Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಮೊಬೈಲ್​ಗಳು ಬಿಡುಗಡೆಯಾಗುತ್ತಾ ಇರುತ್ತದೆ. ಅದ್ರಲ್ಲೂ ಉತ್ತಮ ಫೀಚರ್ಸ್​ ಹೊಂದಿದ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳಿಗೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ. ಈ ಸಾಲಿನಲ್ಲಿ ಟೆಕ್ನೋ ಕಂಪನಿಯ ಸ್ಮಾರ್ಟ್​ಫೋನ್​ಗಳು ಬಹಳಷ್ಟು ಬೇಡಿಕೆಯಲ್ಲಿದ್ದವು. ಇದೀಗ ಕಂಪನಿ ಈ ಬಾರಿ ಟೆಕ್ನೋ ಪೋವಾ 4 ಎಂಬ ಸ್ಮಾರ್ಟ್​ಫೋನ್ ಅನ್ನು ಪರಿಚಯಿಸಲು ರೆಡಿಯಾಗಿದೆ. ​

First published:

  • 18

    MORE
    GALLERIES

  • 28

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಟೆಕ್ನೋ ಕಂಪೆನಿ ಶೀಘ್ರದಲ್ಲೇ ಭಾರತದಲ್ಲಿ ಹೊಸ ಟೆಕ್ನೋ ಪೊವಾ 4 ಬಿಡುಗಡೆ ಮಾಡಲಿದೆ ಎಂದು ಬಹಳಷ್ಟು ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಇನ್ನು ಬಹಿರಂಗವಾಗಿಲ್ಲವಾದರೂ, ಶೀಘ್ರದಲ್ಲೇ ಲಾಂಚ್‌ ಆಗೋದು ಮಾತ್ರ ಗ್ಯಾರಂಟಿ ಇದೆ. ಇದರ ನಡುವೆ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಫೀಚರ್ಸ್​ನ ಕೆಲವೊಂದು ವಿವರಗಳನ್ನು ಟೆಕ್ನೋ ಕಂಪನಿ ಬಹಿರಂಗಪಡಿಸಿದೆ.

    MORE
    GALLERIES

  • 38

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಟೆಕ್ನೋ ಪೋವಾ 4 ಸ್ಮಾರ್ಟ್‌ಫೋನ್‌ 6.66-ಇಂಚಿನ ಅಮೋಲ್ಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 720 x 1640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ನೀಡುತ್ತದೆ. ಇದು 90Hz ರಿಫ್ರೆಶ್‌ ರೇಟ್‌ ಅನ್ನು ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ.

    MORE
    GALLERIES

  • 48

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಟೆಕ್ನೋ ಪೋವಾ 4 ಸ್ಮಾರ್ಟ್‌ಫೋನ್‌ 5nm ಮೀಡಿಯಾಟೆಕ್‌ ಹಿಲಿಯೋ G99 ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 12-ಆಧಾರಿತ HiOSನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಗೇಮಿಂಗ್​ಗಾಗಿ ಸಂಬಂಧಿಸಿ ಪ್ಯಾಂಥರ್‌ ಗೇಮ್‌ ಇಂಜಿನ್‌ 2.0 ಮತ್ತು ಹೈಪರ್‌ ಇಂಜಿನ್‌ 2.0 ಲೈಟ್‌ ಅನ್ನು ಬೆಂಬಲಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ನಲ್​ ಸ್ಟೋರೇಜ್‌ ಅನ್ನು ಒಳಗೊಂಡಿದೆ.

    MORE
    GALLERIES

  • 58

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಟೆಕ್ನೋ ಪೋವಾ 4 ಸ್ಮಾರ್ಟ್‌ಫೋನ್‌ 50ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕಂಪನಿ ಇದರಲ್ಲಿ ನೀಡಿದೆ. ಇನ್ನು ಈ ಸ್ಮಾರ್ಟ್​ಫೋನ್​ನ ಕ್ಯಾಮೆರಾ ಡಿಜಿಟಲ್‌ ಜೂಮ್‌, ಆಟೋ ಫ್ಲ್ಯಾಶ್‌, ಫೇಸ್‌ ಡಿಟೆಕ್ಷನ್‌, ಟಚ್‌ ಟು ಫೋಕಸ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಮದು ಹೇಳಲಾಗಿದೆ.

    MORE
    GALLERIES

  • 68

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಇನ್ನು ಈ ಸ್ಮಾರ್ಟ್​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 4G ನೆಟ್​​ವರ್ಕ್​​​ ಸಾಮರ್ಥ್ಯ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, NFC, USB ಟೈಪ್-C, 3.5mm ಹೆಡ್‌ಫೋನ್ ಜ್ಯಾಕ್ ಮತ್ತು DTS ಸೌಂಡ್ ಅನ್ನು ಹೊಂದಿದೆ.

    MORE
    GALLERIES

  • 78

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಇನ್ನು ಟೆಕ್ನೋ ಪೋವಾ 4 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 18W ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದ್ದು ಈ ಬ್ಯಾಟರಿಯು ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಸುಮಾರು 10 ಗಂಟೆಗಳ ಕಾಲ ಬಳಸಬಹುದಾದ ವಿಶೇಷ ಫೀಚರ್ಸ್​ ಅನ್ನು ಹೊಂದಿರಲಿದೆ.

    MORE
    GALLERIES

  • 88

    Smartphone: ಹತ್ತೇ ನಿಮಿಷದಲ್ಲಿ ಫುಲ್ ಚಾರ್ಜ್​​ ಆಗುತ್ತೆ ಈ ಸ್ಮಾರ್ಟ್​ಫೋನ್​ನಲ್ಲಿ!

    ಭಾರತದಲ್ಲಿ ಟೆಕ್ನೋ ಪೋವಾ 4 ಸ್ಮಾರ್ಟ್‌ಫೋನ್‌ 20,000ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವನ್ನು ನೀಡಲಿದೆ ಎಂಬ ಸುದ್ದಿಯಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಬಣ್ಣಗಳಲ್ಲಿ ಬರಲಿದೆ. ಇದರ ಲಾಂಚ್‌ ಡೇಟ್‌ ಏನಿದೆ? ಇದರ ಸೇಲ್‌ ಯಾವಾಗ  ಆರಂಭವಾಗುತ್ತದೆ ಎಂಬ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾದ್ಯತೆಯಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಪ್ರಸಿದ್ಧ ಇ ಕಾಮರ್ಸ್​ ವೆಬ್​ಸೈಟ್​ ಆಗಿರುವ ಅಮೆಜಾನ್‌ ಮೂಲಕ ಮಾರಾಟವಾಗುವುದು ಗ್ಯಾರಂಟಿ ಎಂದು ಹೇಳಲಾಗಿದೆ.

    MORE
    GALLERIES