Huawei ನ 4G ಸ್ಮಾರ್ಟ್ಫೋನ್ Huawei P50 Pro ಬಕಳಕೆದಾರರಿಗಾಗಿ ಈ ಕವರ್ ಅನ್ನು ಪರಿಚಯಿಸಿದೆ. 2021 ರಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಅಂದಹಾಗೆಯೇ ಈ ಸ್ಮಾರ್ಟ್ಫೋನ್ 5ಜಿ ನೆಟ್ವರ್ಕ್ ಬೆಂಬಲವನ್ನು ಹೊಂದಿಲ್ಲ. ಇದನ್ನು ಪರಿಗಣಿಸಿ, ಹೊಸ ಕವರ್ ಅನ್ನು ವಿನ್ಯಾಸಗೊಳಿಸಿದೆ ಮತ್ತು ಬಿಡುಗಡೆ ಮಾಡಿದೆ. ಅದರ ಸಹಾಯದಿಂದ ಬಳಕೆದಾರರು ಈ ಫೋನ್ನಲ್ಲಿ 5G ನೆಟ್ವರ್ಕ್ ಸಿಗಲಿದೆ.
Huawei P50 Pro ನ ಈ ಹೊಸ ಕವರ್ ಅನ್ನು Soyelink ತಯಾರಿಸಿದೆ. ಈ ಸ್ಮಾರ್ಟ್ಫೋನ್ ಕೇಸ್ನಲ್ಲಿ 5G ಮೋಡೆಮ್ ಜೊತೆಗೆ ಇ-ಸಿಮ್ ಚಿಪ್ಸೆಟ್ ಅನ್ನು ಎಂಬೆಡ್ ಮಾಡಲಾಗಿದೆ. ಈ ರೀತಿಯಾಗಿ ಫೋನ್ನಲ್ಲಿ ಈ ಕವರ್ ಅನ್ನು ಹಾಕಿದಾಗ, ಫೋನ್ನ ಮುಖ್ಯ ಸಿಮ್ ಕಾರ್ಡ್ ಮತ್ತು ಕವರ್ನ ಇ-ಸಿಮ್ ನೆಟ್ವರ್ಕ್ ಸಿಗ್ನಲ್ ಸ್ವೀಕರಿಸುತ್ತದೆ ಮತ್ತು 4G ಸ್ಮಾರ್ಟ್ಫೋನ್ 5G ಫೋನ್ ಆಗುತ್ತದೆ.