ವೇಗದ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ಸ್ನೇಹಿತರೊಂದಿಗೆ, ಫ್ಯಾಮಿಲಿಯವರೊಂದಿಗೆ ಸಂಪರ್ಕಿಸಲು ಅತ್ಯುತ್ತಮ ಮಾಧ್ಯಮವಾಗಿದೆ. ಆದರೆ ನೀವು ಮಾಡುವ ಸಣ್ಣ ತಪ್ಪು ಕೂಡ ನಿಮಗೆ ಸಾಕಷ್ಟು ನಷ್ಟವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು.. ನಿಮ್ಮ ಸಣ್ಣ ತಪ್ಪಿನಿಂದಾಗಿ ಇತರರು ನಿಮ್ಮ ವಾಟ್ಸಾಪ್ ಚಾಟ್ ಅನ್ನು ಓದಬಹುದು. ಹ್ಯಾಕ್ ಆಗುವ ಸಾಧ್ಯತೆಗಳು ಸಹ ಹೆಚ್ಚಾಗಬಹುದು. ಹಾಗಿದ್ರೆ ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ಏನು ಮಾಡ್ಬೇಕು ಎಂಬುದಕ್ಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್.
ಥರ್ಡ್ ಪಾರ್ಟಿ ಆ್ಯಪ್: ನೀವು ವಾಟ್ಸಾಪ್ ಗಾಗಿ ಯಾವುದಾದರೂ ಥರ್ಡ್ ಪಾರ್ಟಿ ಆ್ಯಪ್ ಬಳಸುತ್ತಿದ್ದೀರಾ? ನೀವು ಅದನ್ನು ಬಳಸುತ್ತಿದ್ದರೆ, ತಕ್ಷಣವೇ ಆ ಅಪ್ಲಿಕೇಶನ್ ಬಳಸುವುದನ್ನು ನಿಲ್ಲಿಸಿ. ಏಕೆಂದರೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳು ನಿಮ್ಮ ವೈಯಕ್ತಿಕ ಡೇಟಾವನ್ನು ಹ್ಯಾಕ್ ಮಾಡಬಹುದು. ಇದರಿಂದ ನಿಮ್ಮ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಹಲವು ಸಾಧ್ಯತೆಗಳಿವೆ.
ಅದೂ ಅಲ್ಲದೆ, ಇನ್ನು ಕೆಲವರು ವಾಟ್ಸಾಪ್ ನಲ್ಲಿ ಸ್ಟಿಕ್ಕರ್, ಜಿಫ್, ಎಮೋಜಿಗಳಿಗೆ ಥರ್ಡ್ ಪಾರ್ಟಿ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಈ ಅಪ್ಲಿಕೇಶನ್‌ಗಳು ನಿಮ್ಮ ಡೇಟಾವನ್ನು ಕದಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ಕಂಪೆನಿಯ ಅಧಿಕೃತ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ. ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ತಪ್ಪಿಸಿ.
ವಾಟ್ಸಾಪ್ ಬಳಕೆದಾರರಿಗಾಗಿ ವೆಬ್ನಲ್ಲಿ ಲಿಂಕ್ಡ್ ಡಿವೈಸ್ ಎಂಬ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ನೀವು ನಿಮ್ಮ ಮೊಬೈಲ್‌ನಿಂದ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಅನ್ನು ಯೂಸ್ ಮಾಡ್ಬಹುದು. ಈ ವೈಶಿಷ್ಟ್ಯದ ಸಹಾಯದಿಂದ ನೀವು ಮೊಬೈಲ್ ಮತ್ತು ಕಂಪ್ಯೂಟರ್/ಲ್ಯಾಪ್‌ಟಾಪ್‌ನಲ್ಲಿ ಏಕಕಾಲದಲ್ಲಿ ವಾಟ್ಸಾಪ್ ಅನ್ನು ಬಳಸಬಹುದು. ಆದರೆ ಇಲ್ಲಿಯೂ ಕೆಲವೊಮ್ಮೆ ಹ್ಯಾಕ್ ಆಗುವ ಸಾಧ್ಯತೆಗಳಿರುತ್ತದೆ.