ಇಂದು ಸ್ಮಾರ್ಟ್‌ಫೋನ್ ನಮ್ಮ ಅಗತ್ಯ ಸಾಧನವಾಗಿದೆ. ನಾವು ಫೋನ್ ಅನ್ನು ವಿವಿಧ ವಿಷಯಗಳಿಗೆ ಬಳಸುತ್ತೇವೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಾರೆ. ಆದರೆ, ಹೆಚ್ಚಿನ ಜನರಿಗೆ ಸ್ಮಾರ್ಟ್ಫೋನ್ನಲ್ಲಿರುವ ಕೆಲ ಫೀಚರ್ಗಳ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಈ ವೈಶಿಷ್ಟ್ಯಗಳ ಬಗ್ಗೆ ತಿಳಿದಿರುವ ಅನೇಕ ಬಳಕೆದಾರರಿದ್ದಾರೆ, ಆದರೆ ಅವರು ಈ ವೈಶಿಷ್ಟ್ಯಗಳನ್ನು ಬಳಸಲು ಹಿಂಜರಿಯುತ್ತಾರೆ ಅಥವಾ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಸಹ ಗೊತ್ತಾಗಲ್ಲ.
ಇನ್ನು ಈ ಫೀಚರ್ಗಳಲ್ಲಿ ರೀಬೂಟ್ ಮತ್ತು ರೀಸ್ಟಾರ್ಟ್ ಮಾಡುವ ಫೀಚರ್ ಸಹ ಒಂದು. ಅನೇಕ ಜನರು ಈ ವೈಶಿಷ್ಟ್ಯಗಳನ್ನು ಬಳಸುತ್ತಾರೆ. ಆದರೆ ಅವರು ಈ ಎರಡು ಫೀಚರ್ಗಳ ನಡುವಿನ ವ್ಯತ್ಯಾಸವನ್ನು ತಿಳಿದಿರುವುದಿಲ್ಲ ಅಥವಾ ಈ ವೈಶಿಷ್ಟ್ಯಗಳು ಏನು ಮಾಡುತ್ತವೆ ಎಂದು ಅವರಿಗೆ ತಿಳಿದಿರುವುದಿಲ್ಲ. ರೀಬೂಟ್ ಮತ್ತು ರೀಸ್ಟಾರ್ಟ್ ನಡುವಿನ ವ್ಯತ್ಯಾಸವೇನು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಈ ಲೇಖನವನ್ನು ನೀವು ಓದ್ಲೇ ಬೇಕು.
ರೀಸ್ಟಾರ್ಟ್ ಎಂದರೆ ಸಾಧನವನ್ನು ಸ್ವಿಚ್ ಆಫ್ ಮಾಡುವುದು ಮತ್ತು ನಂತರ ಅದನ್ನು ಮತ್ತೆ ಆನ್ ಮಾಡುವುದು. ಹೆಚ್ಚಿನವರು ಡಿವೈಸ್ನ ಸೆಟ್ಟಿಂಗ್ಗಳಲ್ಲಿ ಕೆಲವೊಂದು ಬದಲಾವಣೆ, ಅಪ್ಡೇಟ್ ಮಾಡಿದ ನಂತರ ರೀಸ್ಟಾರ್ಟ್ ಮಾಡುತ್ತಾರೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಫರ್ಮ್‌ವೇರ್ ಅಥವಾ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡಿದಾಗ, ಫೋನ್ ಅನ್ನು ರೀಸ್ಟಾರ್ಟ್ ಮಾಡ್ಬೇಕು. ಇದರಿಂದ ನಿಮ್ಮ ಫೋನ್ನಲ್ಲಿ ಕೆಲವೊಂದು ಬದಲಾವಣೆಯಾಗುತ್ತದೆ.
ಫೋನ್ ಆಫ್ ಮಾಡಿದಾಗ, ಸಿಸ್ಟಮ್ ಮತ್ತು ಹಾರ್ಡ್‌ವೇರ್ ಸಂಪೂರ್ಣವಾಗಿ ಆಫ್ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಫೋನ್ ಅನ್ನು ಮರುಪ್ರಾರಂಭಿಸಿದಾಗ, ಫೋನ್‌ನ ಎಲ್ಲಾ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ ಮತ್ತು ಅದು ಡೇಟಾವನ್ನು ರೀಲೋಡ್ ಮಾಡುತ್ತದೆ. ಅಲ್ಲದೆ, ರೀಬೂಟ್ ಮಾಡುವುದರಿಂದ ಫೋನ್‌ನ ಸಾಫ್ಟ್‌ವೇರ್ ಅನ್ನು ಮಾತ್ರ ಪ್ರಾರಂಭಿಸುತ್ತದೆ. ಇದು ಸ್ವಯಂಚಾಲಿತವಾಗಿ ಕೆಲವು ಹಂತಗಳನ್ನು ಬಿಟ್ಟುಬಿಡುತ್ತದೆ.
ಇನ್ನು ರೀಬೂಟ್ ಮತ್ತು ರೀಸ್ಟಾರ್ಟ್ನಲ್ಲಿ ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡುವುದು ಉತ್ತಮವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರೀಸ್ಟಾರ್ಟ್ ಮಾಡುವುದರಿಂದ ನಿಮ್ಮ ಫೋನ್ ಅನ್ನು ಸಮಗ್ರವಾಗಿ ಪರೀಕ್ಷಿಸುವುದು ಮತ್ತು ಸಿಸ್ಟಮ್‌ನಿಂದ ಎಲ್ಲಾ ಪ್ರಮುಖ ಪ್ರೋಗ್ರಾಂಗಳು ಮತ್ತು ಡೇಟಾವನ್ನು ಸಹ ಕ್ಲಿಯರ್ ಮಾಡುತ್ತದೆ. ಇದು ಫೋನ್‌ನಲ್ಲಿರುವ ಜಂಕ್ ಡೇಟಾವನ್ನು ಸಹ ತೆಗೆದುಹಾಕುತ್ತದೆ. ನೀವು ಫೋನ್ ಅನ್ನು ಮತ್ತೆ ಬಳಸಿದಾಗ, ಅದು ಮೊದಲಿಗಿಂತ ಹೆಚ್ಚು ವೇಗವಾಗಿದೆ ಎಂದು ನೀವು ಸ್ಪಷ್ಟವಾಗಿ ಭಾವಿಸಬಹುದು. ಆದರೆ ರೀಬೂಟ್ ಮಾಡೋದ್ರಿಂದ ನಿಮ್ಮ ಫೋನ್ ಇಷ್ಟು ಫ್ರೀ ಆಗೋದಿಲ್ಲ.