ಸಾಮಾಜಿಕ ನೆಟ್ವರ್ಕಿಂಗ್ ಅಪ್ಲಿಕೇಶನ್ಗಳು, ಸುಧಾರಿತ ತಂತ್ರಜ್ಞಾನದ ಸಹಾಯದಿಂದ, ನೀವು ಪ್ರಪಂಚದ ಯಾವುದೇ ಭಾಗದ ಜನರೊಂದಿಗೆ ಸುಲಭವಾಗಿ ಮಾತನಾಡಬಹುದು ಮತ್ತು ಚಾಟ್ ಮಾಡಬಹುದು. ನಮ್ಮದೇ ಸಂಬಂಧಿಕರು, ಸ್ನೇಹಿತರು ಯಾವುದೋ ಕಾರಣಕ್ಕೂ ವಿದೇಶಕ್ಕೆ ತೆರಳುತ್ತಾರೆ. ಆದರೆ ಅಂತಹವರ ಜೊತೆ ಮಾತಾಡಬೇಕಾದರೆ ಅದಕ್ಕೆ ಕೆಲವೊಂದು ಆ್ಯಪ್ಗಳಿವೆ.ಆ ಆ್ಯಪ್ಗಳನ್ನು ಬಳಸಿ ಸುಲಭವಾಗಿ ಮಾತನಾಡಬಹುದು.
ವಾಟ್ಸಾಪ್: ಇದು ವೇಗದ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದ್ದು ಈ ವಾಟ್ಸಾಪ್ ನಿಮಗೆ ಇನ್ನೊಬ್ಬರಿಗೆ ಮೆಸೇಜ್ ಅನ್ನು ಮಾಡಲು, ಆಡಿಯೋ ಮತ್ತು ವಿಡಿಯೋ ಕಾಲ್ಗಳನ್ನು ಮಾಡಲು, ಫೋಟೋಗಳು ಮತ್ತು ಇತರ ಡಾಕ್ಯುಮೆಂಟ್ಗಳನ್ನು ಶೇರ್ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಈ ಮೂಲಕ ವಿದೇಶದಲ್ಲಿರುವವರಿಗೂ ಕಾಲ್, ಮೆಸೇಜ್ ಮಾಡಬಹುದಾಗಿದೆ. ಇದನ್ನು ನೀವು ಆಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಲ್ಲಿ ಬಳಸಬಹುದಾಗಿದೆ.
ಸ್ಕೈಪ್ ಅಪ್ಲಿಕೇಶನ್: ಇದು ಸಹ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದ್ದು, ಸಂದೇಶಗಳನ್ನು ಕಳುಹಿಸಲು, ಆಡಿಯೋ ಮತ್ತು ವಿಡಿಯೋ ಕಾಲ್ಗಳನ್ನು ಮಾಡಲು ಮತ್ತು ಯಾವು್ದೇ ಫೈಲ್ಗಳನ್ನು ಇನ್ನೊಬ್ಬರಿಗೆ ಶೇರ್ ಮಾಡಲು ಈ ಆ್ಯಪ್ ಸಹಕಾರಿಯಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಡೆಸ್ಕ್ಟಾಪ್ ಕಂಪ್ಯೂಟರ್ಗಳು, ಟ್ಯಾಬ್ಲೆಟ್ಗಳು, ಸ್ಮಾರ್ಟ್ಫೋನ್ಗಳು ಸೇರಿದಂತೆ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಬಳಸಬಹುದಾಗಿದೆ.
ಲೈನ್ ಅಪ್ಲಿಕೇಶನ್: ಇದು ಸಹ ಒಂದು ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಈ ಆಪ್ಲಿಕೇಶನ್ ಬೇರೆ ದೇಶದಲ್ಲಿರುವವರಿಗೆ ಮೆಸೇಜ್ ಮಾಡಲು, ವಾಯ್ಸ್ ಕಾಲ್ ಮತ್ತು ವಿಡಿಯೋ ಕಾಲ್ ಮಾಡಲು, ಫೈಲ್ಗಳನ್ನು ಶೇರ್ ಮಾಡಲು ಉತ್ತಮವಾದ ಅಪ್ಲಿಕೇಶನ್ ಆಗಿದೆ. ಇನ್ನು ಈ ಲೈನ್ ಅಪ್ಲಿಕೇಶನ್ ಏಷ್ಯಾದ ದೇಶಗಳಲ್ಲಿ ತುಂಬಾನೇ ಜನಪ್ರಿಯವಾಗಿದೆ. ಇದನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಲ್ಲಿ ಬಳಸಬಹುದು.
ವೈಬರ್ ಅಪ್ಲಿಕೇಶನ್: ಈ ಅಪ್ಲಿಕೇಶನ್ ಕೂಡ ಒಂದು ಮೆಸೇಜ್ ಮತ್ತು ಕಾಲ್ ಮಾಡುವ ಅಪ್ಲಿಕೇಶನ್ ಆಗಿದೆ. ವಿದೇಶದಲ್ಲಿರುವವರಿಗೆ ಮೆಸೇಜ್ಗಳನ್ನು ಮಾಡಲು ಮತ್ತು ವಾಯ್ಸ್ ಕಾಲ್ ಮತ್ತು ವಿಡಿಯೋ ಕಾಲ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಜೊತೆಗೆ ಈ ಅಪ್ಲಿಕೇಶನ್ ಮೂಲಕ ಬಳಕೆದಾರರಿಗೆ ಫೋಟೋಗಳು ಮತ್ತು ಇತರೆ ಡಾಕ್ಯುಮೆಂಟ್ಗಳನ್ನು ಶೇರ್ ಮಾಡಬಹುದಾಗಿದೆ ಇನ್ನು ಈ ಅಪ್ಲಿಕೇಶನ್ ಆಂಡ್ರಾಯ್ಡ್, ಐಓಎಸ್, ಡೆಸ್ಕ್ಟಾಪ್ ಕಂಪ್ಯೂಟರ್ಗಳಲ್ಲೂ ಬಳಕೆ ಮಾಡಬಹುದಾಗಿದೆ.
ವಿಚಾಟ್: ವಿಚಾಟ್ ಎಂಬುದು ಸಂದೇಶ ಕಳುಹಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದ್ದು, ಈ ಅಪ್ಲಿಕೇಶನ್ ಮೂಲಕ ಮೆಸೇಜ್ ಜೊತೆಗೆ ವಾಯ್ಸ್ ಕಾಲ್ ಮತ್ತು ವಿಡಿಯೋ ಕಾಲ್ ಅನ್ನೂ ಮಾಡಬಹುದು. ಈ ಅಪ್ಲಿಕೇಶನ್ ಬಳಸುವ ಬಳಕೆದಾರರು ಫೋಟೋಗಳು ಮತ್ತು ಇತರ ಫೈಲ್ಗಳನ್ನೂ ಸಹ ಶೇರ್ ಮಾಡಬಹುದು. ವಿಚಾಟ್ ಅಪ್ಲಿಕೇಶನ್ ಆಂಡ್ರಾಯ್ಡ್, ಐಓಎಸ್, ಡೆಸ್ಕ್ಟಾಪ್ ಕಂಪ್ಯೂಟರ್ ಬಳಕೆದಾರರಿಗೆ ಇದನ್ನೂ ಬಳಕೆ ಮಾಡಬಹುದು