ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೊಸ ವರ್ಷದ ಆರಂಭದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
2/ 10
ಕೇಬಲ್ ದರ ಹಾಗೂ ನಿಯಮಗಳಲ್ಲಿ ಕೊಂಚ ಬದಲಾವಣೆಯನ್ನು ತಂದಿದ್ದು. ಗ್ರಾಹಕರಿಗೆ ಮಾಸಿಕ ದರದ ಹೊರೆ ತಪ್ಪಸಿದೆ.
3/ 10
ಇದೇ ಮಾರ್ಚ್ 1 ರಿಂದ ಕೇಬಲ್ ದರವನ್ನು ಇಳಿಕೆ ಮಾಡುವತ್ತ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ಒದಗಿಸಿದೆ. ಕೇಬಲ್ ಹಾಗೂ ಡಿಟಿಎಚ್ ದರಗಳು ಜಾಸ್ತಿ ಎಂಬ ದೂರಿನ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
4/ 10
ಹೊಸ ನಿಯಮಗಳ ಅನ್ವಯ ಕಡಿಮೆ ಬೆಲೆಗೆ ಹೆಚ್ಚಿನ ಚಾನೆಲ್ಗಳನ್ನು ವೀಕ್ಷಿಸಬಹುದಾಗಿದೆ. ಮಾತ್ರವಲ್ಲದೆ, ಅಗ್ಗದ ದರದಲ್ಲಿ ಚಾನೆಲ್ ವೀಕ್ಷಿಸಬಹುದಾಗಿದೆ.
5/ 10
ಟ್ರಾಯ್ ಹೊಸ ನಿಯಮ ಹೀಗಿದೆ..
6/ 10
ಟ್ರಾಯ್ ಹೊಸ ನಿಯಮದ ಪ್ರಕಾರ ಮಾಸಿಕವಾಗಿ ಪಾವತಿ ಮಾಡಬೇಕಾದ ಎನ್ಸಿಎಫ್(ನೆಟ್ವರರ್ಕ್ ಕೆಪಾಸಿಟಿ ಫ್ರೀ) ಶುಲ್ಕವನ್ನು 130ಕ್ಕೆ ಸೀಮಿತಗೊಳಿಸಿದೆ. ಹಾಗಾಗಿ ಗ್ರಾಹಕರಿಗೆ ಕೇಬಲ್ ಆಪರೇಟರ್ಗಳು 150 ರೂ.ಗೆ 200 ಉಚಿತ ಚಾನೆಲ್ಗಳನ್ನು ಕೊಡಬೇಕಿದೆ. ಆದರೀಗ ಕೇಬಲ್ ವೀಕ್ಷಕರು 100 ಚಾನೆಲ್ಗಳನ್ನು ಮಾತ್ರ ವೀಕ್ಷಿಸುತ್ತಿದ್ದಾರೆ
7/ 10
ಕೇಂದ್ರ ಸರ್ಕಾರ ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಪಟ್ಟಿ ಮಾಡಿರುವ 200 ಚಾನೆಲ್ ಎನ್ಸಿಎಫ್ ವ್ಯಾಪ್ತಿಗೆ ಸೇರುವುದಿಲ್ಲ. ಈ ಚಾನೆಲ್ ಹೊರತುಪಡಿಸಿ 150 ರೂ.ಗೆ ಕೇಬಲ್ ಆಪರೇಟರ್ಗಳು 200 ಉಚಿತ ಚಾನೆಲ್ ನೀಡಬೇಕು.
8/ 10
ಪ್ರಸಾರಕರು ಕ್ಯಾರಿಯೇಜ್ ಶುಲ್ಕದ ರೂಪದಲ್ಲಿ ಡಿಪಿಒಗಳಿಗೆ ನೀಡಬೇಕಿದ್ದ ಶುಲ್ಕದ ಮೇಲೆ ಗರಿಷ್ಠ 4 ಲಕ್ಷ ರೂ. ಮಿತಿಯನ್ನು ಹೇರಲಾಗಿದೆ.
9/ 10
ಬೇರೆ ಚಾನೆಲ್ಗಳನ್ನು ಗ್ರಾಹಕರು ಪ್ರತ್ಯೇಕವಾಗಿ ಪಡೆಯಲು ಬಯಸಿದರೆ ಸೇವಾ ಕಂಪನಿಗಳು ಪ್ರತಿ ಚಾನೆಲ್ಗೆ ವಿಧಿಸುವ ಶುಲ್ಕವು ಗುಚ್ಛದಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್ಗಳ ಸರಾಸರಿ ಶುಲ್ಕವು, ಎಲ್ಲಾ ಚಾನೆಲ್ಗಳ ಸರಾಸರಿ ಶುಲ್ಕದ ಒಂದೂವರೆ ಪಟ್ಟಿಗಿಂತ ಹೆಚ್ಚಾಗಿರಬಾರದು.
10/ 10
ಜನವರಿ 15ರೊಳಗೆ ಕೇಬಲ್ ಆಪರೇಟರ್ ಮತ್ತು ಸೇವಾ ಕಂಪನಿಗಳು ಅಗತ್ಯ ಬದಲಾವಣೆ ಮಾಡಿ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.