ಟಿವಿಎಸ್ ನೂತನ ಸ್ಕೂಟರ್ ಬಿಡುಗಡೆ: ಮೈಲೇಜ್ ಬರೋಬ್ಬರಿ 75 ಕಿ.ಮೀ
TVS IQUBE: ಈ ಲೀಸ್ಟ್ಗೆ ಮತ್ತೊಂದು ಸೇರ್ಪಡೆ ಎಂದರೆ ಟಿವಿಎಸ್ ಕಂಪೆನಿ. ಹೌದು, ಟಿವಿಎಸ್ ಕಂಪೆನಿ ಕೂಡ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
News18 Kannada | January 29, 2020, 5:12 PM IST
1/ 12
ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದ ಬೆನ್ನಲ್ಲೇ ದೇಶದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದನೆಯ ಕಡೆ ಹಲವು ಕಂಪೆನಿಗಳು ಮುಖ ಮಾಡಿದೆ. ಅದರಲ್ಲಿ ಮುಖ್ಯವಾಗಿ ಈಗಾಗಲೇ ಕೆಲವೊಂದು ಕಂಪೆನಿಗಳು ಈಗಾಗಲೇ ಇ-ಸ್ಕೂಟರ್ಗಳನ್ನು ಪರಿಚಯಿಸಿದೆ.
2/ 12
ಈ ಲೀಸ್ಟ್ಗೆ ಮತ್ತೊಂದು ಸೇರ್ಪಡೆ ಎಂದರೆ ಟಿವಿಎಸ್ ಕಂಪೆನಿ. ಹೌದು, ಟಿವಿಎಸ್ ಕಂಪೆನಿ ಕೂಡ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
3/ 12
ಟಿವಿಎಸ್ ಮೋಟಾರ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಅನ್ನು ರಸ್ತೆಗಿಳಿಸಿದೆ. ನೂತನ ಸ್ಕೂಟರ್ನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಹಾಗೆಯೇ ಬುಕ್ಕಿಂಗ್ ಕೂಡ ಓಪನ್ ಆಗಿದೆ.
4/ 12
"ಟಿವಿಎಸ್ ಮೋಟಾರ್ ಗ್ರಾಹಕರ ಬಯಕೆ ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸತನವನ್ನು ನೀಡುತ್ತಿದೆ. ನಮ್ಮ ಮೊದಲ ಎಲೆಕ್ಟ್ರಿಕ್ ವಾಹನವು 'ಗ್ರೀನ್ ಅ್ಯಂಡ್ ಕನೆಕ್ಟೆಡ್ ಯೂತ್' ಅನ್ನು ಮನಸ್ಸಿನಲ್ಲಿಟ್ಟು ನಿರ್ಮಿಸಲಾಗಿದೆ" ಎಂದು ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಹೇಳಿದ್ದಾರೆ. IQubeನ ವಿಶೇಷತೆಗಳೇನು?
5/ 12
ಬ್ಯಾಟರಿ: ನೂತನ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ 4.5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ. ಇದು ಕೇವಲ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.
6/ 12
ಸ್ಪೀಡ್: ಐಕ್ಯೂಬ್ ಸ್ಕೂಟರ್ 4.2 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆಯುತ್ತದೆ. ಹಾಗೆಯೇ ಇದರ ಟಾಪ್ ಸ್ಪೀಡ್ ಗಂಟೆಗೆ 78 ಕಿ.ಮೀ.
7/ 12
ಸ್ಮಾರ್ಟ್ ಕನೆಕ್ಟ್: ಈ ಇ-ಸ್ಕೂಟರ್ ಸಂಪೂರ್ಣ ವಿದ್ಯುತ್ ಚಾಲಿತ ವಾಹನ. ಇದರ ಮುಖ್ಯ ವಿಶೇಷತೆ ಎಂದರೆ ಸ್ಪೀಡೋಮೀಟರ್ ಬದಲಾಗಿ ಸ್ಮಾರ್ಟ್ ಕನೆಕ್ಟ್ ಡಿಸ್ಪ್ಲೇ ನೀಡಲಾಗಿರುವುದು.
8/ 12
ಇದು ಅಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಂನಿಂದ ಕಾರ್ಯಾಚರಿಸಲಿದೆ. ಈ ಪ್ರೊಜೆಕ್ಷನ್ ಸಿಸ್ಟಂ ಟಚ್ ಸ್ಕ್ರೀನ್ ಆಗಿದ್ದು, ಇಲ್ಲಿ ನೀವು ನೆವಿಗೇಷನ್, ಗೂಗಲ್ ಮ್ಯಾಪ್, ಚಾರ್ಜರ್ ಸೇರಿದಂತೆ ಅಂಡಾಯ್ಡ್ ಮೊಬೈಲ್ನಲ್ಲಿ ಸಿಗುವ ಹಲವು ಮೋಡ್ಗಳನ್ನು ಬಳಸಿಕೊಳ್ಳಬಹುದು.
9/ 12
ಎಂಜಿನ್ ಸಾಮರ್ಥ್ಯ: ಈ ಸ್ಕೂಟರ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು ಇದು 6 ಬಿಎಚ್ಪಿ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
10/ 12
ಸ್ಕೂಟರ್ ತೂಕ: ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ನ 118 ಕೆ.ಜಿ. ತೂಕ ಹೊಂದಿದ್ದು, ಇದರ ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಮತ್ತು ಸಾಫ್ಟ್ವೇರ್ ಅನ್ನು ಭಾರತದಿಂದ ಅಭಿವೃದ್ಧಿಪಡಿಸಲಾಗಿದೆ.
11/ 12
ಮೈಲೇಜ್: ಟಿವಿಎಸ್ ಐಕ್ಯೂಬ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ 75 ಕಿ.ಮೀ ಮೈಲೇಜ್ ನೀಡುತ್ತದೆ.
12/ 12
ಬೆಲೆ: ನೂತನ ಎಲೆಕ್ಟ್ರಿಕ್ ಸ್ಕೂಟರ್ನ ಆನ್ ರೋಡ್ ಬೆಲೆ 1,15000 ರೂ. ಈ ಸ್ಕೂಟರ್ ಅನ್ನು ಇಎಂಐ ಮೇಲೆ ಖರೀದಿಸುವ ಅವಕಾಶ ಕೂಡ ಇದ್ದು, ಬುಕ್ಕಿಂಗ್ ಚಾರ್ಜ್ 5 ಸಾವಿರ ರೂ. ನಿಗದಿಪಡಿಸಲಾಗಿದೆ.