ಪೊಲೀಸರ ಗಮನಕ್ಕೆ: ರಾಜೇಶ್ ಮೌರ್ಯ ಅವರು ಈ ಪ್ಲಾನ್ ಮಾಡಿದಾಗ ತಕ್ಷಣ ಪೊಲೀಸರ ಗಮನಕ್ಕೆ ಬಂದಿತ್ತು. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಪ್ರಚಾರ ನಿಲ್ಲಿಸಲು ಮುಂದಾದರು. ಆ ವೇಳೆಯಲ್ಲಿ ರಾಜೇಶ್ ಮೌರ್ಯ ಅವರು ಇಂತಹ ಕೊಡುಗೆಗಳನ್ನು ಘೋಷಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಸಹ ಎಚ್ಚರಿಸಿದ್ದಾರೆ. ಇನ್ನು ವಿಶೇಷವಾಗಿ ಈ ಆಫರ್ ಎಲ್ಲರಿಗೂ ತಿಳಿಯುತ್ತಿದ್ದಂತೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದಾಗಿ ರಾಜೇಶ್ ಅವರ ಅಂಗಡಿಯ ಹೊರಗೆ ಬೃಹತ್ ಸರತಿ ಸಾಲು ಸಹ ನಿರ್ಮಾಣವಾಗಿತ್ತು.
ಇನ್ನು ಇದರಿಂದ ಅಂಗಡಿ ಎದುರು ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಇದಾದ ಬಳಿಕ ಪೊಲೀಸರು ಅಂಗಡಿಗೆ ನುಗ್ಗಿ ಗ್ರಾಹಕರನ್ನು ಓಡಿಸಿದ್ದಾರೆ. ಅಂಗಡಿ ಮಾಲೀಕ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ರಾಜೇಶ್ ಘೋಷಿಸಿರುವ ಆಫರ್ ಸ್ಮಾರ್ಟ್ ಫೋನ್ ಗಳ ಮಾರಾಟವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಆದರೆ, ಇದರಿಂದ ರಾಜೇಶ್ ಕೊನೆಗೆ ಜೈಲಿಗೆ ಹೋಗಬೇಕಾಯಿತು.
ಅಕ್ರಮ ಏಕೆ?: ಗ್ರಾಹಕರನ್ನು ಆಕರ್ಷಿಸಲು ಮದ್ಯ ಮತ್ತು ಅದರ ಸಂಬಂಧಿತ ಉತ್ಪನ್ನಗಳನ್ನು ಕೊಡುಗೆಗಳ ಅಡಿಯಲ್ಲಿ ಜಾಹೀರಾತು ಮಾಡಬಾರದು. ಇದು ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ರೂಪಿಸಿದ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ರೀತಿಯ ಜಾಹೀರಾತು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಪರವಾನಗಿ ಪಡೆದ ಮಾಲೀಕರು ಮಾತ್ರ ಈ ರೀತಿಯ ಕೊಡುಗೆಗಳನ್ನು ಜಾಹೀರಾತು ಮಾಡಬಹುದು. ವಯಸ್ಸಿನೊಳಗಿನವರಿಗೆ ಮದ್ಯ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ.