ರೆನಾಲ್ಟ್ ಕ್ವಿಡ್: 2021ರಲ್ಲಿ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದ ಕಾರುಗಳಲ್ಲಿ ರೆನಾಲ್ಟ್ ಕ್ವಿಡ್ ಸಹ ಒಂದು. ಭಾರತದ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ದರದ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆನಾಲ್ಟ್ ಕ್ವಿಡ್ 1.0 ಲೀಟರ್ ಎಂಜಿನ್ ಹೊಂದಿದೆ. ಇಷ್ಟೇ ಅಲ್ಲ BS6 ಎಮಿಶನ್ ಎಂಜಿನ್ ಹೊಂದಿದೆ.ಅಲ್ಲದೆ. ಏರ್‌ಬ್ಯಾಗ್, ಸ್ವೀಡ್ ಅಲರ್ಟ್, ರೇರ್ ಕ್ಯಾಮಾರ ಸ್ಟಾಂಡರ್ಡ್ ಮಾಡಲಾಗಿದೆ.ಇದರ ಎಕ್ಸ್ ಶೋ ರೂಂ ಬೆಲೆ 4.11 ಲಕ್ಷ ರೂಪಾಯಿ
ಟಾಟಾ ಪಂಚ್: ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಟಾಟಾ ಮೋಟರ್ಸ್ ಕಂಪನಿಯ ಮೈಕ್ರೋ ಎಸ್‌ಯುವಿ ಪಂಚ್ ಕಳೆದ ವರ್ಷ ಮಾರುಕಟ್ಟೆಗೆ ಬಂದ ಕಾರುಗಳಲ್ಲಿ ಒಂದು.. ಈ ಕಾರಿನ ಬೆಲೆ 5.49 ಲಕ್ಷ ರೂಪಾಯಿಂದ ಆರಂಭವಾಗುತ್ತೆ. ಟಾಟಾ ಪಂಚ್ ಕಾರು 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಎಂಎಟಿ ಆಯ್ಕೆ ಹೊಂದಿದೆ.
ಮಾರುತಿ ಸುಜುಕಿ ಸ್ಪಿಫ್ಟ್ ಫೇಸ್‌ಲಿಫ್ಟ್: ದೇಶಿಯ ಉತ್ಪಾದನಾ ಕಾರು ಸಂಸ್ಥೆಯಾದ ಮಾರುತಿ ಸುಜುಕಿ ಕಂಪೆನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಸಿದ್ಧಪಡಿಸುತ್ತದೆ. ಈ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಮಾರುತಿ ಸುಜುಕಿ ಸ್ಪಿಫ್ಟ್ ಫೇಸ್‌ಲಿಫ್ಟ್ ಕಾರಿನ 5.73 ಲಕ್ಷ ರೂಪಾಯಿಯಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ 2021 ಕಾರು, 88 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಡ್ಯುಯೆಲ್ ಜೆಟ್ VVT ಪೆಟ್ರೋಲ್ ಪವರ್‌ಪ್ಲಾಂಟ್ ಹೊಂದಿದೆ
ಸುಜುಕಿ ಸೆಲೆರಿಯೋ:ನ್ಯೂಜನರೇಶನ್ ಮಾರುತಿ ಸುಜುಕಿ ಸೆಲೆರಿಯೋ ಪ್ರಾರಂಭಿಸಿದಾಗಿನಿಂದ, ತನ್ನ ವಿಶಿಷ್ಟ ಶೈಲಿ ಮತ್ತು ಆಟೋ ಗೇರ್ ಶಿಫ್ಟ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿದೆ. ಈ ಮಾರುತಿ ಸುಜುಕಿ ಸೆಲೆರಿಯೋ ಬೆಲೆ 4.99 ಲಕ್ಷ ರೂಪಾಯಿಗಳಾಗಿದ್ದು, K10C 1.0 ಲೀಟರ್, 3 ಸಿಲಿಂಡರ್ ಡ್ಯುಯೆಲ್ ಜೆಟ್ ಎಂಜಿನ್ ಹಾಗೂ ಡ್ಯುಯೆಲ್ VVT ಹೊಂದಿದೆ. 66 bhp ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.