Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

Game Designer: ಕಳೆದ ವರ್ಷದ ವಿಡಿಯೋ ಗೇಮಿಂಗ್​​ ಉದ್ಯಮದಲ್ಲಿ ಭಾರತ ಅದ್ಭುತ ಬೆಳವಣಿಗೆ ಕಂಡಿದೆ. ಅನೇಕ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ವಲಯದತ್ತ ಮುನ್ನುಗುತ್ತಿದ್ದು, ಗೇಮಿಂಗ್​ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

First published:

  • 16

    Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

    ಸ್ಮಾರ್ಟ್​ಫೋನ್​ ಮತ್ತು ಲ್ಯಾಪ್​ಟಾಪ್​ ಮೂಲಕ ಗೇಮಿಂಗ್​ ಆಡುವುದು ಹವ್ಯಾಸವಾಗಿಬಿಟ್ಟಿದೆ. ಪುಟಾಣಿ ಮಕ್ಕಳಿಂದ ಹಿಡಿದು ಯುವಕರು ವಿಡಿಯೋ ಗೇಮಿಂಗ್​ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆನ್​ಲೈನ್​ ಸಾಕಷ್ಟು ವಿಡಿಯೋ ಗೇಮಿಂಗ್​​ ಕೂಡ ಸಿಗುತ್ತಿದೆ. ಪ್ರಸ್ತುತ ವಿಡಿಯೋ ಗೇಮಿಂಗ್​ ಅಭಿವೃದ್ಧಿ ಪಡಿಸುವ ಕೋರ್ಸ್​ನತ್ತ ಯುವ ಜನರು ಮುಂದಾಗುತ್ತಿದ್ದಾರೆ. ಇದನ್ನೇ ಉತ್ತಮ ವೃತ್ತಿಯನ್ನಾಗಿ ಆಯ್ಕೆ ಮಾಡುತ್ತಿದ್ದಾರೆ.

    MORE
    GALLERIES

  • 26

    Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

    ಕಳೆದ ವರ್ಷದ ವಿಡಿಯೋ ಗೇಮಿಂಗ್​​ ಉದ್ಯಮದಲ್ಲಿ ಭಾರತ ಅದ್ಭುತ ಬೆಳವಣಿಗೆ ಕಂಡಿದೆ. ಅನೇಕ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ವಲಯದತ್ತ ಮುನ್ನುಗುತ್ತಿದ್ದು, ಗೇಮಿಂಗ್​ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಗೇಮ್​ ಡಿಸೈನರ್​ ಅಥವಾ ಗೇಮ್​ ಡೆವೆಲಪರ್​ ಕೋರ್ಸ್​ಗಳನ್ನು ಮಾಡುವ ಮೂಲಕ ಉತ್ತಮವಾಗಿ ಹಣ ಗಳಿಸಬಹುದಾಗಿದೆ.

    MORE
    GALLERIES

  • 36

    Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

    ಗೇಮ್​ ಡೆವೆಲಪರ್​ ಆಗಲು ಕಲ್ಪನೆ, ಆಲೋಚನೆ, ಸೃಜನಶೀಲತೆ ತುಂಬಾ ಮುಖ್ಯ. ಹಾಗಿದ್ದರೆ ಮಾತ್ರ ಒಂದೊಳ್ಳೆ ಗೇಮ್​ ರಚಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಗೇಮಿಂಗ್​ ಸಾಫ್ಟ್​ವೇರ್​ ಮತ್ತು ಗೇಮಿಂಗ್​ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಬೇಕು. ಗೇಮಿಂಗ್​ ವೃತ್ತಿಯತ್ತ ತೆರಳಲು ಚಿತ್ರಕಲೆ ಮತ್ತು ಲೈಟಿಂಗ್​​ ಅಗತ್ಯವಾಗಿದೆ.

    MORE
    GALLERIES

  • 46

    Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

    ಎಸ್​ಎಸ್​​ಎಲ್​ಸಿ ಮತ್ತು ಪಿಯುಸಿ ನಂತರ ಮಲ್ಟಿಮೀಡಿಯಾ ಮತ್ತು ಗೇಮಿಂಗ್​ ಅನಿಮೇಷನ್​ ಕೋರ್ಸ್​ ಮೂಲಕ ಗೇಮ್ ಡಿಸೈನಿಂಗ್​​ ಕಳಿಯಬಹುದಾಗಿದೆ. ದೇಶದಾದ್ಯಂತ ವಿವಿಧ ಸಂಸ್ಥೆಗಳು ಡಿಪ್ಲೊಮಾ, ಪದವಿ ಮತ್ತು ಪ್ರಮಾಣಪತ್ರ ಆಧಾರದಲ್ಲಿ ಕೋರ್ಸ್​ ಮಾಡಬಹುದಾಗಿದೆ.

    MORE
    GALLERIES

  • 56

    Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

    ಗೇಮಿಂಗ್​ ಕೋರ್ಸ್​​ ಎಲ್ಲೆಲ್ಲಿದೆ?: 1) ಭಾರ್ತಿ ವಿದ್ಯಾಪೀತ್ ಡೀಮ್ಡ್ ವಿಶ್ವವಿದ್ಯಾಲಯ, ಪುಣೆ, 2) ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನೆಮ್ಯಾಟಿಕ್ (ಎಂಎಎಸಿ), ಮುಂಬೈ, 3) ಅರೆನಾ ಆನಿಮೇಷನ್ಸ್, ನವದೆಹಲಿ, 4) ಝೀ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ಸ್, ಬೆಂಗಳೂರು, 5) ಐಪಿಕ್ಸಿಯೊ ಆನಿಮೇಷನ್ ಕಾಲೇಜು, ಬೆಂಗಳೂರು, 6) ಅನಿಮಾಸ್ಟರ್ ಅಕಾಡೆಮಿ - ಕಾಲೇಜ್ ಫಾರ್ ಎಕ್ಸಲೆನ್ಸ್ ಇನ್ ಆನಿಮೇಷನ್, ಬೆಂಗಳೂರು, 7) ಅಕಾಡೆಮಿ ಆಫ್ ಆನಿಮೇಷನ್ ಅಂಡ್ ಗೇಮಿಂಗ್, ನೋಯ್ಡಾ

    MORE
    GALLERIES

  • 66

    Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಬೆಂಗಳೂರಿನಲ್ಲಿದೆಯಾ ಈ ಕೋರ್ಸ್​? ಇಲ್ಲಿದೆ ಮಾಹಿತಿ

    ಗೇಮಿಂಗ್​ ಕೋರ್ಸ್​ ಮಾಡಿದ ನಂತರ ತಿಂಗಳಿಗೆ 15 ಸಾವಿರದಿಂದ 18 ಸಾವಿರದವರೆಗೆ ಸಂಬಳವನ್ನು ಗಳಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಅನುಭವ ಹೊಂದಿದ ನಂತರ ಲಕ್ಷ ಸಂಬಳ ಗಳಿಸಬಹುದಾಗಿದೆ.

    MORE
    GALLERIES