ವಿವೋ ವೈ35 5ಜಿ ಸ್ಮಾರ್ಟ್ಫೋನ್ 88.99 ಪ್ರತಿಶತ ಸ್ಕ್ರೀನ್ ಸ್ಪೇಸ್ ನೀಡುತ್ತದೆ. ಇದು ಟಿಯರ್‌ಡ್ರಾಪ್ ನಾಚ್‌ನೊಂದಿಗೆ 6.51-ಇಂಚಿನ IPS LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ, 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಕೂಡ ಒಳಗೊಂಡಿದೆ.
ಚೀನಾದಲ್ಲಿ, ವಿವೋ ವೈ35 5ಜಿ ಸ್ಮಾರ್ಟ್ಫೋನ್ನ ಬೆಲೆ 4 GB RAM + 128 GB ಸ್ಟೋರೇಜ್ ಹೊಂದಿದ ಮೊಬೈಲ್ಗೆ 172 ಡಾಲರ್ ಅಂದರೆ 14,176 ರೂಪಾಯಿ. 6 GB RAM + 128 GB ಸ್ಟೋರೇಜ್ ಹೊಂದಿದ ಮೊಬೈಲ್ಗೆ 201 ಡಾಲರ್ ಅಂದರೆ ಭಾರತದಲ್ಲಿ 16,566 ರೂಪಾಯಿಯಲ್ಲಿ ಖರೀದಿ ಮಾಡಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕಂಪನಿಯು ಯಾವುದೇ ಪ್ರಕಟಣೆಯನ್ನು ಮಾಡಿಲ್ಲ.