ಇನ್ನು ಆ್ಯಪಲ್ ಕಂಪೆನಿ ಪರಿಚಯಿಸಿರುವ ಈ ಹೊಸ ಟೈಪ್ ಸಿ ಚಾರ್ಜರ್ ಕೇವಲ ಆ್ಯಪಲ್ ಕಂಪೆನಿಯ ಫೋನ್ಗಳಿಗೆ ಸೀಮಿತವಾಗಿರುತ್ತದೆ.ಆ್ಯಪಲ್ ಪ್ರಮಾಣೀಕೃತ ನೀಡಿದ ಟೈಪ್-ಸಿ ಚಾರ್ಜರ್ ಮಾತ್ರ ಐಫೋನ್ 15 ನಲ್ಲಿ ಫಾಸ್ಟ್ ಚಾರ್ಜರ್ ಆಗಿ ಕಾರ್ಯ ನಿರ್ವಹಿಸುತ್ತಂತೆ. ಇನ್ನು ಆಂಡ್ರಾಯ್ಡ್ ಅಥವಾ ಇತರೆ ಟೈಪ್-ಸಿ ಚಾರ್ಜರ್ ಮೂಲಕ ಐಫೋನ್ ಚಾರ್ಜ್ ಮಾಡಿದರೆ ನಿಧಾನವಾಗಿ ಬ್ಯಾಟರಿ ಫುಲ್ ಆಗುತ್ತದೆ ಎಂದು ಕಂಪೆನಿ ಹೇಳಿದೆ.
ಎಲ್ಲಾ ಸ್ಮಾರ್ಟ್ಫೋನ್ಗಳು ಸಹ ಒಂದೇ ಚಾರ್ಜರ್ ವಿಧವನ್ನು ಹೊಂದಿರುವ ನಿಟ್ಟಿನಲ್ಲಿ ಮತ್ತು ಇ-ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೂರೋಪ್ ಮಾರುಕಟ್ಟೆಯಲ್ಲಿರುವಂತಹ ಎಲ್ಲಾ ಗ್ಯಾಜೆಟ್ಗಳಿಗೆ ಟೈಪ್ ಸಿ ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ನಿಯಮ ಜಾರಿ ಮಾಡಿತ್ತು. ಆದರೆ ಪ್ರಾರಂಭದಲ್ಲಿ ಈ ನಿಯಮವನ್ನು ಆ್ಯಪಲ್ ವಿರೋಧಿಸಿದ್ದರೂ, ಈಗ ಅದಕ್ಕೆ ಒಪ್ಪಿಗೆ ನೀಡಿದೆ.