದೇಶವನ್ನು ಕಳುಹಿಸಬಹುದು. ಈ WhatsApp Message to Yourselfನಲ್ಲಿ ನಿಮ್ಮ ಅಗತ್ಯ ಕೋಡ್, ತರಕಾರಿ ಪಟ್ಟಿ, ದಿನದ ಕೆಲಸ ಇವುಗಳನ್ನು ಬರೆದಿಡಬಹುದು.
7/ 8
ವಾಟ್ಸಾಪ್ ಗ್ರೂಪ್ ಕಾಲ್ನಲ್ಲಿ ಭಾಗವಹಿಸುವವರ ಆಡಿಯೊವನ್ನು ಮ್ಯೂಟ್ ಮಾಡುವ ವೈಶಿಷ್ಟ್ಯವು ಇತ್ತೀಚೆಗೆ ಲಭ್ಯವಾಗಿದೆ. ಗ್ರೂಪ್ ಕಾಲ್ನಲ್ಲಿ ನೀವು ಪ್ರತ್ಯೇಕವಾಗಿ ಸಂದೇಶ ಕಳುಹಿಸಬಹುದು.
8/ 8
ಇವಿಷ್ಟು ಹೊಸ ಫೀಚರ್ಸ್ ಇದೀಗ ವಾಟ್ಸ್ಆಪ್ನಲ್ಲಿ ಲಭ್ಯವಿದೆ ಈ ಆಯ್ಕೆಗಳು ನಿಮಗೆ ಲಭ್ಯವಾಗಿಲ್ಲ ಅಂತಾದರೆ ಪ್ಲೇ ಸ್ಟೋರ್ಗೆ ಹೋಗಿ ಅಪ್ಡೇಟ್ ಮಾಡಿಕೊಳ್ಳಿ. ಆಗ ಎಲ್ಲಾ ಆಯ್ಕೆಗಳು ಲಭ್ಯವಾಗುತ್ತದೆ.