ಇನ್ನು QR ಕೋಡ್‌ಗಳು ಸಾಂಪ್ರದಾಯಿಕ ಬಾರ್ ಕೋಡ್‌ಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತವೆ. ಏಕೆಂದರೆ ಅವುಗಳನ್ನು ಸ್ಕ್ಯಾನರ್‌ಗಳ ಮೂಲಕ ಯಾವುದೇ ದಿಕ್ಕಿನಿಂದ ಸ್ಕ್ಯಾನ್ ಮಾಡಬಹುದು. ಇದಲ್ಲದೆ ಇದು ಕಡಿಮೆ ಜಾಗದಲ್ಲಿ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಅದಕ್ಕಾಗಿಯೇ QR ಕೋಡ್‌ಗಳನ್ನು ಜಾಹೀರಾತುಗಳು, ಪ್ಯಾಕೇಜಿಂಗ್, ಪಾವತಿಗಳಂತಹ ಎಲ್ಲಾ ರೀತಿಯ ವಿಧಾನಗಳಲ್ಲಿ ಬಳಸಲಾಗುತ್ತಿದೆ.
ಕೋಡ್ ರೀಡರ್ ಮೂಲಕ ಕ್ಯೂಆರ್ ಕೋಡ್ ಅನ್ನು ರೀಡ್ ಮಾಡಿದ್ರೆ ಬ್ಯಾಂಕ್ನಲ್ಲಿದ್ದ ಹಣ ಖಾಲಿಯಾಗುತ್ತದೆಯೇ ಎಂಬ ಪ್ರಶ್ನೆ ಹಲವರಿಗೆ ಇದೆ. ಆದ್ರೆ ಇದು ನಾವು ಬಳಸೋ ವಿಧಾನದ ಮೇಲೆ ಡಿಪೆಂಡ್ ಆಗಿರುತ್ತದೆ. ಏಕೆಂದರೆ ಕೆಲವೊಂದು ಕೋಡ್ ರೀಡರ್ ಆ್ಯಪ್ಗಳು ಹ್ಯಾಕರ್ಸ್ಗಳು ಕ್ರಿಯೇಟ್ ಮಾಡಿರ್ತಾರೆ. ತಪ್ಪಿ ಬಳಕೆದಾರರು ಅದನ್ನು ಡೌನ್ಲೋಡ್ ಮಾಡಿ ಬಳಸಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ವಂಚಕರ ಕೈಸೇರುತ್ತೆ.