Redmi Note 12 Pro Plus 5G | ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ರೆ ಸ್ಮಾರ್ಟ್‌ಫೋನ್ ಕಂಪನಿಯಿಂದ ನಿಮಗೆ ಗುಡ್ ನ್ಯೂಸ್. ಅದ್ಭುತ ಫೀಚರ್‌ಗಳನ್ನು ಒಳಗೊಂಡ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ. ಹಾಗಾಗಿ ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಒಮ್ಮೆ ನೋಡಿ.
ಇಲ್ಲದಿದ್ದರೆ, ಈ ಸ್ಮಾರ್ಟ್‌ಫೋನ್ 4500 mAh ಬ್ಯಾಟರಿ, 32 MP ಸೆಲ್ಫಿ ಕ್ಯಾಮೆರಾ, 6.8 ಇಂಚಿನ ಸ್ಕ್ರೀನ್, ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡ ಇದು ಒಳಗೊಂಡಿದೆ. ಇದು 8ಜಿಬಿ RAM, 256 ಜಿಬಿ ಮೆಮೊರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು 5G ಯಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಡಿಸೆಂಬರ್ 20 ರಂದು ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದರ ಬೆಲೆ ಸುಮಾರು 42 ಸಾವಿರ ರೂಪಾಯಿ ಎಂದು ಊಹಿಸಲಾಗಿದೆ.