Twitter: ಹೊಸ ಫೀಚರ್ ಪರಿಚಯಿಸಿದ ಟ್ವಿಟ್ಟರ್; ಅಪರಿಚಿತ ಮತ್ತು ಅನಗತ್ಯ ಟ್ವೀಟ್ಗೆ ಬ್ರೇಕ್
Twitter: ಮಂಗಳವಾರದಂದು ಟ್ವಿಟ್ಟರ್ ಮಾಡರೇಶನ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇನ್ಮುಂದೆ ಟ್ವಿಟ್ವಿಗ ತಾನು ಮಾಡಿರುವ ಟ್ವೀಟ್ಗೆ ಎಷ್ಟು ಜನ ಕಾಮೆಂಟ್ ಮಾಡಬೇಕು ಎಂಬದನ್ನು ಇತಿಮಿತಿಗೊಳಿಸಬಹುದು.
ಟ್ವಿಟ್ಟರ್ ತನ್ನ ಬಳಕೆದಾರರಿಗಾಗಿ ಮಾಡರೇಶನ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ನೂತನ ಫೀಚರ್ ಮೂಲಕ ಟ್ವಿಟ್ಟಿಗ ತನ್ನ ಟ್ವೀಟ್ಗೆ ಎಷ್ಟು ಜನ ಪ್ರತ್ಯುತ್ತರ ನೀಡಬಹುದು ಎಂಬ ಆಯ್ಕೆಯನ್ನು ನೀಡಿದೆ.
2/ 11
ಮಂಗಳವಾರದಂದು ಟ್ವಿಟ್ಟರ್ ಮಾಡರೇಶನ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇನ್ಮುಂದೆ ಟ್ವಿಟ್ವಿಗ ತಾನು ಮಾಡಿರುವ ಟ್ವೀಟ್ಗೆ ಎಷ್ಟು ಜನ ಕಾಮೆಂಟ್ ಮಾಡಬೇಕು ಎಂಬದನ್ನು ಇತಿಮಿತಿಗೊಳಿಸಬಹುದು. ಅಫೀಶಿಯಲ್ ಮತ್ತು ಎಲ್ಲಾ ಟ್ವಿಟ್ಟರ್ ಖಾತೆಗಳು ಈ ನೂತನ ಫೀಚರ್ ಬಳಸಬಬಹುದಾಗಿದೆ.
3/ 11
ಟ್ವಿಟ್ಟರ್ ಟ್ವಿಟ್ಟಿಗರಿಗೆ ಮಾಡರೇಶನ್ ಫೀಚರ್ ಮೂಲಕ ಮೂರು ಆಯ್ಕೆಯನ್ನು ನೀಡಿದೆ.
4/ 11
ಆಯ್ಕೆ1: ಟ್ವಿಟ್ವಿಗನ್ನು ತಾನು ಮಾಡಿರುವ ಟ್ವೀಟ್ಗೆ ಪ್ರತಿಯೊಬ್ಬರಿಂದಲೂ ಕಾಮೆಂಟ್ ಪಡೆಯಬಹುದು.
5/ 11
ಆಯ್ಕೆ 2: ತಾನು ಅನುಸರಿಸವ ವ್ಯಕ್ತಿಗಳಿಂದ ಮಾತ್ರ ಕಾಮೆಂಟ್ ಪಡೆಯುವಂತೆ ಸೆಟ್ಟಿಂಗ್ಸ್ ಮಾಡಬಹುದು.
6/ 11
ಆಯ್ಕೆ 3: ಟ್ವೀಟ್ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳಿಂದ ಮಾತ್ರ ಕಾಮೆಂಟ್ ಪಡೆಯುವಂತೆ ಸೆಟ್ಟಿಂಗ್ಸ್ ಮಾಡಬಹುದು.
7/ 11
ಮೇ ತಿಂಗಳಿನಿಂದ ಮೈಕ್ರೋಬ್ಲಾಗಿಂಗ್ ಸೈಟ್ ಈ ನೂತನ ಫೀಚರ್ ಬಗ್ಗೆ ಪರೀಕ್ಷಿಸಲು ಪ್ರಾರಂಭಿಸಿತ್ತು. ಸದ್ಯ ಎಲ್ಲಾ ಬಳಕೆದಾರರಿಗೆ ಲೈಕ್ ಮತ್ತು ಪೋಸ್ಟ್ಗಳನ್ನು ರಿಟ್ವೀಟ್ ಮಾಡುವ ಆಯ್ಕೆಯನ್ನು ನೀಡಿದೆ.
8/ 11
ಆದರೆ ಬಳಕೆದಾರರ ಮಾಡರೇಶನ್ ಫೀಚರ್ ಅನ್ನು ಸೆಟ್ಟಿಂಗ್ ಮಾಡಿದ್ದರೆ ಉಳಿದವರ ಕಾಮೆಂಟ್ಗಳು ಕಾಣಿಸಲು ಸಾಧ್ಯವಿಲ್ಲ.
9/ 11
ಟ್ವಿಟ್ಟರ್ ನೂತನ ಫೀಚರ್ ಸದ್ಯ ಬಳಕೆದಾರರಿಗೆ ಪ್ರಯೋಜನಕ್ಕೆ ಬರಲಿದೆ. ಅನಗತ್ಯ ಕಾಮೆಂಟ್ ಅಥವಾ ರಿಟ್ವೀಟ್ ಮಾಡುವುದನ್ನುತಡೆಯಲು ನೂತನ ಫೀಚರ್ ಸಹಾಯಕವಾಗಲಿದೆ.
10/ 11
ಮತ್ತೊಂದೆಡೆ ಅಪರಿಚಿತ ಟ್ವಿಟ್ಟಿಗರಿಂದ ಅನಗತ್ಯ ಕಾಮೆಂಟ್ ಪಡೆಯುವುದನ್ನು ತಡೆಯಲು ಈ ಫೀಚರ್ ಸಹಾಯಕ್ಕೆ ಬರಲಿದೆ.
11/ 11
ಜೊತೆಗೆ ಉತ್ತಮ ಸಂಭಾಷಣೆ ನಡೆಸಲು ಮತ್ತು ಟ್ರೋಲ್ ಮಾಡುವುದನ್ನು ತಡೆಯಲು ಸಹಾಯಕವಾಗಲಿದೆ