Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

Facebook: ಅಂದಹಾಗೆಯೇ ನಿಮ್ಮ ಫೇಸ್​ಬುಕ್ ಖಾತೆ ಹ್ಯಾಕ್ ಆಗಿದ್ದರೆ ಏನು ಮಾಡಬೇಕು? ನೀವು ಅದನ್ನು ಹೇಗೆ ಮರುಪಡೆಯಬಹುದು? ಎಂಬುದರ ಕುರಿತಾಗಿ ಮಾಹಿತಿ ಇಲ್ಲಿದೆ.

First published:

  • 110

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಸಾಮಾಜಿಕ ಜಾಲತಾಣವಾದ ಫೇಸ್​ಬುಕ್ ವಿಶ್ವದ ಅತ್ಯಂತ ಜನಪ್ರಿಯ ಪ್ಲಾರ್ಟ್​ಫಾರ್ಮ್​ಗಳಲ್ಲಿ ಒಂದಾಗಿದೆ. ಸದ್ಯ ಪ್ರತಿಯೊಬ್ಬರು ಈ ಫ್ಲಾಟ್​ಫಾರ್ಮ್ ಅನ್ನು ಬಳಸುತ್ತಿದ್ದಾರೆ. ಫೇಸ್​ಬುಕ್​ನಲ್ಲಿ ಸ್ನೇಹಿರತನ್ನು ಮಾಡಿಕೊಳ್ಳುವುದಲ್ಲದೆ, ವ್ಯವಹಾರವನ್ನು ನಡೆಸಬಹುದಾಗಿದೆ. ಹಾಗಾಗಿ ಬಹುತೇಕರು ಇದರಲ್ಲಿ ಇದ್ದಾರೆ. ಅಷ್ಟೇ ಏಕೆ ಬಳಕೆದಾರರ ಖಾಸಗಿ ಮಾಹಿತಿಯನ್ನು ಫೇಸ್​​​ಬುಕ್​​​​​​ ಒಳ​ಗೊಂಡಿರುತ್ತದೆ.

    MORE
    GALLERIES

  • 210

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಆದರೆ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್​​​ಗಳು ಹೆಚ್ಚಾಗುತ್ತಿದ್ದಾರೆ. ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಅವರು ಬಳಕೆದಾರರ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಬೇಡಿಕೆ ಇಡುವ ಮೂಲಕ ಹಣ ವಸೂಲಿ ಕೂಡ ಮಾಡುವವರಿದ್ದಾರೆ.

    MORE
    GALLERIES

  • 310

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಅಂದಹಾಗೆಯೇ ನಿಮ್ಮ ಫೇಸ್​ಬುಕ್ ಖಾತೆ ಹ್ಯಾಕ್ ಆಗಿದ್ದರೆ ಏನು ಮಾಡಬೇಕು? ನೀವು ಅದನ್ನು ಹೇಗೆ ಮರುಪಡೆಯಬಹುದು? ಎಂಬುದರ ಕುರಿತಾಗಿ ಮಾಹಿತಿ ಇಲ್ಲಿದೆ.

    MORE
    GALLERIES

  • 410

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ಹೇಗೆ ತಿಳಿಯುವುದು ? ಇದನ್ನು ಅರ್ಥಮಾಡಿಕೊಳ್ಳಲು, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಉದಾಹರಣೆಗೆ: ಲಾಗ್ ಇನ್ ಮಾಡುವಾಗ ಪದೇ ಪದೇ ತಪ್ಪು ಪಾಸ್​​ವರ್ಡ್ ಅನ್ನು ಕೇಳುತ್ತಿದ್ದರೆ, ನಿಮ್ಮ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿದ್ದಾರೆ ಎಂದು ಅರ್ಥಮಾಡಿಕೊಳ್ಳಿ.

    MORE
    GALLERIES

  • 510

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಇದಲ್ಲದೇ, ನೀವು ಬರೆಯದೇ ಇರುವಂತಹ ಯಾವುದೇ ಪೋಸ್ಟ್ ಅಥವಾ ಸಂದೇಶವು ಫೇಸ್​ಬುಕ್ ಪೇಜ್ ಮೇಲೆ ಕಾಣಿಸಿಕೊಂಡರೆ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆಂದು ಅರ್ಥ. ಈ ಬಗ್ಗೆ ಸಣ್ಣ ಸಂದೇಹವು ಮೂಡಿದರೆ ತಕ್ಷಣವೇ ಎಚ್ಚರಿಕೆಗೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ಪ್ರಾರಂಭಿಸಿ.

    MORE
    GALLERIES

  • 610

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಖಾತೆಯನ್ನು ಮರುಪಡೆಯುವುದು ಹೇಗೆ? ಹ್ಯಾಕ್ ಮಾಡಿದ ಖಾತೆಯ ಮೇಲೆ ನೀವು ಸುಲಭವಾಗಿ ನಿಯಂತ್ರಣವನ್ನು ಪಡೆಯಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಖಾತೆಯನ್ನು ಮರುಪಡೆಯಲು ನಾವು ನಿಮಗೆ ಕೆಲವು ಮಾರ್ಗಗಳನ್ನು ಇಲ್ಲಿ ಹೇಳುತ್ತಿದ್ದೇವೆ.

    MORE
    GALLERIES

  • 710

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಮೊದಲು ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಗೆ ಹೋಗಿ. ಇಲ್ಲಿ ಪಾಸ್ವರ್ಡ್ ಮತ್ತು ಭದ್ರತೆಯ ಆಯ್ಕೆಯನ್ನು ಆರಿಸಿ. ಈಗ ನೀವು ಚೇಂಜ್ ಪಾಸ್​​ವರ್ಡ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

    MORE
    GALLERIES

  • 810

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಇದರ ಹೊರತಾಗಿ, ನೀವು ಬಯಸಿದರೆ, ಪಾಸ್​ವರ್ಡ್ ಮತ್ತು ಭದ್ರತೆ ಪುಟದಲ್ಲಿ ನೀವು ಎಲ್ಲಿ ಲಾಗ್ ಇನ್ ಆಗಿದ್ದೀರಿ ಎಂಬುದಕ್ಕೆ ಹೋಗುವ ಮೂಲಕ ನಿಮ್ಮ ಖಾತೆ ಎಲ್ಲಿ ಲಾಗ್ ಇನ್ ಆಗಿದೆ ಎಂಬುದನ್ನು ನೀವು ನೋಡಬಹುದು.

    MORE
    GALLERIES

  • 910

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಈ ಪುಟದಲ್ಲಿ ಅಪರಿಚಿತ ಸಾಧನದಲ್ಲಿ ಲಾಗಿನ್ ಅನ್ನು ನೀವು ನೋಡಿದರೆ, ಅದನ್ನು ತಕ್ಷಣವೇ ತೆಗೆದುಹಾಕಿ. ಈಗ ನೀವು ಅನುಮಾನಾಸ್ಪದ ಲಾಗಿನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇಲ್ಲಿಗೆ ಹೋಗಿ ಮತ್ತು ಸುರಕ್ಷಿತ ಖಾತೆಯ ಮೇಲೆ ಕ್ಲಿಕ್ ಮಾಡಿ. ಕೆಲವು ಹಂತಗಳನ್ನು ಅನುಸರಿಸುವ ಮೂಲಕ, ನೀವು ಖಾತೆಯನ್ನು ಸುರಕ್ಷಿತಗೊಳಿಸುತ್ತೀರಿ.

    MORE
    GALLERIES

  • 1010

    Facebook ಖಾತೆ ಹ್ಯಾಕ್​ ಆದ್ರೆ ಟೆನ್ಶನ್​ ಮಾಡ್ಬೇಡಿ, ಮರಳಿ ಪಡೆಯಲು ಹೀಗೆ ಮಾಡಿ

    ಮೇಲೆ ತಿಳಿಸಿದ ವಿಧಾನದಿಂದ ಖಾತೆಯನ್ನು ಮರುಪಡೆಯದಿದ್ದರೆ, ಪಾಸ್​​ವರ್ಡ್ ಮತ್ತು ಭದ್ರತೆ ಪುಟದಲ್ಲಿಯೇ ನೀಡಲಾದ ಸಹಾಯ ಪಡೆಯಿರಿ ಆಯ್ಕೆಯನ್ನು ಆರಿಸಿ. ಖಾತೆ ಹ್ಯಾಕ್ ಆಗಿದ್ದರೆ ವರದಿ ಮೇಲೆ ಕ್ಲಿಕ್ ಮಾಡಬೇಕು. ಇದಲ್ಲದೆ, ನೀವು Facebook.com/hacked ಗೆ ಭೇಟಿ ನೀಡಬಹುದು. ಇಲ್ಲಿ ನೀವು ನಿಮ್ಮ FB ಖಾತೆಗೆ ಸಂಬಂಧಿಸಿದ ಸಂಖ್ಯೆಯನ್ನು ನಮೂದಿಸಬೇಕು. ನೀವು ಸಂಖ್ಯೆಯನ್ನು ಪಡೆದ ನಂತರ, ಖಾತೆಯನ್ನು ಪ್ರವೇಶಿಸಲು ಫೇಸ್​ಬುಕ್ ನಿಮಗೆ ಲಿಂಕ್ ನೀಡುತ್ತದೆ.

    MORE
    GALLERIES