ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಕೆಲವು ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ 21 ಹೊಸ ಎಮೋಜಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ವಾಬೀಟಾಇನ್ಫೋ ಪ್ರಕಾರ, ಇನ್ಮುಂದೆ ಬಳಕೆದಾರರು ಈ 21 ಎಮೋಜಿಗಳನ್ನು ಕಳುಹಿಸಲು ವಿವಿಧ ಕೀಬೋರ್ಡ್‌ಗಳನ್ನು ಡೌನ್‌ಲೋಡ್ ಮಾಡುವ ಮತ್ತು ಬಳಸುವ ಅಗತ್ಯವಿಲ್ಲ. ಈ ಎಮೋಜಿಗಳನ್ನು ಅಧಿಕೃತ ವಾಟ್ಸಾಪ್ ಕೀಬೋರ್ಡ್‌ನಿಂದಲೇ ನೇರವಾಗಿ ಕಳುಹಿಸಬಹುದು.
ವರದಿಯ ಪ್ರಕಾರ, ಕೆಲವು ಬಳಕೆದಾರರು ಇಂದಿನಿಂದ ಅಧಿಕೃತವಾಗಿ ವಾಟ್ಸಾಪ್ ಕೀಬೋರ್ಡ್‌ನಿಂದ ಹೊಸ ಎಮೋಜಿಯನ್ನು ನೋಡಲು ಸಾಧ್ಯವಾಗುತ್ತದೆ. ಬಳಕೆದಾರರು ಈ ಎಮೋಜಿಗಳನ್ನು ಅಪ್ಲಿಕೇಶನ್‌ನ ವಿವಿಧ ಆವೃತ್ತಿಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಅವುಗಳನ್ನು ಬಳಸಲು, ಬಳಕೆದಾರರು ತಮ್ಮ ಖಾತೆಯನ್ನು ಇತ್ತೀಚಿನ ಆವೃತ್ತಿಯಲ್ಲಿ ಡೌನ್‌ಲೋಡ್ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಈ ಹೊಸ ಫೀಚರ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸಾಪ್ ಬೀಟಾದಲ್ಲಿ ಅಭಿವೃದ್ಧಿ ಹಂತದಲ್ಲಿದೆ. ಇದರ ಹೊರತಾಗಿ, ವಾಟ್ಸಾಪ್ ಐಒಎಸ್ ಬೀಟಾದಲ್ಲಿ ಹೊಸ 'ಪುಶ್ ನೇಮ್ ಇನ್ ದಿ ಚಾಟ್ ಲೀಸ್ಟ್' ವೈಶಿಷ್ಟ್ಯವನ್ನು ಹೊರತರುತ್ತಿದೆ. WABetaInfo ವರದಿಯ ಪ್ರಕಾರ, ಬಳಕೆದಾರರು ವಾಟ್ಸಾಪ್ ಗ್ರೂಪ್ನ ಅಪರಿಚಿತ ಸದಸ್ಯರಿಂದ ಸಂದೇಶವನ್ನು ಪಡೆದಾಗ, ಬೀಟಾ ಪರೀಕ್ಷಕರು ಪ್ರತಿ ಬಾರಿ ಫೋನ್ ಸಂಖ್ಯೆಯ ಬದಲಿಗೆ ಚಾಟ್ ಪಟ್ಟಿಯಲ್ಲಿ ನೇಮ್ ಅನ್ನು ನೋಡುತ್ತಾರೆ.