ವಿವೋ ಡೇಸ್ ಸೇಲ್ ಫ್ಲಿಪ್ಕಾರ್ಟ್ನಲ್ಲಿ ಆರಂಭವಾಗಿದೆ. ಜನವರಿ 2 ರಿಂದ ಈ ಆಫರ್ ಸೇಲ್ ಪ್ರಾರಂಭವಾಗಿದ್ದು, ಜನವರಿ 6 ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ, ಗ್ರಾಹಕರು ಕಂಪನಿ ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ಭಾರೀ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಉತ್ತಮ ಡೀಲ್ ಅಡಿಯಲ್ಲಿ, ಗ್ರಾಹಕರು ರೂ 51,499 ರ ಆರಂಭಿಕ ಬೆಲೆಯಲ್ಲಿ ವಿವೋ ಎಕ್ಸ್80 ಅನ್ನು ಖರೀದಿಸಬಹುದು. ಆದರೆ ಈಗ ಕೆಲವು ಆಫರ್ಸ್ಗಳು ಇದರ ಮೇಲೆ ಲಭ್ಯವಿದ್ದು ಇನ್ನು ಹೆಚ್ಚಿನ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ
ವಿವೋ ಎಕ್ಸ್80 ಸ್ಮಾರ್ಟ್ಫೋನ್ 6.78 ಇಂಚಿನ ಫುಲ್ ಹೆಚ್ಡಿ + 3ಡಿ ಕರ್ವ್ಡ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಈ ಡಿಸ್ಪ್ಲೇ 2400x1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರ ಡಿಸ್ಪ್ಲೇ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ. ಕಂಪನಿಯು 1000 ನಿಟ್ಗಳ ಗರಿಷ್ಠ ಬ್ರೈಟ್ನೆಸ್ ಮಟ್ಟವನ್ನು ಸಹ ಇದರಲ್ಲಿ ನೀಡುತ್ತಿದೆ. ಈ ವಿವೋ ಸ್ಮಾರ್ಟ್ಫೋನ್ 12 ಜಿಬಿ ರ್ಯಾಮ್ ಮತ್ತು 256 ಜಿಬಿ ವರೆಗಿನ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್ಫೋನ್ನ ಪ್ರೊಸೆಸರ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ. ಕಂಪನಿಯು ಈ ಫೋನ್ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 9000 ಚಿಪ್ಸೆಟ್ ಅನ್ನು ಹೊಂದಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಅರ್ಬನ್ ಬ್ಲ್ಯಾಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಓಎಸ್ ಕುರಿತು ಮಾತನಾಡುವುದಾದರೆ, ಈ ಫೋನ್ ಆಂಡ್ರಾಯ್ಡ್ 12 ನಲ್ಲಿ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ.