ಸ್ಮಾರ್ಟ್‌ಫೋನ್ ತಯಾರಕರು ಇತ್ತೀಚೆಗೆ ರೂ. 7000 ರ ಅಡಿಯಲ್ಲಿ ಯಾವುದೇ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿಲ್ಲ. ಆದಾಗ್ಯೂ, ಈ ಬೆಲೆ ಶ್ರೇಣಿಯಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ಹತ್ತಾರು ಬಜೆಟ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಇವುಗಳಲ್ಲಿ Xiaomi Redmi A1, Samsung Galaxy A03 Core ಮತ್ತು realme C30 ನಂತಹ ಫೋನ್‌ಗಳು ಸೇರಿವೆ. ನೀವೂ ಸಹ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ನಲ್ಲಿದ್ದರೆ ಇಲ್ಲಿದೆ ನೋಡಿ 7 ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು.
ಶಿಯೋಮಿ ರೆಡ್ಮಿ ಎ1: ಈ ಫೋನ್ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.52-ಇಂಚಿನ HD+ ಸ್ಕ್ರ್ಯಾಚ್-ನಿರೋಧಕ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಹೆಲಿಯೋ A22 ಕ್ವಾಡ್ ಕೋರ್ ಪ್ರೊಸೆಸರ್ ನಿಂದ ಚಾಲಿತವಾಗಿದೆ. ಹಾಗೆಯೇ ಫೋನ್ ಆಂಡ್ರಾಯ್ಡ್ v12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 8MP ಡ್ಯುಯಲ್ AI ಪ್ರಾಥಮಿಕ ಕ್ಯಾಮೆರಾ ಮತ್ತು 5MP ಫ್ರಂಟ್ ಸ್ನ್ಯಾಪರ್ ಅನ್ನು ಹೊಂದಿದೆ. ಈ ಫೋನಿನ ಬೆಲೆ ಕೇವಲ 5,899 ರೂಪಾಯಿ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ03 ಕೋರ್: ಈ ಫೋನ್ 6.5-ಇಂಚಿನ PLS LCD ಡಿಸ್ಪ್ಲೇ ಜೊತೆಗೆ 720 x 1600 ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು ಯುನಿಸೋಕ್ SC9863A ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ 8 MP ಪ್ರಾಥಮಿಕ ಕ್ಯಾಮೆರಾ, 5 MP ಸೆಲ್ಫಿ ಕ್ಯಾಮೆರಾ ಮತ್ತು 5000 mAh ತೆಗೆಯಲಾಗದ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ಕೇವಲ 6,999 ರೂ.
ರಿಯಲ್ಮಿ ಸಿ30: ರಿಯಲ್ಮಿ ಕಂಪೆನಿಯ ಈ ಸ್ಮಾರ್ಟ್‌ಫೋನ್ 6.5-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು Unisoc T612 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Android 11 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.ರಿಯಲ್ಮಿ ಸಿ30 ಫೋನ್ 2 GB ರ್‍ಯಾಮ್ ಮತ್ತು 32 GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ, ಈ ಸ್ಟೋರೇಜ್ ಅನ್ನು 1 TB ವರೆಗೆ ವಿಸ್ತರಿಸಬಹುದು. ಹಾಗೆಯೇ ಈ ಫೋನ್ 8MP ಡ್ಯುಯಲ್ AI ಪ್ರಾಥಮಿಕ ಕ್ಯಾಮೆರಾ, 5MP ಫ್ರಂಟ್ ಸ್ನ್ಯಾಪರ್ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ರಿಯಲ್ಮಿ ಸಿ30 ಫೋನ್ ಬೆಲೆ ಕೇವಲ 6,749 ರೂಪಾಯಿ.
ರಿಯಲ್ಮಿ ಸಿ11: ರಿಯಲ್ಮಿ ಕಂಪೆನಿಯ ಈ ಸ್ಮಾರ್ಟ್‌ಫೋನ್ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.5-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಇದು 2 ಜಿಬಿ ರ್‍ಯಾಮ್ ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ ಬರುತ್ತದೆ. ಇದನ್ನು 256ಜಿಬಿವರೆಗೆ ವಿಸ್ತರಿಸಬಹುದು. ಈ ಫೋನ್ Unisoc SC9863A octa-core ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇನ್ನು ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಇದು 8MP AI ಕ್ಯಾಮೆರಾ, 5MP AI ಮುಂಭಾಗದ ಸ್ನ್ಯಾಪರ್ ಅನ್ನು ಹೊಂದಿದೆ. ಈ ರಿಯಲ್ಮಿ ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ರಿಯಲ್ಮಿ ಸಿ11 ಫೋನ್ ಅಮೆಜಾನ್ನಲ್ಲಿ ಕೇವಲ 6990 ರೂಪಾಯಿಗೆ ಲಭ್ಯವಿದೆ. ಆದರೆ ರಿಯಲ್ಮಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನ್ ಬೆಲೆ 7499 ರೂಪಾಯಿ ಆಗಿದೆ.