Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

ಇತ್ತೀಚೆಗೆ ಆಡಿಯೋ ಡಿವೈಸ್​ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಯಾರ ಕಿವ ನೋಡಿದ್ರೂ ಇಯರ್​ಬಡ್ಸ್​, ಹೆಡ್​ಫೋನ್ಸ್​, ಇಯರ್​ಫೋನ್​ಗಳು ಇದ್ದೇ ಇದೆ. ಈ ಮಧ್ಯೆ ಜನಪ್ರಿಯ ಟೆಕ್​ ಕಂಪೆನಿಯಾಗಿರುವ ಟ್ರೂಕ್​ ಕಂಪೆನಿ ಮಾರುಕಟ್ಟೆಗೆ ಅಗ್ಗದ ಬೆಲೆಯಲ್ಲಿ ಇಯರ್​ಬಡ್ಸ್​ಗಳನ್ನು ಬಿಡುಗಡೆ ಮಾಡಿದೆ.

First published:

  • 18

    MORE
    GALLERIES

  • 28

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಟ್ರೂಕ್‌ ಸಂಸ್ಥೆಯು ನೂತನವಾಗಿ ಪರಿಚಯಿಸಿರುವ ಬಡ್ಸ್ A1 TWS ಡಿವೈಸ್‌ ಆಗಿದೆ. ಇದು ಸುಮಾರು 2,000ರೂಪಾಯಿ ಬೆಲೆಯ ಒಳಗಿನ ಇತರ ಬ್ರ್ಯಾಂಡ್‌ ಡಿವೈಸ್‌ಗಳಿಗೆ ನೇರ ಪೈಪೋಟಿ ನೀಡುವ ಲಕ್ಷಣಗಳನ್ನು ಸೂಚಿಸಿದೆ.

    MORE
    GALLERIES

  • 38

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಟ್ರೂಕ್​ ಎ1 ಫೀಚರ್ಸ್​: ನೂತನ ಟ್ರೂಕ್ ಬಡ್ಸ್ A1 ಡಿವೈಸ್‌ ಇನ್-ಇಯರ್ ಶೈಲಿಯ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳು ಆಗಿವೆ. ಇದು ಅಂಡಾಕಾರದ-ಆಕಾರದ ವಿನ್ಯಾಸದ ಕ್ಲಾಸಿಕ್ ಕೇಸ್ ವಿನ್ಯಾಸದೊಂದಿಗೆ ಬರುತ್ತದೆ. ಜೊತೆಗೆ 30dB ವರೆಗಿನ ಹೈಬ್ರಿಡ್ ವಾಯ್ಸ್​ ಕ್ಯಾನ್ಸ(ANC) ಬೆಂಬಲವು ಮುಖ್ಯ ಹೈಲೈಟ್ ಆಗಿದೆ.

    MORE
    GALLERIES

  • 48

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಹಾಗೆಯೇ ಈ ಆಡಿಯೋ ಟ್ರೂಕ್ ಬಡ್ಸ್ A1 ಡಿವೈಸ್‌ ಆಂಬಿಯೆಂಟ್ ಟ್ರಾನ್ಸ್ಪರೆನ್ಸಿ ಮೋಡ್ ಅಗತ್ಯ ಇದ್ದಾಗ ಶಬ್ದಗಳನ್ನು ಅನುಮತಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಕ್ವಾಡ್-ಮೈಕ್ ಸೆಟಪ್‌ ಸಹ ಇದ್ದು, ಸ್ಪಷ್ಟವಾದ ಕರೆಗಳಿಗಾಗಿ ENC ಸೌಲಭ್ಯ ಅನ್ನು ಬೆಂಬಲಿಸುತ್ತದೆ.

    MORE
    GALLERIES

  • 58

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಟ್ರೂಕ್ ಬಡ್ಸ್ A1 ಡಿವೈಸ್‌ ಇಯರ್‌ಬಡ್‌ಗಳು 10mm ರಿಯಲ್ ಟೈಟಾನಿಯಂ ಸ್ಪೀಕರ್ ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಸಾಧನವು ಡೈನಾಮಿಕ್ ಆಡಿಯೊ, ಬಾಸ್ ಬೂಸ್ಟ್ ಮೋಡ್, ಮೂವೀ ಮೋಡ್ ಇದರೊಂದಿಗೆ ಡೀಫಾಲ್ಟ್ ಬ್ಯಾಲೆನ್ಸ್‌ಡ್ ಮೋಡ್‌ ಅಂತಹ ನಾಲ್ಕು EQ ಮೋಡ್‌ಗಳಿಗೆ ಬೆಂಬಲವನ್ನು ಹೊಂದಿವೆ.

    MORE
    GALLERIES

  • 68

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಟ್ರೂಕ್ ಬಡ್ಸ್ A1 ಡಿವೈಸ್‌ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಇತರೆ ಡಿವೈಸ್​ಗಳಿಗೆ ಬೇಗನೆ ಪೇರಿಂಗ್​ ಸಹ ಆಗುತ್ತದೆ. ಕಡಿಮೆ ಲ್ಯಾಗ್‌ಗಳಿಗಾಗಿ 50ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಕೂಡ ಇದೆ. ಇಯರ್‌ಬಡ್‌ಗಳು 48 ಗಂಟೆಗಳವರೆಗೆ ಒಟ್ಟು ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ.

    MORE
    GALLERIES

  • 78

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಬ್ಯಾಟರಿ ಫೀಚರ್ಸ್​: ಹಾಗೆಯೇ ಟ್ರೂಕ್ ಬಡ್ಸ್ A1 ಡಿವೈಸ್‌ ಯುಎಸ್​​ಬಿ ಟೈಪ್​ ಸಿ ಆಧಾರಿತ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದ್ದು, ಕೇವಲ ಇದು 10 ನಿಮಿಷಗಳಷ್ಟು ಚಾರ್ಜ್​ ಮಾಡಿದ್ರೆ ಈ ಸಾಧನವು ಸುಮಾರು 10 ಗಂಟೆಗಳವರೆಗೆ ಪ್ಲೇ ಬ್ಯಾಕ್‌ ಸಮಯವನ್ನು ನೀಡುತ್ತದೆ.

    MORE
    GALLERIES

  • 88

    Earbuds: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು

    ಬೆಲೆ ಮತ್ತು ಲಭ್ಯತೆ: ಟ್ರೂಕ್ ಬಡ್ಸ್ A1 ಡಿವೈಸ್‌ ರಿಟೇಲ್‌ ಸ್ಟೋರ್‌ ಬೆಲೆಯು 1,499 ರೂಪಾಯಿ ಆಗಿದೆ. ಆದರೆ ಗ್ರಾಹಕರಿಗೆ ಆರಂಭಿಕವಾಗಿ 1,299 ರೂಪಾಯಿಯ ಬಜೆಟ್​ ಬೆಲೆಯಲ್ಲಿ ಲಭ್ಯವಿರುತ್ತದೆ. ಇದೇ ಮಾರ್ಚ್ 3 ರಿಂದ ಖರೀದಿಗೆ ಈ ಡಿವೈಸ್​ ಲಭ್ಯವಾಗಲಿದೆ. ಖರೀದಿದಾರರು ಅಮೆಜಾನ್‌ ಇಂಡಿಯಾ ಮೂಲಕ ಪ್ರೀ ಆರ್ಡರ್ ಮಾಡಬಹುದಾಗಿದ್ದು, ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

    MORE
    GALLERIES