ಪ್ರಮುಖ ಟೆಕ್ ಬ್ರಾಂಡ್ ಇನ್ಫಿನಿಕ್ಸ್ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಜನಪ್ರಿಯತೆಯಲ್ಲಿದೆ. ಈ ಕಂಪೆನಿಯು ಸುಧಾರಿತ ತಂತ್ರಜ್ಞಾನ ಮತ್ತು ಅದ್ಭುತ ವಿನ್ಯಾಸಗಳೊಂದಿಗೆ ಫೋನ್‌ಗಳನ್ನು ತಯಾರಿಸುತ್ತದೆ. ಇತ್ತೀಚೆಗೆ, ಕಂಪೆನಿಯು 260W ವೇಗದ ಚಾರ್ಜಿಂಗ್ ಹೊಂದಿರುವ ವಿಶೇಷ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಯಾವುದೇ ಮೊಬೈಲ್ ಕಂಪನಿಯು ಇಷ್ಟು ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ಬಿಡುಗಡೆ ಮಾಡಿಲ್ಲ.
ಕಂಪನಿಯು ಕೆಲವು ದಿನಗಳ ಹಿಂದೆ 260W ಚಾರ್ಜಿಂಗ್ ಅಡಾಪ್ಟರ್‌ನೊಂದಿಗೆ 4400mAh ಬ್ಯಾಟರಿಯನ್ನು ಬಳಸಿಕೊಂಡು ತನ್ನ ಚಾರ್ಜಿಂಗ್ ಟೆಕ್ನಾಲಜಿಯನ್ನು ಪ್ರದರ್ಶಿಸಿತು. ಆ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, 4400mAh ಬ್ಯಾಟರಿಯು 8 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ಆಗುತ್ತದೆ. ಅಂದರೆ ಮುಂಬರುವ GT 10 Pro ಮೊಬೈಲ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ ಹತ್ತು ನಿಮಿಷಗಳು ಸಾಕು.